ಕರಾವಳಿ

ಮೊಬೈಲ್ ಬ್ಯಾಕ್ ಕವರ್ ಬಗ್ಗೆಗಿನ ಸ್ಫೋಟಕ ಸುದ್ದಿ ತಿಳಿದುಕೊಳ್ಳಿ.

Pinterest LinkedIn Tumblr

ಮೊಬೈಲ್ ಈಗ ಬಹಳ ಅಗತ್ಯ ವಸ್ತು, ಮನೆಯ ಕರೆಂಟ್ ಬಿಲ್ ಇಂದ ದೂರದ ಊರಿನ ಸ್ನೇಹಿತರಿಗೂ ಹಣವನ್ನು ವರ್ಗಾವಣೆ ಮಾಡಲು ನಾವು ಮೊಬೈಲ್ ನಲ್ಲಿ ಬಳಸುತ್ತೇವೆ, ಮನೆಗೆ ಊಟ ಬರಬೇಕಾದರೆ ಮೊಬೈಲ್, ದೇವರ ಕೋಣೆಯಲ್ಲಿ ಪೂಜೆ ಮಾಡಲು ಅರ್ಚಕರು ಬೇಕಾದರೆ ಮೊಬೈಲ್, ಕಾರುಗಳು ಬೇಕಾದರೆ ಮೊಬೈಲ್, ಹೀಗೆ ಪ್ರತಿಯೊಂದು ಅಂಶಕ್ಕೂ ನಾವು ಮೊಬೈಲನ್ನು ಬಹಳಷ್ಟು ಅವಲಂಬಿಸಿದ್ದೇವೆ ಇಂತಹ ಅವಲಂಬಿತ ಮೊಬೈಲ್ ಗಳು ಇತ್ತೀಚಿನ ಕೆಲವು ವರ್ಷಗಳಿಂದ ಬ್ಲಾಸ್ಟ್ ಆಗಲು ಶುರುವಾಗಿದೆ, ಈ ಮೊಬೈಲ್ ಸ್ಪೋಟ ಮಾಡುವುದರ ಬಗ್ಗೆ ಸಂಶೋಧನೆ ಒಂದು ನಡೆದಿದ್ದು ಮೊಬೈಲ್ ಸ್ಪೋಟ ವಾಗುವ ಕಾರಣವನ್ನು ಹೀಗೆ ಹೇಳಿದೆ.

ಸಂಶೋಧನೆಯ ಪ್ರಕಾರ ಮೊಟ್ಟ ಮೊದಲ ಕಾರಣ ಏನು ಎಂದರೆ ಅದು ನೀವು ಬಳಸುವ ಮೊಬೈಲ್ ಬ್ಯಾಕ್ ಕವರ್, ಆಶ್ಚರ್ಯ ಪಡುವಂತಹ ಅವಶ್ಯಕತೆ ಏನು ಇಲ್ಲ ನೀವು ಮೊಬೈಲಿಗೆ ಬ್ಯಾಕ್ ಕವರ್ ಅನ್ನು ನಿಮ್ಮ ಮೊಬೈಲ್ ಸೇವ್ ಆಗಿರಲು ಬಳಸುತ್ತೇವೆ ಆದರೆ ಅದೇ ನಿಮ್ಮ ಮೊಬೈಲ್ ಸ್ಫೋಟಿಸಲು ಮುಖ್ಯ ಕಾರಣವೆಂದು ವಿಜ್ಞಾನಿಗಳು ತಿಳಿಸಿದ್ದಾರೆ ಅದು ಹೇಗೆ ಅಂತ ತಿಳಿಸುತ್ತೇವೆ ಮುಂದೆ ಓದಿ.

ಮೊಬೈಲ್ ಅತಿ ಹೆಚ್ಚು ಬಳಕೆಯಾದಾಗ, ಫೋರ್ ಜಿ ನೆಟ್ವರ್ಕ್ ಅನ್ನು ಬಳಕೆ ಮಾಡಿದಾಗ ಅಥವಾ ದೊಡ್ಡ ಗಾತ್ರದ ಗೇಮ್ ಗಳನ್ನು ಮೊಬೈಲಲ್ಲಿ ಆಡುವಾಗ ಮೊಬೈಲ್ ನಲ್ಲಿ ಪ್ರೊಸೆಸರ್ ಉಪಯೋಗ ಹೆಚ್ಚಿರುತ್ತದೆ ಅಂತಹ ಸಮಯದಲ್ಲಿ ನಿಮ್ಮ ಮೊಬೈಲ್ ಬಿಸಿ ಆಗುವುದು, ನೀವೇನಾದರೂ ದೊಡ್ಡ ಬ್ಯಾಕ್ ಕವರ್ ನೀವು ಹಾಕಿದ್ದಲ್ಲಿ ಮೊಬೈಲ್ ನ ಉಷ್ಣತೆ ಹೊರಗೆ ಹೋಗದೆ ಒಳಗೆ ಉಳಿದುಬಿಡುತ್ತದೆ ಇದರಿಂದ ಒತ್ತಡ ಹೆಚ್ಚಾಗಿ ನಿಮ್ಮ ಮೊಬೈಲ್ ಬ್ಯಾಟರಿ ಗಳು ಸ್ಫೋಟವಾಗುತ್ತದೆ.

ಇನ್ನು ಎರಡನೆಯ ಕಾರಣ ನಿಮ್ಮ ಮೊಬೈಲ್ ಹೆಚ್ಚು ಬಳಸಿದರೆ ನಂತರ ಅದು ಬಿಸಿಯಾಗುತ್ತದೆ ಆ ಸಮಯದಲ್ಲಿ ಯಾವುದೇ ಕಾರಣಕ್ಕೂ ಚಾರ್ಜ್ ಮಾಡಬೇಡಿ, ಹೀಗೆ ಮಾಡಿದರೆ ನಿಮ್ಮ ಮೊಬೈಲ್ ಬ್ಯಾಟರಿ ಸಮಸ್ಯೆಗಳು ಬರುವುದಲ್ಲದೆ ಮೊಬೈಲ್ ಸಿಡಿಯುವ ಅವಕಾಶಗಳು ಬಹಳ ಹೆಚ್ಚು, ಮೊಬೈಲ್ ಬ್ಯಾಟರಿ ಇಪ್ಪತ್ತು ಪರ್ಸೆಂಟ್ ಗಿಂತ ಕಡಿಮೆ ಬರಲು ಬಿಡಬಾರದು ಹಾಗೂ ಯಾವಾಗಲೂ ಅತಿ ಹೆಚ್ಚು ಚಾರ್ಜ್ ಸಹ ಮಾಡಬಾರದು, ಈ ರೀತಿ ಸಾವಕಾಶದಿಂದ ಮೊಬೈಲ್ ಅನ್ನು ಬಳಸಿದರೆ ನಿಮ್ಮ ಮೊಬೈಲ್ ಸ್ಫೋಟಿಸುವುದಿಲ್ಲ

Comments are closed.