ಮನೋರಂಜನೆ

ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಭಾರೀ ಸುದ್ದಿ ಮಾಡುತ್ತಿರುವ ” ಉರಿ ದಿ ಸರ್ಜಿಕಲ್ ಸ್ಟ್ರೈಕ್ ” !

Pinterest LinkedIn Tumblr

ಜನವರಿ 11 ರಂದು ಬಿಡುಗಡೆಯಾದ ಬಹುನಿರೀಕ್ಷಿತ ಬಾಲಿವುಡ್ ಚಿತ್ರಗಳ ಪೈಕಿ ವಿಕಿ ಕೌಶಲ್ ಅಭಿಯನದ ” ಉರಿ ದಿ ಸರ್ಜಿಕಲ್ ಸ್ಟ್ರೈಕ್ ” ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ.

ಈ ಚಿತ್ರ ಬಿಡುಗಡೆಯಾದ ಮೊದಲ ದಿನವೇ 8. 20 ಕೋಟಿ ರೂ.ಎರಡನೇ ದಿನ 12.43 ಕೋಟಿ ರೂ. ಗಳಿಸಿದ್ದು, ಎರಡು ದಿನಗಳಲ್ಲೇ 20 ಕೋಟಿ ರೂ. ಬಾಚಿದೆ.

2016 ಸೆಪ್ಟೆಂಬರ್ 29 ರಲ್ಲಿ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೈನಿಕರು ನಡೆಸಿದ ಸರ್ಜಿಕಲ್ ಸ್ಟೈಕ್ ಕಥಾ ಹಂದರ ಈ ಸಿನಿಮಾದಾಗಿದೆ.ವಿಕ್ಕಿ ಕೌಶಲ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರವೊಂದರಲ್ಲೇ ಇದು ಅತ್ಯಧಿಕ ಮೊತ್ತ ಎನಿಸಿಕೊಂಡಿದೆ.

ಮತ್ತೊಂದೆಡೆ ಅನುಪಮ್‌ ಖೇರ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ”ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್” ಮೊದಲ ದಿನ ಸುಮಾರು 3.50 ಕೋಟಿ ರೂ. ಗಳಿಸಿದೆ. ಚಿತ್ರಕ್ಕಿದ್ದ ನಿರೀಕ್ಷೆಯಷ್ಟು ಉತ್ತಮ ಗಳಿಕೆ ಮಾಡದಿದ್ದರೂ ಮನಮೋಹನ್‌ ಸಿಂಗ್ ಪಾತ್ರ ಮಾಡಿರುವ ಅನುಪಮ್ ಖೇರ್ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಮನಮೋಹನ್‌ ಸಿಂಗ್ ಪ್ರಧಾನಿಯಾಗಿದ್ದಾಗ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬರು ಪುಸ್ತಕವನ್ನಾಧರಿಸಿ ”ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್” ಚಿತ್ರವನ್ನು ನಿರ್ದೇಶಿಸಲಾಗಿದೆ. ವಿವಾದಾತ್ಮಕ ಕಥೆಯನ್ನು ಹೊಂದಿರುವುದರಿಂದ ಈ ಚಿತ್ರ ಹಿನ್ನೆಡೆ ಅನುಭವಿಸಿದೆ ಎಂದು ಮೂಲಗಳು ತಿಳಿಸಿವೆ.

”ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್” ಚಿತ್ರದಲ್ಲಿ ಅಕ್ಷಯ್‌ ಖನ್ನಾ ಸಂಜಯ್ ಬರು ಪಾತ್ರವನ್ನು ಮಾಡಿದ್ದು, ಸುಸೇನ್ ಬೆರ್ನೆಟ್ ಸೋನಿಯಾ ಗಾಂಧಿಯಾಗಿ, ಆಹಾನಾ ಕುಮ್ರಾ ಪ್ರಿಯಾಂಕಾ ಗಾಂಧಿಯಾಗಿ ಹಾಗೂ ಅರ್ಜುನ್ ಮಾಥುರ್ ರಾಹುಲ್‌ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ.

ಶನಿವಾರ ದಿ ಸರ್ಜಿಕಲ್ ಸ್ಟ್ರೈಕ್ ಉತ್ತಮ ಗಳಿಕೆ ಮಾಡಿದ್ದು, ಮೂರು ದಿನದಲ್ಲಿ ಕಲೆಕ್ಷನ್ ಚೆನ್ನಾಗಿ ಮಾಡಿದೆ ಎಂದು ಚಿತ್ರೋದ್ಯಮ ವಿಶ್ಲೇಷಕ ತರಣ್ ಆದರ್ಶ್ ತಿಳಿಸಿದ್ದಾರೆ.

Comments are closed.