ಕರಾವಳಿ

ನಿಮ್ಮ 100ನೇ ಹುಟ್ಟು ಹಬ್ಬ ಆಚರಿಸಬೇಕಾ.. ಹಾಗಾದರೆ ಈ ರೀತಿ ಮಾಡಿ..!

Pinterest LinkedIn Tumblr

ಮನುಷ್ಯನ ಸಾಮಾನ್ಯ ಆಯಸ್ಸು ನೂರು ವರುಷ ಆದರೆ ಇಂದಿನ ಜೀವನ ಶೈಲಿ, ಪರಿಸರ ಮಾಲಿನ್ಯ, ಪೌಷ್ಟಿಕಾಂಶ ಕೊರತೆ ಹೀಗೆ ಹತ್ತು ಹಲವು ಕಾರಣಗಳಿಂದ ಮಾನವ ಆಯಸ್ಸು ಶೇಕಡ 40% ಕಡಿಮೆಯಾಗಿ ಅರವತ್ತನೇ ವಯಸ್ಸಿನಲ್ಲೇ ಸಾವಿರ ಕಾಯಿಲೆ ಬಂದು ಸಾಯುತ್ತಿದ್ದಾನೆ, ಆದ್ದರಿಂದ ಇಂದು ನಾವು ನಿಮಗೆ ದೈನಂದಿನ ಜೀವನದಲ್ಲಿ ನಿಮ್ಮ ಆಯಸ್ಸನ್ನು ಹೆಚ್ಚು ಮಾಡುವ ಹಲವು ವಿಚಾರಗಳನ್ನು ಹಾಗು ಆಯುರ್ವೇದದ ಉಪದೇಶಗಳನ್ನ ತಿಳಿಸುತ್ತೇವೆ, ಆಯುರ್ವೇದದೊಂದಿಗೆ ಇದೆ ಮಾನವ ಆರೋಗ್ಯದ ಗುಟ್ಟು, ಸಂಪೂರ್ಣವಾಗಿ ಒಮ್ಮೆ ಓದಿ ಹಾಗು ನಿಮ್ಮ ಅನಿಸಿಕೆ ತಿಳಿಸಿ.

1. ಸಸ್ಯಾಹಾರ ಮಾನವನ ಸರಿಯಾದ ಆಹಾರ.

2. ನಿತ್ಯ ವ್ಯಾಯಾಮ ಆಹಾರದಷ್ಟೇ ಅಗತ್ಯ, ಓಡುವುದು ಬೇಡ, ನೆಡೆಯುವುದು ಉತ್ತಮ.

3. ಧೂಮಪಾನ ಆರೋಗ್ಯಕ್ಕೆ ಬಹುದೊಡ್ಡ ವೈರಿ, ದೂರವಿಡಿ.

4. ಮದ್ಯಪಾನವು ದೇಹಕ್ಕೆ ವೈರಿಯೇ, ನೀವು ಕಡಿಮೆ ಕುಡಿದರು ಅಥವಾ ಹೆಚ್ಚೇ ಕುಡಿದರು ನಿಮ್ಮ ದೇಹಕ್ಕೆ ಅಷ್ಟೇ ಪರಿಣಾಮ ಬೀರುತ್ತದೆ.

5. ಹಣ್ಣು ತಿನ್ನುವುದು ತುಂಬಾ ಅಗತ್ಯ, ಸೊಪ್ಪು, ತರಕಾರಿ ಸೇವನೆ ಆರೋಗ್ಯಕರ.

6. ಮಾಡುವ ಕೆಲಸದಲ್ಲಿ ಪ್ರೀತಿ ಸಂತೋಷವಿರಲಿ, ಇಲ್ಲದಿದ್ದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ.

7. ಸುಖದ ನಿದ್ರೆ ಇರಲಿ, ತುಂಬಾ ನಿದ್ರೆ ಅಗತ್ಯವಿಲ್ಲ, ಗಡಿಯಾರ ನೋಡಿ ನಿದ್ರೆ ಮಾಡಿ, ನಿದ್ರಗೆ ಮಾತ್ರೆ ಹಾಗು ಮಧ್ಯಪಾನ ಮಾಡುತ್ತಿದ್ದಾರೆ ಮೊದಲು ಬಿಡಿ.

8. ಶ್ರಮ ಪಟ್ಟು ಕೆಲಸ ಮಾಡಿದರೆ ತಿಂದಿರುವುದು ಕರಗುತ್ತದೆ.

9. ಲೈಂಗಿಕ ಕ್ರಿಯೆ ಆರೋಗ್ಯಕ್ಕೆ ಒಳ್ಳೆಯದು ಆದರೆ ಮದುವೆ ಕಟ್ಟು ಪಾಡಿನೊಳಗೆ ಇರಲಿ.

1೦. ಪರರನ್ನು ಪ್ರೀತಿಯಿಂದ ಕಾಣುವುದು, ಗೌರವಿಸುವುದು ಆರೋಗ್ಯದ ಗುಟ್ಟು.

11. ತುಂಬಾ ನೀರು ಕುಡಿಯಿರಿ, ಹೆಚ್ಚು ನೀರು ಕುಡಿದರೆ ಮೂತ್ರ ಬಣ್ಣವಿರುವುದಿಲ್ಲ, ಇದು ಆರೋಗ್ಯದ ಲಕ್ಷಣ.

12. ಹೆಚ್ಚು ಉಪ್ಪು ಕಾರ ಒಳ್ಳೆಯದಲ್ಲ, ಕೊಬ್ಬಿನ ಅಂಶ ೩೦% ರಷ್ಟಿರಬೇಕು ಹೆಚ್ಚಾದರೆ ಅಪಾಯ ಆದರೆ ಎಣ್ಣೆಯಲ್ಲಿ ಕರಿಯ ಆಹಾರ ವರ್ಜ್ಯ.

Comments are closed.