ಕರಾವಳಿ

ಜ.25ರೊಳಗೆ ಮರಳು ಸಮಸ್ಯೆ ಪರಿಹಾರವಾಗದಿದ್ರೆ ಉಡುಪಿ ಜಿಲ್ಲಾ ಬಂದ್

Pinterest LinkedIn Tumblr

ಉಡುಪಿ: ಜ.25ರ ಒಳಗೆ ಮರಳು ಸಮಸ್ಯೆ ಪರಿಹಾರ ಆಗದಿದ್ದಲ್ಲಿ ಅಹೋರಾತ್ರಿ ಧರಣಿ ಮತ್ತು ಉಡುಪಿ ಜಿಲ್ಲಾ ಬಂದ್‌ ನಡೆಸಲು ಬ್ರಹ್ಮಾವರದ ಧರ್ಮಾವರ ಆಡಿಟೋರಿಯಂನಲ್ಲಿ ನಡೆದ ಜನಪ್ರತಿನಿಧಿಗಳ ಮತ್ತು ವಿವಿಧ ಸಂಘಟನೆಗಳ ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಪಕ್ಷಾತೀತವಾಗಿ ನಡೆದ ಈ ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು ನಿರ್ಣಯಕ್ಕೂ ಮುನ್ನ ಲಾರಿ ಯೂನಿಯನ್‌, ಎಂಜಿನಿಯರ್ಸ್‌ ಅಸೋಸಿಯೇಶನ್‌, ಮರಳು ಪರವಾನಗಿದಾರರು, ಸಾರ್ವಜನಿಕರು ಬೇಡಿಕೆ, ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್‌, ಜನಾರ್ದನ ತೋನ್ಸೆ, ಸುಪ್ರಸಾದ್‌ ಶೆಟ್ಟಿ, ಸಬ್ಲಾಡಿ ಮಂಜಯ್ಯ ಶೆಟ್ಟಿ, ವಿಕಾಸ್‌ ಹೆಗ್ಡೆ, ಅಬ್ದುಲ್‌ ಖಾದರ್‌ ಕುಂಜಾಲು, ಜೆರ್ರಿ ವಿನ್ಸೆಂಟ್‌ ಡಯಾಸ್‌, ನಿತ್ಯಾನಂದ ಶೆಟ್ಟಿ, ಎಸ್‌. ನಾರಾಯಣ್‌, ಗೋಪಾಲ್‌ ಭಟ್‌, ಪ್ರದೀಪ್‌ ಶೆಟ್ಟಿ, ಸತೀಶ್‌ ಪೂಜಾರಿ, ವಿವಿಧ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

Comments are closed.