ಕರಾವಳಿ

ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆ ತೊಂಡೆಕಾಯಿಂದ ನಿವಾರಣೆ

Pinterest LinkedIn Tumblr

ಹೌದು ಈ ತೊಂಡೆಕಾಯಿಯಲ್ಲಿ ಹಲವಾರು ಆರೋಗ್ಯಕಾರಿ ಗುಣಗಳಿವೆ ಅವು ಯಾವುವೆಂಬದು ಇಲ್ಲಿದೆ ನೋಡಿ..

ತೊಂಡೆಕಾಯಿಯ ಹಸಿ ಹಣ್ಣನ್ನು ದಿನಕ್ಕೆ 2 ರಂತೆ ಸೇವಿಸಿದರೆ ಒಣಗಿರುವ ಚರ್ಮ ಮೃದುವಾಗುತ್ತದೆ ಹಾಗೂ ಮಧುಮೇಹ ಗುಣವಾಗುತ್ತದೆ, ದೇಹದಲ್ಲಿ ಹುಳು ಕಚ್ಚಿ ಗಾಯ, ಗಂದೆ ಅಥವಾ ತುರಿಕೆಯಾಗಿದ್ದರೆ ತೊಂಡೆಕಾಯಿಯ ಎಲೆಗಳನ್ನು ಜಜ್ಜಿ ಹಚ್ಚಿದರೆ ಗಾಯ, ಗಂದೆ, ತುರಿಕೆ ಕಡಿಮೆಯಾಗುತ್ತದೆ.

ತೊಂಡೆಕಾಯಿ ಎಲೆಯ 5 ಚಮಚ ರಸಕ್ಕೆ 1 ಲೋಟ ನೀರು ಹಾಕಿ ಕುದಿಸಿ ಅರ್ಧಕ್ಕೆ ಇಳಿಸಿ ನಂತರ ಸೇವಿಸಿದರೆ ದೇಹದ ಉಷ್ಣತೆ ಮತ್ತು ಕಣ್ಣುರಿ ಕಡಿಮೆಯಾಗುತ್ತದೆ, ಒಂದು ಲೋಟ ತೊಂಡೆಕಾಯಿ ಎಲೆಯ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜತೆ ಕುದಿಸಿ ಆ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚಿದರೆ ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.

ಅತಿಯಾಗಿ ಭೇದಿಯಾಗುತ್ತಿದ್ದರೆ 2 ಚಮಚ ತೊಂಡೆಕಾಯಿ ಎಲೆಯ ರಸವನ್ನು ಅರ್ಧ ಬಟ್ಟಲು ಮೊಸರಿನ ಜತೆ ದಿನಕ್ಕೆ 2 ಬಾರಿ ಸೇವಿಸಿದರೆ ಭೇದಿ ನಿಲ್ಲುತ್ತದೆ, ಎಳೆಯ ತೊಂಡೆ ಹಣ್ಣನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

Comments are closed.