ಕರಾವಳಿ

ಎಲ್ಲರಲ್ಲೂ ಇದು ಒಂದು ಕಡಿಮೆಯಾದರೆ, ಉತ್ತಮ ಆರೋಗ್ಯ ನಿಮ್ಮದಾಗುತ್ತೆ…!

Pinterest LinkedIn Tumblr

ಪುರುಷರಿಗೆ ಹೋಲಿಕೆ ಮಾಡಿದರೆ ಸಿಟ್ಟು ಹೆಚ್ಚಾಗಿರೋದು ಮಹಿಳೆಯರಿಗೆ. ಇವರು ಹೆಚ್ಚಾಗಿ ತಮ್ಮನ್ನು ತಾವು ಕಂಟ್ರೋಲ್ ಮಾಡಲು, ಎಲ್ಲಾ ವಿಷಯಗಳಲ್ಲೂ ಪ್ರಯತ್ನಿಸುತ್ತಾರೆ ಆದರೆ ಕೋಪದಿಂದಾಗಿ ಎಲ್ಲಾ ಸಂಬಂಧಗಳು ಅಳಿಸಿ ಹೋಗುತ್ತವೆ, ಕೋಪ ಬಂದಾಗ ಏನು ಮಾಡುವುದು ಎಂದು ಜನರಿಗೆ ಗೊತ್ತೇ ಆಗೋದಿಲ್ಲ, ಬದಲಾಗಿ ಅದನ್ನು ಇನ್ನೊಬ್ಬರ ಮೇಲೆ ತೋರಿಸಿ ಬಿಡುತ್ತಾರೆ, ಇದರಿಂದ ಸಂಬಂಧದ ಜೊತೆಗೆ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ.

ಕೋಪ ಹೆಚ್ಚಾದರೆ ಬ್ಲಡ್ ಪ್ರಶರ್ ಹೆಚ್ಚುತ್ತದೆ, ಹೃದಯ ಬಡಿತ ಹೆಚ್ಚಾಗುತ್ತದೆ, ವೈದ್ಯರ ಅನುಸಾರ ನ್ಯೂಟ್ರಿಯಂಟ್ಸ್, ಮೆಗ್ನಿಶಿಯಂ, ವಿಟಮಿನ್ ಸಿ ಮತ್ತು ಬಿ ಕಡಿಮೆ ಇರುವ ಜನರಿಗೆ ಹೆಚ್ಚು ಕೋಪ ಬರುತ್ತದೆ, ಈ ಕೋಪವನ್ನು ಕಡಿಮೆಗೊಳಿಸಬೇಕು ಎಂದಾದರೆ ನೀವು ಕೆಲವೊಂದಿಷ್ಟು ಆಹಾರಗಳನ್ನು ಸೇವಿಸಬೇಕು, ಹೌದು ಇಲ್ಲಿ ನೀಡಿರುವ ಆಹಾರಗಳನ್ನು ನೀವು ಸೇವಿಸಿಇದರೆ ಕೋಪ ಕಡಿಮೆಯಾಗುವ ಸಾಧ್ಯತೆ ಇದೆ.

ಬಾದಾಮಿ : ನಿಮ್ಮ ಮೆದುಳಿನ ನರಗಳು ಸರಿಯಾಗಿ ಕಾರ್ಯ ನಿರ್ವಹಿಸಲು ನೆರವು ನೀಡುತ್ತದೆ, ಆದುದರಿಂದ ಕೋಪ ಬಂದಾಗ ಬಾದಾಮಿ ಸೇವನೆ ಮಾಡಿದರೆ ಕೋಪ ಕಡಿಮೆಯಾಗುತ್ತದೆ.

ಎಳನೀರು : ನಿಮಗೆ ಕೋಪ ಬಂದಾಗ ಬ್ಲಡ್ ಶುಗರ್ ಲೇವಲ್ ತುಂಬಾ ಹೆಚ್ಚಾಗುತ್ತದೆ, ಇಂತಹ ಸಂದರ್ಭದಲ್ಲಿ ಎಳನೀರು ಸೇವನೆ ಮಾಡಿದರೆ ಕೋಪ ಬೇಗನೆ ಕಡಿಮೆಯಾಗುತ್ತದೆ, ಇದಲ್ಲದೆ ತೆಂಗಿನಕಾಯಿಯನ್ನು ಹಾಗೆ ಸೇವನೆ ಮಾಡುವುದಿರಿಂದಲೂ ಕೋಪ ಕಡಿಮೆಯಾಗುತ್ತದೆ.

ಹಸಿರು ತರಕಾರಿ : ಹಸಿರು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂ ಇರುತ್ತದೆ, ಇದು ಮಾಂಸಖಂಡಗಳಿಗೆ ಆರಾಮ ನೀಡುತ್ತದೆ, ಅಲ್ಲದೇ ಮೆದುಳಿನ ಎಕ್ಸೈಟ್ ಮೆಂಟ್ ಅನ್ನು ಕೂಡ ಇದು ಕಡಿಮೆ ಮಾಡುತ್ತದೆ, ನಿಮಗೆ ಕೋಪ ಬಂದ ಸಂದರ್ಭದಲ್ಲಿ ಹಸಿರು ತರಕಾರಿ ಸೇವಿಸಿದರೆ ಕೋಪ ಕಡಿಮೆಯಾಗುತ್ತದೆ.

Comments are closed.