ಕರಾವಳಿ

ಮಾನಸಿಕ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಯ್ದುಕೊಳ್ಳಲು ಇದು ಸಹಕಾರಿ

Pinterest LinkedIn Tumblr

ಖರ್ಜೂರ ಯಾರಿಗೆ ಇಷ್ಟವಿಲ್ಲ ಹೇಳಿ ಎಲ್ಲರಿಗು ಅದು ಪ್ರಿಯ ಆದರೂ ಯಾರು ಕರ್ಜೂರವನ್ನ ಪ್ರತಿದಿನ ತಿನ್ನುವ ಅಭ್ಯಾಸ ಮಾಡಿಕೊಳ್ಳುವುದಿಲ್ಲ ಕಾರಣ ಖರ್ಜೂರದ ಆರೋಗ್ಯ ಪ್ರಯೋಜನ ಗೊತ್ತಿರುವುದಿಲ್ಲ, ಇಂದು ನಾವು ಪ್ರತಿದಿನ ಖರ್ಜೂರ ಸೇವಿಸುವುದ ಉಪಯೋಗ ತಿಳಿಸುತ್ತೇವೆ ಮುಂದೆ ಓದಿ.

ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಸಹ ಇದು ನೆರವಾಗುತ್ತದೆ, ಇದರಲ್ಲಿ ವಿಟಾಮಿನ್‌ ಬಿ6 ಅಂಶ ಇರುವುದರಿಂದ ಮೆದುಳು ಶಾರ್ಪ್‌ ಆಗಿ ಕೆಲಸ ಮಾಡಲು, ಜ್ಞಾಪಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.

ಒಣ ಖರ್ಜೂರದಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ, ಹಾಗಾಗಿ ಇದು ಎಲುಬು ಮತ್ತು ಹಲ್ಲು ಗಟ್ಟಿಗೊಳಿಸಲು ಉತ್ತಮ ಅಷ್ಟೇ ಅಲ್ಲದೆ, ಪ್ರತಿ ನಿತ್ಯ ಇದನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಕೊರತೆಯಿಂದ ಬರುವ ಆರ್ಥರೈಟಿಸ್ ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು.

ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ ಇದರಲ್ಲಿ ನ್ಯಾಚುರಲ್‌ ಶುಗರ್‌, ಗ್ಲೂಕೋಸ್‌, ಫ್ರುಕ್ಟೋಸ್‌ ಮತ್ತು ಸುಕ್ರೋಸ್‌ ಇರುತ್ತದೆ, ಇದರಿಂದ ದೇಹಕ್ಕೆ ಬೇಕಾದ ಶಕ್ತಿ ಸಮ ಪ್ರಮಾಣದಲ್ಲಿ ಸಿಗುತ್ತದೆ.

ಕ್ರೀಡಾಳುಗಳು, ದೈಹಿಕವಾಗಿ ಶ್ರಮ ವಹಿಸುವವರು ಇದನ್ನು ಸೇವಿಸುವುದು ಒಳ್ಳೆಯದು ಇದರಲ್ಲಿ ನೈಸರ್ಗಿಕ ಸಕ್ಕರೆಯಿದ್ದು, ದೇಹಕ್ಕೆ ಶಕ್ತಿ ಒದಗಿಸುತ್ತದೆ.

ಖರ್ಜೂರವನ್ನು ತುಪ್ಪದಲ್ಲಿ ನೆನಸಿ ನಿತ್ಯವೂ ಸೇವಿಸಿದರೆ ದೇಹಬಲ ಹೆಚ್ಚುತ್ತದೆ ನರಗಳಿಗೂ ಶಕ್ತಿ ಬರುತ್ತದೆ.

ಇದನ್ನು ಪ್ರತಿ ದಿನ ಸೇವನೆ ಮಾಡುತ್ತ ಬಂದರೆ ಹಾರ್ಟ್‌ ಸ್ಟ್ರೋಕ್‌ ಉಂಟಾಗುವ ಸಂದರ್ಭ ತುಂಬಾನೆ ಕಡಿಮೆ ಕಡಿಮೆ ಇರುತ್ತದೆ, ಇಮ್ಯೂನಿಟಿ ಪವರ್‌ ಹೆಚ್ಚಿಸಿ, ದೇಹದ ಎಲುಬುಗಳು ಸ್ಟ್ರಾಂಗ್‌ ಆಗುವಂತೆ ಮಾಡುತ್ತದೆ.

Comments are closed.