ಕರಾವಳಿ

ಜ.13 : ಮಂಗಳೂರು ಕಂಬಳ ಸಮಿತಿಯ ಅಶ್ರಯದಲ್ಲಿ “ಮಂಗಳೂರು ಕಂಬಳ”

Pinterest LinkedIn Tumblr

ಮಂಗಳೂರು, ಜನವರಿ. 4: ಮಂಗಳೂರು ಕಂಬಳ ಸಮಿತಿಯ ಅಶ್ರಯದಲ್ಲಿ ನಗರದ ಬಂಗ್ರ ಕೂಳೂರು ಗೋಲ್ಡ್ ಪಿಂಚ್ ಸಿಟಿಯಲ್ಲಿ ಜ.13ರಂದು ಮಂಗಳೂರು ಕಂಬಳ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದರು.

ನಗರದ ಗೋಲ್ಡ್ ಪಿಂಚ್ ಹೊಟೇಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಳದಲ್ಲಿ ಲೇಸರ್ ಬೀಮ್‌ ಬಳಕೆಯೊಂದಿಗೆ ಹೈಟೆಕ್‌ ತಂತ್ರಜ್ಞಾನದ ಹೊನಲು ಬೆಳಕಿನ ಕಂಬಳ ಜ.13ರಂದು ಆರಂಭಗೊಂಡು 14ರಂದು ಸಮಾರೋಪಗೊಳ್ಳಲಿದೆ ಎಂದು ಹೇಳಿದರು.

ಕಂಬಳ ಸಮಿತಿಯ ಸಲಹೆಗಾರ ಮೂಡಬಿದ್ರೆ ಶಾಸಕ ಉಮಾನಾಥ್ ಕೊಟ್ಯಾನ್ ಕಂಬಳದ ಬಗೆಗಿನ ಪೂರಕ ಮಾಹಿತಿಗಳನ್ನು ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಪದಾಧಿಕಾರಿಗಳಾದ ನಿತೀಶ್ ಶೆಟ್ಟಿ, ಸುಜೀತ್ ಪ್ರತಾಪ್, ಸಚಿನ್ ಶೆಟ್ಟಿ, ಜೋಯಲಸ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

Comments are closed.