ಕರಾವಳಿ

ಬಾಲಕರಿಗೆ ಲೈಂಗಿಕ ದೌರ್ಜನ್ಯ ಕೇಸ್; ಚಂದ್ರ ಹೆಮ್ಮಾಡಿ ನ್ಯಾಯಾಂಗ ಬಂಧನ ವಿಸ್ತರಣೆ

Pinterest LinkedIn Tumblr

ಕುಂದಾಪುರ: ಶಾಲಾ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿಗೆ ಜ.11ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಜಿಲ್ಲಾ ಸತ್ರ ಮತ್ತು ಪೋಕೊ ವಿಶೇಷ ನ್ಯಾಯಾಲಯ ಸೋಮವಾರ ಆದೇಶ ನೀಡಿದೆ.

ಹಿರಿಯಡಕ ಸಬ್‌ ಜೈಲಿನಲ್ಲಿದ್ದ ಆರೋಪಿಯನ್ನು ಸೋಮವಾರ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಲಾಗಿದ್ದು ಆರೋಪಿಗೆ 20 ಪ್ರಕರಣಗಳಲ್ಲಿ ಬಾಡಿ ವಾರಂಟ್‌ ವಿಸ್ತರಣೆ ಹಾಗೂ ನ. 10ರಂದು ಬೈಂದೂರಿನಲ್ಲಿ ದಾಖಲಾದ ಮೊದಲ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನ ವಿಸ್ತರಿಸಲು ಪ್ರಕರಣದ ತನಿಖಾಧಿಕಾರಿಯು ಸರಕಾರಿ ಅಭಿಯೋಜಕರ ಮೂಲಕ ನ್ಯಾಯಾಧೀಶರಾದ ಸಿ.ಎಂ. ಜೋಶಿ ಅವರಿಗೆ ಲಿಖಿತ ಮನವಿ ಸಲ್ಲಿಸಿದರು. ಇದನ್ನು ಪುರಸ್ಕರಿಸಿ ಜ.11ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಪೋಕ್ಸೋ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದಿಸಿದರು. ಆರೋಪಿ ಪರವಾಗಿ ರವಿಕಿರಣ್‌ ಮುಡೇಶ್ವರ ಉಪಸ್ಥಿತರಿದ್ದರು.

Comments are closed.