ಕರಾವಳಿ

ಗಂಗೊಳ್ಳಿಯಲ್ಲಿ ರಸ್ತೆ ಅಪಘಾತ: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

Pinterest LinkedIn Tumblr

ಕುಂದಾಪುರ: ಲಾರಿಯೊಂದು ಬೈಕಿಗೆ ಹಿಂಬದಿಯಿಂದ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಯುವಕನೋರ್ವ ಮೃತಪಟ್ಟ ಘಟನೆ ಕುಂದಾಪುರದ ಗಂಗೊಳ್ಳಿಯಲ್ಲಿ ನಡೆದಿದೆ. ಗುರುಪ್ರಸಾದ್ ಪೂಜಾರಿ (28) ಮೃತಪಟ್ಟ ದುರ್ದೈವಿ.

ಗಂಗೊಳ್ಳಿ ದಾಕಹಿತ್ಲು‌ ನಿವಾಸಿಯಾದ ಗುರುಪ್ರಸಾದ್ ಪೂಜಾರಿ ಬೈಕಿನಲ್ಲಿ ಗಂಗೊಳ್ಳಿಗೆ ತೆರಳುತ್ತಿದ್ದಾಗ ಇಲ್ಲಿನ ಜಾಮಿಯಾ ಮೊಹಲ್ಲದ ಬಳಿ ಹಿಂದಿನಿಂದ ಬೈಕಿಗೆ ಲಾರಿ ಢಿಕ್ಕಿಯಾಗಿದ್ದು ಢಿಕ್ಕಿ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಗುರುಪ್ರಸಾದ್ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣವೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ಗುರುಪ್ರಸಾದ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗಷ್ಟೆ ರಜೆಯಲ್ಲಿ ಊರಿಗೆ ಬಂದಿದ್ದರು ಎನ್ನಲಾಗಿದೆ.

Comments are closed.