ಕರಾವಳಿ

ಹೊಟೇಲ್ ದಿ ಓಶಿಯನ್ ಪರ್ಲ್‌ನಲ್ಲಿ ನ್ಯೂ ಇಯರ್ ಪಾರ್ಟಿ : ಡೈಮಂಡ್ ನೆಕ್ಲೆಸ್ ಸೆಟ್, ಚಿನ್ನದ ನಾಣ್ಯ ಸೇರಿದಂತೆ ಹಲವು ಬಹುಮಾನಗಳ ಮಹಾಪೂರ

Pinterest LinkedIn Tumblr

ಮಂಗಳೂರು : .ಮಂಗಳೂರಿನ ಹೊಟೇಲ್ ದಿ ಓಶಿಯನ್ ಪರ್ಲ್ ಹೊಸ ವರ್ಷದ ಸ್ವಾಗತಕ್ಕೆ ಡಿಸೆಂಬರ್ 31ರಂದು ಸಂಜೆ 07.30ಕ್ಕೆ ಡಾ. ಟಿ‌ಎಮ್‌ ಎ ಪೈ ಇಂಟರ್‌ನ್ಯಾಶನಲ್ ಕನ್ವೆಂಶನ್ ಸೆಂಟರ್‌ನಲ್ಲಿ ಬೃಹತ್ ಪಾರ್ಟಿಯನ್ನು ಆಯೋಜಿಸಿದೆ. ಹೊಸ ವರ್ಷದ ಸ್ವಾಗತಕ್ಕಾಗಿ ಆಯೋಜಿಸ ಲಾದ ಈ ಪಾರ್ಟಿಯಲ್ಲಿ ನಗರದಲ್ಲೇ ಅಭೂತಪೂರ್ವವಾದ ಬಹುಮಾನಗಳನ್ನು ಗೆಲ್ಲುವ ಅಪೂರ್ವ ಅವಕಾಶಗಳನ್ನು ಕಲ್ಪಿಸಿದೆ.

1ನೇ ಬಹುಮಾನ- ಡೈಮಂಡ್ ನೆಕ್ಲೆಸ್ ಸೆಟ್
2ನೇ ಬಹುಮಾನ- ಚಿನ್ನದ ನಾಣ್ಯ
3ನೇ ಬಹುಮಾನ- 1 ಸ್ಪೈಸ್ ಜೆಟ್ ಡೊಮೆಸ್ಟಿಕ್ ಫ್ಲೈಟ್ ಟಿಕೇಟ್
4ನೇ ಮತ್ತು 5ನೇ ಬಹುಮಾನ- ಓಶಿಯನ್ ಪರ್ಲ್ ನವದೆಹಲಿ/ಹುಬ್ಬಳ್ಳಿ/ಉಡುಪಿಯಲ್ಲಿ 1 ನೈಟ್ ಸ್ಟೇ ವೊಚರ್

ಇಷ್ಟೇ ಅಲ್ಲದೇ ಈ ಬಾರಿಯ ನ್ಯೂ ಇಯರ್ ಪಾರ್ಟಿಯು ಹಲವು ರಾಕಿಂಗ್ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಪ್ರಖ್ಯಾತ ಹಾಸ್ಯಗಾರ ಅಹಸಾನ್ ಖುರೇಷಿಯವರ ಹಾಸ್ಯ ಪ್ರದರ್ಶನ, ಸಂಗೀತ ನಿರ್ದೇಶಕ ಹಾಗೂ ಹಾಡುಗಾರ ಪ್ರಕಾಶ್ ಮಹಾದೇವನ್ ಮತ್ತು ರೂಪಾ ಪ್ರಕಾಶ್ ರವರ ಹಾಡುಗಾರಿಕೆ, ಅರ್ಚನಾ ಮಹಾಜನ್ ಮತ್ತು ಹರೀಶ್ ಕುಮಾರ್ ರವರ ಬಾಲಿವುಡ್ ಮತ್ತು ಹಾಲಿವುಡ್‌ನ ಹಾಡುಗಳು, ಹೆಜ್ಜೆನಾದ ತಂಡದಿಂದ ಹಾಲಿವುಡ್ ಡ್ಯಾನ್ಸ್ ಪ್ರದರ್ಶನ ಹೊಸ ವರ್ಷದ ಪಾರ್ಟಿಯ ಸಂಭ್ರಮವನ್ನು ಇಮ್ಮಡಿಗೊಳಿಸಿದರೆ ರಿಯಾಜ್ ಇಂಡಿಯನ್‌ರವರ ಮಿಮಿಕ್ರಿ ಹಾಗೂ ಅತಿಥಿ ಜೋಡಿಗಳಿಂದ ವಿಶೇಷ ಡಿಜೆ ಕಾರ್ಯಕ್ರಮ ಸಂಭ್ರಮಾಚರಣೆಯನ್ನು ಅವಿಸ್ಮರಣೀಯ ವಾಗಿಸಲಿದೆ.

ಇವರೆಲ್ಲರ ಜತೆಗೆ ಅನೇಕ ಗೇಮ್ಸ್‌ಗಳು ಹಾಗೂ ಕಾರ್ಯಕ್ರಮದ ನಿರೂಪಕರಾಗಿ ಪ್ರಖ್ಯಾತ ಆರ್‌ಜೆ ಸಾಹಿಲ್ ಝಹೀರ್ ಇರುವುದು ಈ ಬಾರಿಯ ನ್ಯೂ ಇಯರ್ ಪಾರ್ಟಿಯು ನೀವು ಹಿಂದೆಂದೂ ಕಾಣದ ಮನೋರಂಜನೆಯನ್ನು ನೀಡಲಿದೆ.

ದಿ ಓಶಿಯನ್ ಪರ್ಲ್‌ನ ಮಾಸ್ಟರ್ ಶೆಪ್‌ರವರಿಂದ ತಯಾರಿಸಲ್ಪಟ್ಟ ರುಚಿಕರವಾದ ಗಾಲಾ ಬಫೆ ಮತ್ತಷ್ಟು ಆನಂದವನ್ನು ನೀಡಲಿದೆ ಎಂದು ದಿ ಓಶಿಯನ್ ಪರ್ಲ್‌ನ ಪ್ರಕಟಣೆ ತಿಳಿಸಿದೆ.

ನ್ಯೂ ಇಯರ್ ಪಾರ್ಟಿಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ದಿ ಓಶಿಯನ್ ಪರ್ಲ್, ಕೊಡಿಯಾಲ್‌ಬೈಲ್, ಮಂಗಳೂರು ಅಥವಾ ಡಾ. ಟಿ‌ಎಮ್‌ಎ ಪೈ ಇಂಟರ್‌ನ್ಯಾಶನಲ್ ಕನ್ವೆಂಶನ್ ಸೆಂಟರ್, ಎಮ್‌ಜಿ ರಸ್ತೆ, ಮಂಗಳೂರು ಇಲ್ಲಿ ಕೂಡಲೇ ಸಂಪರ್ಕಿಸುವಂತೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.