ಕರಾವಳಿ

ರೀಡರ್ ಮಂಜುನಾಥಯ್ಯ ಮನೆ, ಕಚೇರಿಗೆ ಎಸಿಬಿ ದಾಳಿ : ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ದಾಖಲೆ ವಶ

Pinterest LinkedIn Tumblr

ಮಂಗಳೂರು, ಡಿಸೆಂಬರ್.29: ರಾಜ್ಯದ ವಿಧೆಡೆಗಳಲ್ಲಿರುವ ಭೃಷ್ಟ ಅಧಿಕಾರಿಗಳ ಮನೆ, ಕಚೇರಿಗಳಿಗೆ ಶುಕ್ರವಾರ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ದಾಳಿ ನಡೆಸಿದ್ದು, ಇದೇ ಸಂದರ್ಭ ಎಸಿಬಿ ಅಧಿಕಾರಿಗಳು ಮಂಗಳೂರು ಹಾಗೂ ಉಡುಪಿಯಲ್ಲೂ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಪ್ರವಾಚಕ (ರೀಡರ್) ಮಂಜುನಾಥಯ್ಯ ಅಕ್ರಮ ಆಸ್ತಿ ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ಮಂಗಳೂರು ಮತ್ತು ಉಡುಪಿಯಲ್ಲಿ ದಾಳಿ ನಡೆಸಿದ್ದಾರೆ.ಮಂಜುನಾಥಯ್ಯ ಅಕ್ರಮ ಆಸ್ತಿ ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಉಡುಪಿಯ ವಾಸದ ಮನೆ, ದಾವಣಗೆರೆ, ಚಿಕ್ಕಮಗಳೂರಿನಲ್ಲಿರುವ ಸಂಬಂಧಿಕರ ಮನೆ, ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಕಚೇರಿಗೆ ದಾಳಿ ನಡೆಸಿದ್ದಾರೆ.

ಉಡುಪಿಯ ಮಾಜಿ ನಗರಸಭೆಯ ಆಯುಕ್ತ ಹಾಗೂ ಮಂಗಳೂರು ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ರೀಡರ್ ಆಗಿರುವ ಡಿ. ಮಂಜುನಾಥಯ್ಯ ಅವರಿಗೆ ಸೇರಿದ ಮಣಿಪಾಲದ ಫ್ಲ್ಯಾಟ್ ಗೆ ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರಿನಲ್ಲಿ ಎಸಿಬಿ ಇನ್‌ಸ್ಪೆಕ್ಟರ್ ಯೋಗೀಶ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಕಚೇರಿಯಲ್ಲಿರುವ ಹಲವು ಕಡತಗಳನ್ನು ಪರಿಶೀಲಿಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಉಡುಪಿಯಲ್ಲಿ ಮುಂಜಾನೆ 6ಗಂಟೆ ಸುಮಾರಿಗೆ ಪಶ್ಚಿಮ ವಲಯ ಎಸಿಬಿ ಎಸ್ಪಿ ಶೃತಿ ನೇತೃತ್ವದ 15 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಮಣಿಪಾಲ ಪ್ರಿಯದರ್ಶಿನಿ ಎನ್‌ಕ್ಲೈವ್ ಫ್ಲ್ಯಾಟ್ ಸಂಖ್ಯೆ 302 ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಎಸಿಬಿ ಅಧಿಕಾರಿಗಳ ದಿಢೀರ್ ದಾಳಿಯಿಂದ ಮಂಜುನಾಥಯ್ಯ ಹಾಗೂ ಆತನ ಕುಟುಂಬದವರು ಬೆಚ್ಚಿಬಿದ್ದಿದ್ದರು. ಬರೇ ಚಡ್ಡಿ ಹಾಗೂ ಬನಿಯಾನ್ ನಲ್ಲಿದ್ದ ಮಂಜುನಾಥಯ್ಯ, ಎಸಿಬಿ ಅಧಿಕಾರಿಗಳನ್ನು ಕಂಡು ತಬ್ಬಿಬ್ಬಾಗಿದ್ದಾನೆ. ಏನೂ ಏನೂ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಮಾಜಿ ಆಯುಕ್ತ, ಎಸಿಬಿ ಅಧಿಕಾರಿಗಳೆಂದು ತಿಳಿದೊಡನೆ ಶಾಕ್ ಗೆ ಒಳಗಾಗಿದ್ದಾನೆ. ಮನೆಯ ಮೂಲೆ ಮೂಲೆಗಳನ್ನು ಜಾಲಾಡಿದ ಪೊಲೀಸರು, ಕೆಲ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಎಸಿಬಿ ತಂಡಕ್ಕೆ ಮಂಜುನಾಥಯ್ಯನ ಮನೆಯಲ್ಲಿ 12 ಲಕ್ಷ ರೂ. ನಗದು ಮತ್ತು ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಸಿಕ್ಕಿದೆಂದು ಹೇಳಲಾಗುತ್ತಿದೆ. ಇದರ ಜೊತೆಗೆ ಹಣಕಾಸು ಮತ್ತು ಆಸ್ತಿ ದಾಖಲೆ ಪತ್ರವನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಮಣಿಪಾಲದಲ್ಲಿ 2 ಫ್ಲ್ಯಾಟ್, ಹಣಕಾಸು ವ್ಯವಹಾರ ಮತ್ತು ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಚೆನ್ನಗಿರಿ, ಕಡೂರಿನಲ್ಲೂ ದಾಳಿ: ದಾವಣಗೆರೆ ಜಿಲ್ಲೆ ಚೆನ್ನಗಿರಿ ಮತ್ತು ಚಿಕ್ಕಮಗಳೂರಿನ ಕಡೂರಿನಲ್ಲಿರುವ ಮಂಜುನಾಥಯ್ಯನ ಸಂಬಂಧಿಕರ ಮನೆಗಳ ಮೇಲು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧಾ ಕಾರ್ಯ ಮುಂದುವರೆದಿದೆ ಎಂದು ಎಸಿಬಿ ಮೂಲಗಳಿಂದ ತಿಳಿದುಬಂದಿದೆ.

ಉಡುಪಿಯಲ್ಲೇ ಠಿಕಾಣಿ: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಉದ್ಯಮಿಯೊಬ್ಬರ ,(ಗುತ್ತಿಗೆದಾರ)ಮೊಗವೀರ ಮುಖಂಡ ನಪ್ರಭಾವ ಬಳಿಸಿಕೊಂಡು ಉಡುಪಿಯಲ್ಲೇ ಠಿಕಾಣಿ ಹೂಡಿದ್ದ ಮಂಜುನಾಥಯ್ಯ, ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸುತ್ತಿದ್ದ. ತನ್ನ ಕೈಕೆಳಗಿನ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಉದ್ಯಮಿಗಳಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದು ಅವರ ಕೆಲಸ ಮಾಡಿಕೊಡುತ್ತಿದ್ದ ಎನ್ನಲಾಗಿದೆ.

ಮಂಜುನಾಥಯ್ಯ ಮೂರು ತಿಂಗಳ ಹಿಂದೆ ನಗರದಲ್ಲಿರುವ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರವಾಚಕರಾಗಿ ಬಂದಿದ್ದರು. ಆದರೆ ಒಂದೂವರೆ ತಿಂಗಳಿನಿಂದ ಕೆಲಸಕ್ಕೆ ಬಾರದೆ ತುರ್ತು ರಜೆ ಹಾಕಿದ್ದರು. ಬಿಎಡ್ ಕಾಲೇಜಿನಲ್ಲಿ ಕೆಲಸ ಮಾಡಲು ಇಷ್ಟವಿಲ್ಲದ ಈ ವ್ಯಕ್ತಿ ಬಂದ ಒಂದು ತಿಂಗಳಲ್ಲೇ ವರ್ಗಾವಣೆಗೆ ಪ್ರಯತ್ನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಮೊದಲು ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಮಂಜುನಾಥಯ್ಯ, ನಂತರ ದಿನಗಳಲ್ಲಿ ರಾಜಕೀಯ ಪ್ರಭಾವ ಬಳಸಿಕೊಂಡು ಉಡುಪಿ ನಗರಸಭೆಯ ಆಯುಕ್ತ ಹುದ್ದೆಗೆ ಏರಿದ್ದ. ಬಳಿಕ ನಾನು ಆಡಿದ್ದೇ ಆಟ ಎಂಬ ರೀತಿಯಲ್ಲಿ ಇಡೀ ನಗರಸಭೆಯನ್ನೇ ಗುಡಿಸಿಗುಂಡಾಂತರ ಮಾಡಿದ್ದ. ಈತನ ಭ್ರಷ್ಟಾಚಾರಕ್ಕೆ ಆಡಳಿತದಲ್ಲಿದ್ದ ಕಾಂಗ್ರೆಸ್ ಕೂಡ ಸಾಥ್ ನೀಡಿತ್ತು.

ನಗರದಲ್ಲಿ ಕಾನೂನುಗಳನ್ನು ಗಾಳಿಗೆ ತೂರಿ ತಲೆ ಎತ್ತಿದ ಬ್ರಹತ್ ಅಕ್ರಮ ಕಟ್ಟಡಗಳಿಗೆ ತಾನೇ ಸಾಥ್ ನೀಡಿ ಪರವಾನಿಗೆ ನೆಪದಲ್ಲಿ ಬಿಲ್ಡರ್ ಗಳಿಂದ ಲಕ್ಷಾಂತರ ದೊಚುತಿದ್ದ.ಈರೀತಿಯ ಭ್ರಷ್ಟಾಚಾರದಿಂದಲೇ ಕೋಟ್ಯಾಂತರ ರೂಪಾಯಿ ಸಂಪಾದಿಸಿದ್ದ ಈತ ಉಡುಪಿ ಸೇರಿದಂತೆ ಇತರೆ ಕಡೆಗಳಲ್ಲಿ ಆಸ್ತಿ ಮಾಡಿದ್ದಾನೆ. ತನ್ನ ಮಕ್ಕಳು ಹಾಗೂ ಕುಟುಂಬದವರವಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿರುವ ಸಂಶಯ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ನಡೆಸಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಪೌರಾಯುಕ್ತ ಮಂಜುನಾಥಯ್ಯ ಅವರ ವಿರುದ್ದ ಹಲವು ಭಾರಿ ಭ್ರಷ್ಟಚಾರದ ಆರೋಪ ಕೇಳಿ ಬಂದಿತ್ತು. ಚುನಾವಣೆ ಸಂದರ್ಭ ವರ್ಗಾವಣೆ ಮಾಡಿದ ಬಳಿಕ ಮಂಜುನಾಥಯ್ಯನಿಗೆ ಪುನಃ ಪೌರಾಯುಕ್ತ ಗದ್ದುಗೆಗೆ ಏರಲು ಸಾಧ್ಯವಾಗಿರಲಿಲ್ಲ.

ನೋಟ್ ಬ್ಯಾನ್ ಸಂದರ್ಭದಲ್ಲಿ ಉಡುಪಿ ಪ್ರಸಿದ್ಧ ‘ಆಭರಣ ‘ಮಳಿಗೆಯೊಂದರಲ್ಲಿ ಲಕ್ಷಾಂತರ ರೂಪಾಯಿ ಹಳೆ ನೋಟ್ ನ್ನು ನೀಡಿ ತನ್ನ ಪ್ರಭಾವ ಬಳಸಿಕೊಂಡು ಚಿನ್ನಾಭಾರಣ ಖರಿದಿಸಿದ್ದು ಉಡುಪಿ ನಗರಾದ್ಯಾಂತ ಸುದ್ದಿಯಾಗಿತ್ತು.

ದಾಳಿ ವೇಳೆ ಸಿಕ್ಕಿದ ಸೊತ್ತು:
* ಒಂದು ಕೇಜಿ ಬೆಳ್ಳಿ
* 443 ಗ್ರಾಂ ಚಿನ್ನಾಭರಣ
* ಮಣಿಪಾಲದಲ್ಲಿ ಬೇನಾಮಿ ಹೆಸರಿನಲ್ಲಿ 2 ಫ್ಲ್ಯಾಟ್.
* ಶಿವಮೊಗ್ಗದಲ್ಲಿ ಪತ್ನಿ ಹೆಸರಲ್ಲಿ ಫ್ಲ್ಯಾಟ್
* ಶಿವಮೊಗ್ಗದಲ್ಲಿ ಮಂಜುನಾಥಯ್ಯ ಹೆಸರಲ್ಲಿ ನಿವೇಶನ
* ಲಕ್ಷಾಂತರ ಮೌಲ್ಯದ ಡಸ್ಟರ್ ಮತ್ತು ಇಕೊ ಸ್ಪೋರ್ಟ್ಸ್ ಕಾರು (ಒಂದು ಮಗನ ಹೆಸರಲ್ಲಿ ಒಂದು ಬೇನಾಮಿ)
* ಎರಡು ದ್ವಿಚಕ್ರ ವಾಹನ
ಮಂಗಳೂರಿನಲ್ಲಿ ಎಸಿಬಿ ಇನ್‌ಸ್ಪೆಕ್ಟರ್ ಯೋಗೀಶ್ ನೇತೃತ್ವದ ತಂಡ, ಹಾಗೂ ಉಡುಪಿಯಲ್ಲಿ ಎಸಿಬಿ ಎಸ್‌ಪಿ ಶೃತಿ, ಉಡುಪಿ ಡಿವೈಎಸ್‌ಪಿ ದಿನಕರ ಶೆಟ್ಟಿ, ಕಾರವಾರ ಡಿವೈಎಸ್‌ಪಿ ಗಿರೀಶ್, ಚಿಕ್ಕಮಗಳೂರು ಡಿವೈಎಸ್‌ಪಿ ನಾಗೇಶ್ ಶೆಟ್ಟಿ, ಉಡುಪಿ ಎಸಿಬಿ ನಿರೀಕ್ಷಕರಾದ ಸತೀಶ್, ಯೊಗೀಶ್, ಜಯರಾಮ್ ಗೌಡ, ರಮೇಶ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.