ಕರಾವಳಿ

ಆಲೂಗಡ್ಡೆಯ ಸಿಪ್ಪೆಗಳನ್ನು ಎಸೆಯುವುದರಿಂದ ನಾವೇನು ಕಳೆದುಕೊಳ್ಳುತ್ತಿದ್ದೇವೆ, ತಿಳಿಯಿರಿ?

Pinterest LinkedIn Tumblr

ಅಡುಗೆಗಳಲ್ಲಿ ಅತಿ ಹೆಚ್ಚಾಗಿ ಬಳಸಲ್ಪಡುವ ತರಕಾರಿಗಳು ಎಂದರೆ ಈರುಳ್ಳಿ ಮತ್ತು ಆಲೂಗಡ್ಡೆ. ಆಲೂಗಡ್ಡೆಯನ್ನು ನಾವು ಹೆಚ್ಚಾಗಿ ಸಿಪ್ಪೆ ಸುಲಿದೇ ಬಳಸುತ್ತೇವೆ. ಆದರೆ ಈ ಸಿಪ್ಪೆಗಳನ್ನು ಎಸೆಯುವುದರಿಂದ ನಾವೇನು ಕಳೆದುಕೊಳ್ಳುತ್ತಿದ್ದೇವೆ ಗೊತ್ತೇ? ಈ ಬಗ್ಗೆ ನಡೆಸಿದ ಕೆಲವು ಸಂಶೋಧನೆಗಳ ಪ್ರಕಾರ ಆಲೂಗಡ್ಡೆಯ ಸಿಪ್ಪೆಯಲ್ಲಿಯೂ ಕೆಲವು ಪೋಷಕಾಂಶಗಳಿದ್ದು ಇವುಗಳನ್ನು ಸೇವಿಸುವ ಮೂಲಕ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

ಬನ್ನಿ, ಈ ಪ್ರಯೋಜನಗಳು ಯಾವುವು ಎಂಬುದನ್ನು ನೋಡೋಣ..

1.ನಮ್ಮ ದೇಹಕ್ಕೆ ಅಗತ್ಯವಾದ ಪೊಟ್ಯಾಶಿಯಂ ಅನ್ನು ಆಲೂಗಡ್ಡೆಯ ಸಿಪ್ಪೆ ಒದಗಿಸುತ್ತದೆ. ಉತ್ತಮ ಪ್ರಮಾಣದ ಪೊಟ್ಯಾಶಿಯಂ ನಮ್ಮ ನರವ್ಯವಸ್ಥೆಗೆ ಅಗತ್ಯವಾಗಿದೆ. ಒಂದು ಹೊತ್ತಿನ ಊಟದಲ್ಲಿ ಸೇವಿಸುವ ಆಲೂಗಡ್ಡೆಯ ಸಿಪ್ಪೆಯ ಮೂಲಕ ಸುಮಾರು ಆರುನೂರು ಮಿಗ್ರಾಂ ಪೊಟ್ಯಾಶಿಯಂ ಲಭ್ಯವಾಗುತ್ತದೆ. ಎಲೆಮರೆಕಾಯಿ ಆಲೂಗಡ್ಡೆಯ ಜಾದೂಗೆ ಬೆರಗಾಗಲೇಬೇಕು!

2.ಆಲೂಗಡ್ಡೆಯ ಸಿಪ್ಪೆಯಲ್ಲಿ ನಿಯಾಸಿಸ್ ಎಂಬ ಪೋಷಕಾಂಶವಿದೆ. ನಮ್ಮ ಆರೋಗ್ಯಕ್ಕೆ ಪ್ರತಿದಿನ ಹದಿನಾರು ಮಿಲಿಗ್ರಾಂ ನಿಯಾಸಿಸ್ ಬೇಕು. ಈ ಪ್ರಮಾಣವನ್ನು ಒಂದು ದೊಡ್ಡ ಆಲೂಗಡ್ಡೆಯ ಸಿಪ್ಪೆಯನ್ನು ಸೇವಿಸುವ ಮೂಲಕ ಪಡೆಯಬಹುದು.

3.ಆಲೂಗಡ್ಡೆಯಲ್ಲಿರುವ ಪ್ರೋಟೀನುಗಳು, ಖನಿಜಗಳು, ವಿಟಮಿನ್ನುಗಳು ಮತ್ತು ಕಾರ್ಬೋಹೈಡ್ರೇಟುಗಳು ಸಿಪ್ಪೆಯಲ್ಲಿಯೂ ಇದ್ದು ಇವುಗಳನ್ನು ತಿನ್ನುವ ಮೂಲಕ ಎಲ್ಲವನ್ನೂ ಕೊಂಚ ಹೆಚ್ಚಾಗಿಯೇ ಪಡೆಯಬಹುದು.

4.ನಮ್ಮ ರಕ್ತಕ್ಕೆ ಕಬ್ಬಿಣದ ಅಂಶ ಅಗತ್ಯವಾಗಿ ಬೇಕು. ಆಲೂಗಡ್ಡೆಯಲ್ಲಿ ಕಡಿಮೆ ಇರುವ ಕಬ್ಬಿಣ ಸಿಪ್ಪೆಯಲ್ಲಿ ಹೆಚ್ಚಾಗಿದ್ದು ಸುಮಾರು ಅರ್ಧ ಆಲೂಗಡ್ಡೆಯ ಸಿಪ್ಪೆಯ ಸೇವನೆಯ ಮೂಲಕ ನಾಲ್ಕು ಮಿಲಿಗ್ರಾಂ ಕಬ್ಬಿಣ ದೊರಕುತ್ತದೆ.

5.ಆಲೂಗಡ್ಡೆಯ ಸಿಪ್ಪೆಯಲ್ಲಿರುವ ಕರಗದ ನಾರು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಮಲಬದ್ಧತೆಯಿಂದ ರಕ್ಷಿಸುತ್ತದೆ.

6.ಆಲೂಗಡ್ಡೆಯ ಸಿಪ್ಪೆಯನ್ನು ನಮ್ಮ ಆಹಾರದಲ್ಲಿ ಸೇವಿಸುವ ಮೂಲಕ ಆಹಾರದಲ್ಲಿರುವ ಗ್ಲುಕೋಸ್ ಹೀರಿಕೊಳ್ಳುವ ಪ್ರಮಾಣ ಕೊಂಚ ನಿಧಾನವಾಗುತ್ತದೆ. ಅಂದರೆ ಸಿಪ್ಪೆಯಿಲ್ಲದೇ ತಿನ್ನುವ ಆಲೂಗಡ್ಡೆಯ ಮೂಲಕ ರಕ್ತದಲ್ಲಿ ಏಕಾಏಕಿ ಏರುವ ಸಕ್ಕರೆ ಸಿಪ್ಪೆ ಸಹಿತವಾಗಿ ತಿನ್ನುವ ಮೂಲಕ ಇಲ್ಲವಾಗುತ್ತದೆ.

7.ಒಂದು ವೇಳೆ ಆಲೂಗಡ್ಡೆಯ ರಸವನ್ನು ಸಂಗ್ರಹಿಸುವಾಗಲೂ ಸಿಪ್ಪೆಯನ್ನು ಹಾಗೇ ಬಿಟ್ಟರೆ ಸಿಪ್ಪೆಯಲ್ಲಿರುವ ಪೋಷಕಾಂಶಗಳೂ ಸೇರಿ ಈ ರಸವನ್ನು ಇನ್ನಷ್ಟು ಪ್ರಬಲವಾಗಿಸುತ್ತದೆ. ಇದು ಆರೋಗ್ಯವನ್ನು ಇನ್ನಷ್ಟು ವೃದ್ಧಿಸುತ್ತದೆ. ಆಲೂಗಡ್ಡೆಯ ಸಿಪ್ಪೆಯನ್ನು ಸೇರಿಸಿದ ಖಾದ್ಯಗಳು ಇನ್ನಷ್ಟು ರುಚಿಕರವಾಗಿರುವನ್ನೂ ಕಂಡುಕೊಳ್ಳಲಾಗಿದೆ.

Comments are closed.