ಕ್ರೀಡೆ

ಈ ಬಾರಿ ಆರ್‌ಸಿಬಿ ಅಬ್ಬರಿಸಲಿದೆಯೇ..? ಕೊಹ್ಲಿಗೆ ಸಾಥ್ ನೀಡಲು ಯಾರೆಲ್ಲ ಇದ್ದಾರೆ ನೋಡಿ…

Pinterest LinkedIn Tumblr

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ 2019ರ ಟೂರ್ನಿಯ ಹರಾಜು ಪ್ರಕ್ರಿಯೆ ಮುಗಿದಿದ್ದು ಕೆಲ ಸ್ಫೋಟಕ ಬ್ಯಾಟ್ಸ್ ಮನ್ ಗಳನ್ನು ಫ್ರಾಂಚೈಸಿಗಳು ಖರೀದಿಸಿದ್ದಾರೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಅಬ್ಬರದ ಬ್ಯಾಟಿಂಗ್ ಮಾಡಿದ್ದು ಈಗ ಆ ಜಾಗಕ್ಕೆ ಅದೇ ತಂಡದ ಬಿಗ್ ಹಿಟ್ಟರ್ ಶಿಮ್ರಾನ್ ಹೆಟ್ಮರ್ ಬಂದಿದ್ದಾರೆ. ಇದೇ ವೇಳೆ ರಣಜಿಯಲ್ಲಿ ಅಬ್ಬರಿಸಿದ್ದ ಶಿವಂ ದುಬೆ ಸಹ ಕೊಹ್ಲಿ ತಂಡವನ್ನು ಸೇರಿಕೊಂಡಿದ್ದಾರೆ.

2019ರ ಆರ್ಸಿಬಿ ತಂಡ ಹೀಗಿದೆ:
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಪಾರ್ಥಿವ್ ಪಟೇಲ್, ಯಜುವೇಂದ್ರ ಚಹಾಲ್, ಟಿಮ್ ಸೌಥಿ, ಉಮೇಶ್ ಯಾದವ್, ನವದೀಪ್ ಶೈನಿ, ಕುಲ್ವಂತ್ ಕೇಜ್ರೋಲಿಯಾ, ವಾಷಿಂಗ್ಟನ್ ಸುಂದರ್, ಪವನ್ ನೇಗಿ, ನಾಥನ್ ನೀಲ್, ಮೋಹಿನ್ ಅಲಿ, ಮೊಹಮ್ಮದ್ ಸಿರಾಜ್, ಕೊಲಿನ್ ಡಿ ಗ್ರ್ಯಾಂಡ್ಮೆ, ಶಿಮ್ರಾನ್ ಹೆಟ್ಮರ್, ದೇವ್ ದತ್ ಪಡಿಕಲ್, ಶಿವಂ ದುಬೆ, ಹೆನ್ರಿಚ್ ಕಾಸೇನ್, ಗುರ್ ಕೀರ್ತ್ ಸಿಂಗ್, ಹಿಮ್ಮತ್ ಸಿಂಗ್, ಪ್ರಯಾಸ್ ರಾಯ್ ಬರ್ಮನ್.

ತಂಡದಿಂದ ಕೈಬಿಡಲಾದ ಆಟಗಾರರು
ಇನ್ನು ತಂಡದಿಂದ ಕ್ವಿಂಟನ್ ಡಿಕಾಕ್, ಮಂದೀಪ್ ಸಿಂಗ್, ಕ್ರಿಸ್ ವೊಗ್ಸ್, ಸರ್ಫರಾಜ್ ಖಾನ್, ಬ್ರೆಂಡನ್ ಮೆಕಲಮ್ ,ಕೋರಿ ಆ್ಯಂಡ್ರೂಸನ್.

ಹೊಸದಾಗಿ ಖರೀದಿಸಿದ ಆಟಗಾರರು
ಶಿಮ್ರಾನ್ ಹೆಟ್ಮರ್, ದೇವ್ ದತ್ ಪಡಿಕಲ್, ಶಿವಂ ದುಬೆ, ಹೆನ್ರಿಚ್ ಕಾಲ್ಸೆನ್, ಗುರು ಕೀರ್ತ್ ಸಿಂಗ್, ಹಿಮ್ಮತ್ ಸಿಂಗ್, ಪ್ರಯಾಸ್ ರಾಯ್ ಬರ್ಮನ್.

Comments are closed.