ಕರಾವಳಿ

ರಕ್ತಹೀನತೆಯಿಂದ ನರಳುವವರಿಗೆ ಬೆಲ್ಲ ಹಾಕಿದ ಬಿಸಿ ಹಾಲಿನ ಸೇವನೆ ತುಂಬಾ ಬೆಸ್ಟ್‌

Pinterest LinkedIn Tumblr

ಬಿಸಿ ಬಿಸಿ ಹಾಲಿಗೆ ಬೆಲ್ಲ ಹಾಕಿ ಕುಡಿದರೆ ದೇಹಾರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ಟಾನಿಕ್‌ನಂತೆ ಕೆಲಸ ಮಾಡುತ್ತದೆ. ಹಲವಾರು ಅನಾರೋಗ್ಯಗಳನ್ನು ದೂರ ಮಾಡಿ ದೇಹಕ್ಕೆ ಶಕ್ತಿ ತುಂಬುತ್ತದೆ.

ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಸೇವಿಸಿದರೆ ಸ್ಥೂಲಕಾಯ ನಿವಾರಣೆಯಾಗುತ್ತದೆ. ಬೆಲ್ಲದಲ್ಲಿರುವ ಔಷಧೀಯ ಗುಣಗಳಿಂದ ಶರೀರದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆಯಾಗುತ್ತದೆ.ರಕ್ತಹೀನತೆಯಿಂದ ನರಳುವವರಿಗೆ ಬೆಲ್ಲ ಹಾಕಿದ ಬಿಸಿ ಹಾಲಿನ ಸೇವನೆ ತುಂಬಾ ಬೆಸ್ಟ್‌. ಇದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಇದು ವರದಾನವಾಗಿದೆ.

ಬಿಸಿ ಹಾಲು ಮತ್ತು ಬೆಲ್ಲದ ಕಾಂಬಿನೇಷನ್‌ನಲ್ಲಿರುವ ಪೋಷಕಾಂಶಗಳಿಂದ ತಲೆಗೂದಲು ಹೊಳಪಾಗುತ್ತವೆ, ಕೂದಲು ಉದುರುವುದು ನಿಂತು ಹೋಗುತ್ತದೆ, ತಲೆಹೊಟ್ಟು ನಿವಾರಣೆಯಾಗುತ್ತದೆ.ಋುತುಸ್ರಾವದ ಸಮಯದಲ್ಲಿ ಕಾಡಿಸುವ ಹೊಟ್ಟೆ ನೋವು, ಬೆನ್ನು ನೋವು ಮುಂತಾದ ಸಮಸ್ಯೆಗಳಿಗೆ ಬೆಲ್ಲ ಹಾಕಿದ ಬಿಸಿ ಹಾಲು ರಾಮಬಾಣವಾಗಿ ಕೆಲಸ ಮಾಡುತ್ತದೆ.

ಬೆಲ್ಲ ಹಾಕಿದ ಹಾಲಿನಲ್ಲಿ ನೈಸರ್ಗಿಕವಾದ ಆ್ಯಂಟಿ ಬಯೋಟಿಕ್‌ ಮತ್ತು ಆ್ಯಂಟಿ ವೈರಲ್‌ ಗುಣಗಳಿರುತ್ತವೆ. ಇವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ವೈರಸ್‌ ಸೊಂಕುಗಳು ಕಡಿಮೆಯಾಗುತ್ತವೆ.ವೃದ್ಧಾಪ್ಯದಲ್ಲಿ ಕಾಡುವ ಕೀಲು ನೋವು ಸಮಸ್ಯೆಗೂ ಬೆಲ್ಲ ಹಾಕಿದ ಬಿಸಿ ಹಾಲಿನ ಸೇವನೆ ಉತ್ತಮವಾಗಿ ಪರಿಣಮಿಸಿದೆ. ಇದರಿಂದ ನೋವು ಕಡಿಮೆಯಾಗಿ ಕೀಲುಗಳು ಸದೃಢವಾಗುತ್ತವೆ.

Comments are closed.