ಮನೋರಂಜನೆ

ವಿಜಯ್ ರಾಘವೇಂದ್ರ ನಟನೆಯ ಪರದೇಸಿ ಕೇರಾಫ್ ಲಂಡನ್ ಬಿಡುಗಡೆಗೆ ದಿನಗಣನೆ

Pinterest LinkedIn Tumblr


ವಿಜಯ್ ರಾಘವೇಂದ್ರ ನಟನೆಯ ಪರದೇಸಿ ಕೇರಾಫ್ ಲಂಡನ್ ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಟೈಟಲ್ ಒಂದು ಆಕರ್ಷಣೆಯಾದರೆ ಇದರ ಬಗ್ಗೆ ಹೊರ ಬೀಳುತ್ತಿರೋ ಕುತೂಹಲದ ವಿಚಾರಗಳಿಂದಾಗಿ ಪ್ರೇಕ್ಷಕರೂ ಕೂಡಾ ಇದರ ಬಗ್ಗೆ ಆಕರ್ಷಿತರಾಗಿದ್ದಾರೆ. ಈ ಹಿಂದೆ ರಾಜಶೇಖರ್ ಮತ್ತು ವಿಜಯ್ ರಾಘವೇಂದ್ರ ಜೋಡಿಯ ರಾಜ ಲವ್ಸ್ ರಾಧೆ ಗೆಲುವು ಕಂಡಿತ್ತಲ್ಲಾ? ಆ ಹಿಸ್ಟರಿ ಮತ್ತೆ ಮರುಕಳಿಸುತ್ತದೆಂಬ ಮಾತೇ ಎಲ್ಲೆಡೆ ಕೇಳಿ ಬರುತ್ತಿದೆ.

ಬಹುತೇಕ ಚಿತ್ರತಂಡಗಳು ಒಂದು ಚಿತ್ರ ಪೂರ್ಣಗೊಳ್ಳುವ ಮುನ್ನವೇ ಛಿದ್ರವಾಗೋದೇ ಹೆಚ್ಚು. ಒಂದೇ ತಂಡ ಮತ್ತೊಂದು ಚಿತ್ರವನ್ನೂ ಸೇರಿ ಮಾಡಿದರೆ ಅದು ಪವಾಡದಂತೆಯೇ ಗೋಚರಿಸುತ್ತೆ. ಪರದೇಸಿ ಕೇರಾಫ್ ಲಂಡನ್ ವಿಚಾರದಲ್ಲಿ ಮಾತ್ರ ಅಂಥಾದ್ದೊಂದು ಪವಾಡ ಸಂಭವಿಸಿದೆ!

ಇದು ನಿರ್ದೇಶಕ ರಾಜಶೇಖರ್ ಮತ್ತು ವಿಜಯ್ ರಾಘವೇಂದ್ರ ಕಾಂಬಿನೇಷನ್ನಿನ ಎರಡನೇ ಚಿತ್ರ. ಇದೇ ಜೋಡಿ ಈ ಹಿಂದೆ ರಾಜ ಲವ್ಸ್ ರಾಧೆ ಮೂಲಕ ಮೋಡಿ ಮಾಡಿತ್ತು. ಆ ಚಿತ್ರವಿನ್ನೂ ಚಿತ್ರೀಕರಣದ ಹಂತದಲ್ಲಿರುವಾಗಲೇ ರಾಜಶೇಖರ್ ವಿಜಯ್ ರಾಘವೇಂದ್ರ ಜೊತೆ ಮತ್ತೊಂದು ಚಿತ್ರ ಮಾಡುವ ಸುಳಿವನ್ನೂ ಬಿಟ್ಟು ಕೊಟ್ಟಿದ್ದರು. ಅದೇ ರೀತಿ ಈ ಜೋಡಿಯ ಸಂಗಮದೊಂದಿಗೆ ಈ ಚಿತ್ರ ವೇಗವಾಗಿ ತಯಾರಾಗಿ ನಿಂತಿದೆ. ಈ ತಿಂಗಳಾಂತ್ಯದಲ್ಲಿಯೇ ತೆರೆ ಕಾಣುವ ತಯಾರಿಯಲ್ಲಿದೆ.

ಪರದೇಸಿ ಕೇರಾಫ್ ಲಂಡನ್ ಚಿತ್ರದ ಮೂಲಕ ವಿಜಯ್ ರಾಘವೇಂದ್ರರಿಗೆ ವಿಶಿಷ್ಟವಾದೊಂದು ಪಾತ್ರವನ್ನು ನಿರ್ದೇಶಕರು ಸೃಷ್ಟಿ ಮಾಡಿದ್ದಾರಂತೆ. ಈ ಪಾತ್ರ ಪ್ರೇಕ್ಷಕರಿಗೆ ಸರ್ಪ್ರೈಸ್ ನಂತಿರಲಿದೆಯಂತೆ. ಅದು ಯಾವ ರೀತಿಯದ್ದೆಂಬುದು ಈ ತಿಂಗಳಲ್ಲಿಯೇ ಬಯಲಾಗಲಿದೆ.

Comments are closed.