ಕರಾವಳಿ

ವರ್ಕ್ ಔಟ್ ಸಮಯದಲ್ಲಿ ಸೇವಿಸಬಹುದಾದ ಪ್ರೋಟೀನ್ ಆಹಾರಗಳು

Pinterest LinkedIn Tumblr

ತೂಕ ಕಳೆದುಕೊಳ್ಳೋದು ನಿಮ್ಮ ಗುರಿಯಾಗಿದ್ರೆ, ನೀವು ಪ್ರತಿನಿತ್ಯ ವರ್ಕ್ ಔಟ್ ಮಾಡಲೇಬೇಕು. ಹಾಗಂದ ಮಾತ್ರಕ್ಕೆ ಆರೋಗ್ಯವನ್ನ ನಿರ್ಲ್ಯಕ್ಷಿಸುವಂತಿಲ್ಲ. ನಿಮ್ಮ ಸ್ನಾಯುಗಳನ್ನು ಸರಿಪಡಿಸಲು ಮತ್ತು ಸ್ನಾಯುವಿನ ಬಲವನ್ನು ಹೆಚ್ಚಿಸಲು ವ್ಯಾಯಾಮದ ಮೊದಲು ಹಾಗೂ ನಂತರ ಪ್ರೋಟೀನ್ ಸೇವನೆ ಅತ್ಯಗತ್ಯ. ಪ್ರೋಟೀನ್​ಗಳು ನಮ್ಮ ದೇಹದಲ್ಲಿ ಬಿಲ್ಡಿಂಗ್ ಬ್ಲಾಕ್​ಗಳಂತೆ ಕೆಲಸ ಮಾಡುತ್ತವೆ. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನ ಒದಗಸಿ ದೇಹದ ಕಾರ್ಯಕ್ಷಮತೆ ಹೆಚ್ಚಿಸಲು ಸಹಕರಿಸುತ್ತವೆ.

ವರ್ಕ್ ಔಟ್ ಸಮಯದಲ್ಲಿ ಸೇವಿಸಬಹುದಾದ ಟಾಪ್ 6 ಪ್ರೋಟೀನ್​ ಸಮೃದ್ಧ ಆಹಾರಗಳು:
1. ಮೊಟ್ಟೆ:
ಪ್ರೋಟೀನ್ ಎಂದ ತಕ್ಷಣ ಮೊದಲು ನೆನಪಿಗೆ ಬರೋದೆ ಮೊಟ್ಟೆ. ನಿಸ್ಸಂದೇಹವಾಗಿ ಮೊಟ್ಟೆಗಳಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಾಗಿರುತ್ತದೆ. ಹೀಗಾಗಿ ಜಿಮ್​ಗೆ ಹೋಗುವ ಮೊದಲು ಅಥವಾ ವರ್ಕ್ ಔಟ್ ಆರಂಭಿಸುವ ಮೊದಲು ಮೊಟ್ಟೆಯನ್ನು ಬೇಯಿಸಿ ಸೇವನೆ ಮಾಡಿದರೆ ದೇಹಕ್ಕೆ ಅಗತ್ಯವಿರುವ ಪ್ರೋಟೀನ್​ಗಳು ಲಭಿಸುತ್ತವೆ.
2. ನಟ್ಸ್:
ಬಾದಾಮಿ, ವಾಲ್ನಟ್ಸ್, ಗೋಡಂಬಿ, ಸಿಹಿಕುಂಬಳ, ಸೂರ್ಯಕಾಂತಿ ಹಾಗೂ ಸೆಣಬಿನ ಬೀಜಗಳು ಪ್ರೋಟೀನ್ ಸಮೃದ್ಧ ಆಹಾರಗಳಾಗಿವೆ. ನಟ್ಸ್​ಗಳನ್ನ ವಿವಿಧ ರೀತಿಯಲ್ಲಿ ನಮ್ಮ ಡಯೆಟ್​ ಪ್ಲ್ಯಾನ್​ನಲ್ಲಿ ಸೇರಿಸಿಕೊಳ್ಳಬಹುದು. ಇವುಗಳನ್ನ ನೇರವಾಗಿ ಅಥವಾ ನಟ್​ ಬಟರ್​ಗಳ ಮೂಲಕವೂ ಬಳಸಬಹುದು. ನಟ್​ ಬಟರ್​ಗಳನ್ನ ಸ್ಮೂದಿ ಅಥವಾ ಬ್ರೆಡ್ ಮೇಲೆ ಸವರಿ ತಿನ್ನಲು ರುಚಿಕರವಾಗಿರುತ್ತದೆ.
3. ಗ್ರೀಕ್ ಯೋಗರ್ಟ್:
ದಪ್ಪ ಕೆನೆಯುಳ್ಳ ಮೊಸರನ್ನ ಯೋಗರ್ಟ್ ಎನ್ನುತ್ತಾರೆ. ಸಾಮನ್ಯ ಮೊಸರಿಗೆ ಹೋಲಿಸಿದರೆ ಈ ಗ್ರೀಕ್ ಯೋಗರ್ಟ್​ನಲ್ಲಿ ಪ್ರೋಟೀನ್ ದುಪ್ಪಟ್ಟಾಗಿರುತ್ತದೆ. ಇದರೊಂದಿಗೆ ಇತರ ಹಣ್ಣುಗಳನ್ನ ಸೇರಿಸಿ ಕೂಡ ತಿನ್ನಬಹುದು. ಯೋಗರ್ಟ್ ಬರೀ ನಾಲಗಗೆ ಮಾತ್ರವಲ್ಲದೇ ದೇಹಕ್ಕೂ ಬಹಳ ಹಿತಕರವಾಗಿರುತ್ತದೆ. ಯೋಗರ್ಟ್​ನಲ್ಲಿರುವ ಪ್ರೋಟೀನ್​ಗಳು ನಮ್ಮ ದೇಹದ ಸ್ನಾಯುಗಳನ್ನ ಬಲಪಡಿಸಿದರೆ, ಹಣ್ಣುಗಳಲ್ಲಿನ ಕಾರ್ಬೋಹೈಡ್ರೇಟ್​ಗಳು ವರ್ಕ್ ಔಟ್ ಸಮಯದಲ್ಲಿ ದೇಹಕ್ಕೆ ಬೇಕಾದ ಸಾಮರ್ಥ್ಯವನ್ನು ಒದಗಿಸುತ್ತವೆ.
4. ದ್ವಿದಳ ಧಾನ್ಯಗಳು:
ದ್ವಿದಳ ಧಾನ್ಯಗಳು ಪೋಷಕಾಂಶಗಳ ಆಗರವಾಗಿದ್ದು, ವರ್ಕ್​ ಔಟ್ ಮಾಡುವವರು ಸೇವಿಸಲೇಬೇಕು. ಬೀನ್ಸ್, ಬಟಾಣಿ, ಕಡಲೆಯಂತಹ ದ್ವಿದಳ ಧಾನ್ಯಗಳನ್ನ ಅಕ್ಕಿ, ಗೋಧಿ, ಜೋಳದಂತಹ ಧಾನ್ಯಗಳ ಜೊತೆಗೆ ಸೇವಿಸಿದರೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಲಭಿಸುತ್ತವೆ.
5. ಓಟ್ಸ್:
ಪ್ರೋಟೀನ್​ ಹಾಗೂ ಫೈಬರ್​ಗಳಿಂದ ಸಮೃದ್ಧವಾಗಿರುವ ಓಟ್ಸ್ ಬೆಳಗ್ಗಿನ ತಿಂಡಿಗೆ ಉತ್ತಮ ಆಹಾರ. ಓಟ್ಸ್​ನಲ್ಲಿ ವಿಟಮಿನ್ ಬಿ ಕೂಡ ಸಮೃದ್ಧವಾಗಿದ್ದು, ನಿಯಮಿತವಾಗಿ ವರ್ಕ್​ ಔಟ್ ಮಾಡುವವರು ಓಟ್ಸ್ ಸೇವನೆ ಮಾಡಲೇಬೇಕು. ಇದು ಕೊಬ್ಬು ರಹಿತ ಆಹಾರವಗಿದ್ದು, ಆಗಾಗ ಹಸಿವಾಗುತ್ತೆ, ಏನಾದರೂ ತಿನ್ಬೇಕು ಅನ್ಸುತ್ತೆ ಅನ್ನೋರು ಓಟ್ಸ್ ತಿನ್ನುವುದನ್ನ ಅಭ್ಯಾಸ ಮಾಡಿಕೊಳ್ಳಿ.
6. ಸೋಯಾ ಉತ್ಪನ್ನಗಳು:
ಪ್ರೋಟೀನ್​ನ ಮತ್ತೊಂದು ಮೂಲವೆಂದರೆ ಅದು ಸೋಯಾ. ಸೋಯಾ ಬೀನ್ಸ್, ಸೋಯಾ ಚಂಕ್ಸ್, ಟೋಫು, ಸೋಯಾ ಮಿಲ್ಕ್ ಹೀಗೆ ಸೋಯಾದಿಂದ ಹಲವು ಉತ್ಪನ್ನಗಳನ್ನ ತಯಾರಿಸಲಾಗುತ್ತೆ. ಎಲ್ಲದರಲ್ಲಿಯೂ ಪ್ರೋಟೀನ್ ಸಮೃದ್ಧವಾಗಿದ್ದು, ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಒಮೆಗಾ 3 ಫ್ಯಾಟಿ ಌಸಿಡ್​ಗಳನ್ನ ಹೊಂದಿದೆ.

Comments are closed.