ಕರಾವಳಿ

ಎಸ್ಸೆಸ್ಸೆಲ್ಸಿ ನಂತರ ಮುಂದೇನು.? ನೂರಕ್ಕೆ ನೂರು ಅಂಕ ಗಳಿಸುವುದು ಹೇಗೆ? :”ಗ್ಲೋರಿಯಸ್ ಭಾರತ್”ಸಂಪಾದಕರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

Pinterest LinkedIn Tumblr

ಮಂಗಳೂರು : ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಹಾಗೂ ಯುವಜನಾಂಗದಲ್ಲಿ ದೇಶ, ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಜ್ಞಾನವನ್ನು ಒಳಗೊಂಡಂತೆ, ದೇಶಾಭಿಮಾನವನ್ನು ವೃದ್ಧಿಸುವ ಸಲುವಾಗಿ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಡಾ. ಅನಂತ್ ಪ್ರಭು ಜಿ ಅವರು ‘ಗ್ಲೋರಿಯಸ್ ಭಾರತ್’ ಎಂಬ ಪುಸ್ತಕವನ್ನು ರಚಿಸಿರುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳು ಗ್ಲೋರಿಯಸ್ ಭಾರತ್ ಪುಸ್ತಕದ ಆಧಾರದಲ್ಲಿ ಡಿಸೆಂಬರ್ 12ರಂದು ಟೌನ್ ಮಹಿಳಾ ಇಂಗ್ಲೀಷ್ ಮೀಡಿಯಮ್ ಸ್ಕೂಲ್‌ನಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹರಿಪ್ರಿಯ, ಟೌನ್ ಮಹಿಳಾ ಸಮಾಜ ಹೈಸ್ಕೂಲ್, ದ್ವಿತೀಯ ಬಹುಮಾನ ಟಿ ಆರ್ ದೀಕ್ಷಾ ಮಹಾರಿಷಿ ವಿದ್ಯಾ ಮಂದಿರ, ತೃತೀಯ ಬಹುಮಾನ ಎ ಎಸ್ ಮನಸ್ವಿ ಪೂರ್ಣಪ್ರಜ್ಞ ಹೈಸ್ಕೂಲ್ , ಸಮಾಧಾನಕರ ಬಹುಮಾನವನ್ನು ಹೆಚ್ ಎ ಮೊಹಮ್ಮದ್ ಉವೆಜ್ ಖಾನ್ , ಶ್ರದ್ಧಾ ನಾಯಕ್ ಬಿಜಿ‌ಎಸ್ ಹೈ ಸ್ಕೂಲ್ ಮೂಡಿಗೆರೆ ಮತ್ತು ಅನುಶ್ರೀ ರಾವ್ ಪೂರ್ಣಪ್ರಜ್ಞ ಹೈಸ್ಕೂಲ್ ಇವರು ಹಂಚಿಕೊಂಡಿರುತ್ತಾರೆ.

ಸ್ಪರ್ಧೆಯ ಬಳಿಕ ‘ಗ್ಲೋರಿಯಸ್ ಭಾರತ್’ ಪುಸ್ತಕದ ಸಂಪಾದಕರು ಹಾಗೂ ವಿಕಾಸ್ ಎಜ್ಯುಸೊಲ್ಯುಷನ್ ನಿರ್ದೇಶಕರಾದ ಡಾ. ಅನಂತ್ ಪ್ರಭು ಜಿ ಅವರು “ಎಸ್ಸೆಸ್ಸೆಲ್ಸಿಯ ನಂತರ ಮುಂದೇನು? ಹಾಗೂ ನೂರಕ್ಕೆ ನೂರು ಅಂಕಗಳನ್ನು ಗಳಿಸುವುದು ಹೇಗೆ?” ಎಂಬ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು.

ಚಿಕ್ಕಮಗಳೂರಿನ ಉದ್ಯಮಿ ಪುರ೦ದರ ಶೆಟ್ಟಿಯವರು ಮುಖ್ಯ‌ಅತಿಥಿಗಳಾಗಿ ಭಾಗವಹಿಸಿದ್ದರು. ವಿಕಾಸ್ ಕಾಲೇಜಿನ ಲಕ್ಷ್ಮೀಶ್ ಭಟ್, ಹನೂಬ್ ಕೆ ಸಿ ಹಾಗೂ ರಜನೀಕಾಂತ್ ಕೆ, ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.

Comments are closed.