ಕರಾವಳಿ

ಮಂಗಳೂರು : ಕರಾವಳಿ ಉತ್ಸವ ಅಂಗವಾಗಿ ಕ್ರೀಡೋತ್ಸವ – ಕ್ರೀಡಾಪಟುಗಳಿಗೆ ಮುಕ್ತ ಅವಕಾಶ

Pinterest LinkedIn Tumblr

(ಕಡತ ಚಿತ್ರ)

ಮಂಗಳೂರು ಡಿಸೆಂಬರ್ 14 : ಕರಾವಳಿ ಉತ್ಸವ 2018-19ರ ಅಂಗವಾಗಿ ದ.ಕ. ಜಿಲ್ಲಾಡಳಿತ, ಕರಾವಳಿ ಉತ್ಸವ ಕ್ರೀಡಾ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಹಾಗೂ ಮಹಾನಗರಪಾಲಿಕೆ, ಮಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಹ್ಯಾಂಡ್‍ಬಾಲ್, ಲಗೋರಿ ಪಂದ್ಯಾಟವನ್ನು ಹಾಗೂ ಉಡುಪಿ ಮತ್ತು ದ. ಕ. ಜಿಲ್ಲಾ ಮಟ್ಟದ ಬಾಕ್ಸಿ ಪಂದ್ಯಾವಳಿಯನ್ನು ವಿಕಲಚೇತನ ಪುರುಷ ಮತ್ತು ಮಹಿಳೆಯರಿಗೆ ಡಿಸೆಂಬರ್ 28 ರಂದು ಪೂರ್ವಾಹ್ನ 9 ಗಂಟೆಗೆ ಮಂಗಳೂರು ಮಂಗಳಾ ಕ್ರೀಡಾಂಗಣ ಸಂಕೀರ್ಣದಲ್ಲಿರುವ ಕರಾವಳಿ ಮೈದಾನದಲ್ಲಿ ನಡೆಸಲಾಗುತ್ತದೆ.

ಅಲ್ಲದೆ ದ.ಕ. ಜಿಲ್ಲಾ ಮಟ್ಟದ ವೇಯ್ಟ್ ಲಿಫ್ಟಿಂಗ್ ಪಂದ್ಯಾಟವನ್ನು ಪುರುಷ/ಮಹಿಳೆಯರಿಗೆ ಮುಕ್ತವಾಗಿ ಡಿಸೆಂಬರ್ 29 ರಂದು ಪೂರ್ವಾಹ್ನ 8 ಗಂಟೆಗೆ ಡಾನ್‍ಬಾಸ್ಕೋ ಹಾಲ್, ಮಂಗಳೂರು ಇಲ್ಲಿ ಸಂಘಟಿಸಲಾಗುವುದು. ಈ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಲಾಗುವುದು.

ಈ ಕರಾವಳಿ ಉತ್ಸವ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವ ಕ್ರೀಡಾಪಟುಗಳು ತಮ್ಮ ಪ್ರವೇಶ ಪತ್ರವನ್ನು ಸಂಸ್ಥೆಯ ಮುಖ್ಯಸ್ಥರ ಮೂಲಕ ಡಿಸೆಂಬರ್ 22 ರ ಒಳಗಾಗಿ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ. ಜಿಲ್ಲೆ, ಮಂಗಳೂರು ಇವರಿಗೆ ಕಳುಹಿಸಿಕೊಡಬೇಕಾಗಿ ಕೋರಲಾಗಿದೆ.

ಭಾಗವಹಿಸುವ ಸ್ಪರ್ಧಾಳುಗಳು ಸ್ಪರ್ಧೆ ನಡೆಯುವ ಸ್ಥಳ ಹಾಗೂ ದಿನಾಂಕದಂದು ಪೂರ್ವಾಹ್ನ 8 ಗಂಟೆಗೆ ಹಾಜರಿರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ. 0824-2451264ನ್ನು ಅಥವಾ ಹ್ಯಾಂಡ್‍ಬಾಲ್ ಮತ್ತು ಲಗೋರಿ – ಲಿಲ್ಲಿ ಪಾಯಸ್, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ, ಮಂಗಳೂರು (9481016542). ಬಾಕ್ಸಿ ಪಂದ್ಯಾವಳಿ – ನಾರಾಯಣ, ಸೈಂಟ್ ಆಗ್ನೇಸ್ ಸ್ಪೆಷಲ್ ಸ್ಕೂಲ್ (8073246937). ವೇಯ್ಟ್ ಲಿಫ್ಟಿಂಗ್ – ಜಾನ ರೆಬೆಲ್ಲೋ, ದ.ಕ. ಜಿಲ್ಲಾ ವೇಯ್ಟ್ ಲಿಫ್ಟರ್ಸ್ ಅಸೋಸಿಯೇಶನ್ (9480532480) ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ. ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

 

Comments are closed.