ಕರಾವಳಿ

ಮಕ್ಕಳು ಚಳಿಗಾಲದಲ್ಲಿ ಹೆಲ್ದಿಯಾಗಿರಬೇಕು ಅಂದ್ರೆ ಈ ಸಿಂಪಲ್ ಟಿಪ್ಸ್ ನಿಮಗಾಗಿ…!

Pinterest LinkedIn Tumblr


ಚಳಿಗಾಲ ಮೊದಲು ಅಟ್ಯಾಕ್ ಮಾಡೋದೆ ಮಕ್ಕಳ ಮೇಲೆ. ಮಕ್ಕಳ ತ್ವಚೆ ಸೂಕ್ಷ್ಮವಾಗಿರುವುದರಿಂದ ನೈಸರ್ಗಿಕ ಬದಲಾವಣೆಗಳಿಗೆ ಬಹಳ ಬೇಗ ಪ್ರತಿಕ್ರಿಯಿಸುತ್ತದೆ. ಮೊದಲನೇ ಮಗುವಾಗಿದ್ದರೆ ತಂದೆ ತಾಯಿಗೆ ಮಗುವಿನ ಆರೈಕೆ ಮಾಡುವುದು ಸ್ವಲ್ಪ ಕಷ್ಟ. ಮಕ್ಕಳು ಚಳಿಗಾಲದಲ್ಲಿ ಚೆನ್ನಾಗಿರ್ಬೇಕು, ಹೆಲ್ದಿಯಾಗಿರಬೇಕು ಅಂದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ…

1. ಬಾಡಿ ಲೋಷನ್ ಬಳಸಿ
ಮಗುವಿನ ತ್ವಚೆ ತೇವದಿಂದ ಕೂಡಿರಲು ಬಾಡಿ ಲೋಷನ್ ಬಳಕೆ ಅತ್ಯಗತ್ಯ. ಮಕ್ಕಳ ತ್ವಚೆ ಬಹಳ ಮೃದುವಾಗಿರುವುದರಿಂದ ಚರ್ಮ ಒಣಗಿ ಉರಿ, ತುರಿಕೆ ಉಂಟಾಗಬಹುದು. ಹೀಗಾಗಿ ಪ್ಯಾರಾಬೆನ್ಸ್ ಮುಕ್ತ ಹಾಗೂ ಹಾಲು, ಬಾದಾಮಿಯನ್ನೊಳಗೊಂಡ ಬಾಡಿಲೋಷನ್ ಮಕ್ಕಳಿಗೆ ಸೂಕ್ತ.

2. ಮಸಾಜ್
ಸ್ನಾನಕ್ಕೆ ಮುಂಚೆ ಮಗುವಿನ ತ್ವಚೆಯನ್ನ ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡಬೇಕು. ಚಳಿಗಾಲದಲ್ಲಿ ರೈಸ್ ಬ್ರಾನ್​​ ಆಯಿಲ್​ನಿಂದ ಸಮೃದ್ಧವಾದ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಮಗುವಿನ ಅತಿ ಸೂಕ್ಷ್ಮ ಚರ್ಮಕ್ಕೆ ಅಗತ್ಯವಿರುವ ಪೋಷಕಾಂಶಗಳು ದೊರಕುತ್ತವೆ.

3. ಸ್ನಾನ ಹೀಗಿರಲಿ
ಮಗುವಿನ ಚರ್ಮಕ್ಕೆ ಅತಿಯಾಗಿ ಸೋಪ್ ಬಳಸಬೇಡಿ. ಚಳಿಗಾಲದಲ್ಲಿ ಚರ್ಮ ಬಹುಬೇಗ ಒಣಗುವುದರಿಂದ ಸೋಪ್ ಹಚ್ಚಿ ತುಂಬಾ ಹೊತ್ತು ಹಾಗೇ ಬಿಡಬೇಡಿ. ಇದರಿಂದ ಮಕ್ಕಳಲ್ಲಿ ಇರಿಟೇಷನ್ ಉಂಟಾಗಬಹುದು. ಅಲ್ಲದೇ ಬಹಳ ಸಮಯದವರೆಗೆ ಸ್ನಾನ ಮಾಡಿಸುವುರಿಂದ ಚರ್ಮ ಓವರ್​ಹೈಡ್ರೇಟ್ ಆಗುವ ಸಾಧ್ಯತೆ ಇದೆ. ಹೀಗಾಗಿ ತ್ವರಿತವಾಗಿ ಸ್ನಾನ ಮುಗಿಸಿ. ಸ್ನಾನದ ಅವಧಿ 5 ನಿಮಿಷ ಮೀರದಂತೆ ನೋಡಿಕೊಳ್ಳಿ.

4. ತೇವಾಂಶ ಕಾಪಾಡಿ
ಮಗುವಿನ ಚರ್ಮ ಯಾವಾಗಲೂ ತೇವದಿಂದ ಕೂಡಿರುವಂತೆ ನೋಡಿಕೊಳ್ಳಿ. ಸ್ನಾನವಾದ ಕೆಲ ಸಮಯದ ನಂತರ ಮಾಯಿಸ್ಚರೈಸರ್ ಬಳಸಿ. ತೆಂಗಿನ ಎಣ್ಣೆ, ಆಲಿವ್ ಎಣ್ಣೆ, ಬಾದಾಮಿ ಎಣ್ಣೆ ಹಾಗೂ ಒಮೇಗಾ 3, ವಿಟಮಿನ್ ಇ ಸಮೃದ್ಧವಾಗಿರುವ ಮಾಯಿಸ್ಚರೈಸಿಂಗ್ ಕ್ರೀಮ್ ಮಗುವಿನ ಚರ್ಮಕ್ಕೆ ಬೇಕಾದ ಪೋಷಕಾಂಶಗಳನ್ನ ನೀಡುತ್ತದೆ.

5. ದೇಹವನ್ನು ಬೆಚ್ಚಗಿರಿಸಿ
ಚಳಿಗಾಲದಲ್ಲಿ ನೆಗಡಿ, ಕೆಮ್ಮು ಹಾಗೂ ಜ್ವರದಂತಹ ಸಮಸ್ಯೆಗಳಿಂದ ಮಗುವನ್ನು ಕಾಪಾಡಲು ವುಲನ್ ಅಥವಾ ಕಾಟನ್ ಬಟ್ಟೆ ಬಳಸಿ. ತಲೆಗೆ ವುಲ್ಲನ್ ಕ್ಯಾಪ್ ಹಾಗೂ ಪಾದಗಳಿಗೆ ಸಾಕ್ಸ್ ಹಾಕಿ ದೇಹವನ್ನ ಆದಷ್ಟು ಬೆಚ್ಚಗಿರುವಂತೆ ನೋಡಿಕೊಳ್ಳಿ.

6. ಒಣಗಾಳಿಯಿಂದ ರಕ್ಷಣೆ
ಚಳಿಗಾಲದ ಒಣಗಾಳಿ ಮಕ್ಕಳ ತ್ವಚೆಯನ್ನ ಶುಷ್ಕಗೊಳಿಸುತ್ತದೆ. ಇದರಿಂದ ತುಟಿ ಒಡೆಯುವುದು, ಗಂಟಲು ನೋವು, ಮೂಗಿನ ಸೋಂಕುಗಳು ಉಂಟಾಗುತ್ತವೆ. ಮಗುವಿನ ತ್ವಚೆಯಲ್ಲಿ ತೇವಾಂಶವನ್ನ ಕಾಪಾಡಿಕೊಳ್ಳಲು ಮಗು ಮಲಗುವ ಕೋಣೆಯಲ್ಲಿ ಹ್ಯುಮಿಡಿಫೈರ್ ಅಥವಾ ಒಣಗಾಳಿಯನ್ನು ತೇವಗೊಳಿಸುವ ಸಾಧನವನ್ನ ಬಳಸಿ.

Comments are closed.