ಕರಾವಳಿ

ಮೇಕೆ ಹಾಲಿನ ಜೊತೆ ಕೆಮ್ಮಣ್ಣಿನ ಸಮಾಗಮದಿಂದ ಮಂಡಿಗಳ ಊತ ನಿವಾರಣೆ

Pinterest LinkedIn Tumblr

ಹೌದು ಹಿರಿಯರು ಹೇಳುತ್ತಿರುತ್ತಾರೆ ನಮ್ಮ ಮಣ್ಣಿನಲ್ಲೇ ಇದೆ ಅಂತ ಗುಣ ಅಂತ ಅದೇ ರೀತಿ ಕೆಮ್ಮಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯಕಾರಿ ಲಾಭಗಳಿವೆ. ಅವೇನು ನೋಡೋಣ ಬನ್ನಿ.

ನೀವು ಬೆಂಕಿಯಿಂದ ಏನಾದರು ಸುಟ್ಟುಕೊಂಡಿದ್ದರೆ ತಣ್ಣೀರಿನಲ್ಲಿ ಕೆಮ್ಮಣ್ಣನು ಕಲಸಿ ಚರ್ಮ ಸುಟ್ಟಿರುವ ಜಾಗಕ್ಕೆ ಲೇಪಿಸಿದರೆ ಉರಿ, ನೋವು ಕಡಿಮೆಯಾಗಿ ಗಾಯ ಬೇಗ ಗುಣವಾಗುತ್ತದೆ.

ಮುಖದಲ್ಲಿ ಕಪ್ಪು ಕಲೆಗಳು ಹೆಚ್ಚಾಗಿದ್ದರೆ ಕೆಮ್ಮಣ್ಣಿಗೆ ಮೊಸರು ಮತ್ತು ಪುದೀನಾ ಸೊಪ್ಪನ್ನು ಹಾಕಿ ಕಲಸಿ ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿದರೆ ಕಲೆಗಳು ಶಮನವಾಗುತ್ತವೆ.

ಮುಖದ ಚರ್ಮ ಒಣಗಿದ್ದರೆ ಕೆಮ್ಮಣ್ಣಿಗೆ ಬಾದಾಮಿ ಪುಡಿ, ಹಸುವಿನ ಹಾಲು ಸೇರಿಸಿ ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿ ಅರ್ಧ ಗಂಟೆ ಬಿಟ್ಟು ಮುಖ ತೊಳೆದರೆ ಚರ್ಮ ಮೃದುವಾಗುತ್ತದೆ.

ಕೆಮ್ಮಣ್ಣಿಗೆ ರೋಸ್‌ವಾಟರ್‌ ಬೆರೆಸಿ ಕಣ್ಣಿನ ರೆಪ್ಪೆಗಳ ಮೇಲೆ ಮತ್ತು ಸುತ್ತಲೂ ಹಚ್ಚಿದರೆ ಕಣ್ಣಿನ ನೋವು ಕಡಿಮೆಯಾಗುತ್ತದೆ.

ಮುಖದ ಮೇಲೆ ಮೊಡವೆಗಳಾಗಿದ್ದರೆ ಬೇವಿನ ಪುಡಿ, ಅರಿಶಿನ ಪುಡಿ ಮತ್ತು ಕೆಮ್ಮಣ್ಣನ್ನು ರೋಸ್‌ ವಾಟರ್‌ ಜತೆ ಕಲಸಿ ಮುಖಕ್ಕೆ ಲೇಪಿಸಿದರೆ ಮೊಡವೆಗಳು ನಿವಾರಣೆಯಾಗುತ್ತವೆ.

Comments are closed.