ಕರಾವಳಿ

ಹೆಚ್ಚುವರಿ ಸೋಡಾ ಕುಡಿಯುದರಿಂದ ಸ್ಥೂಲಕಾಯತೆ ಜೊತೆಗೆ ಹಲವು ಸಮಸ್ಯೆಗಳ ಅಪಾಯ

Pinterest LinkedIn Tumblr

ಸೋಡಾ (ಕೂಲ್​ ಡ್ರಿಂಕ್ಸ್) ನಮ್ಮ ದೇಹಕ್ಕೆ ಹಾನಿಕಾರಕ ಅಂತಾ ನಾವು ಬಹಳಷ್ಟು ಸಾರಿ ಕೇಳಿರುತ್ತೇವೆ. ಇದನ್ನ ಹೆಚ್ಚಾಗಿ ನಾವು ಕೂಲ್​ ಡ್ರಿಂಕ್ಸ್ ರೂಪದಲ್ಲಿ ಕುಡಿಯುತ್ತೇವೆ. ಆದ್ರೆ ಕೂಲ್​ ಡ್ರಿಂಕ್ಸ್​ನಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಯಾವುದೇ ಪೋಷಕಾಂಶಗಳು ಇರುವುದಿಲ್ಲ. ಸೋಡಾ ಮಿಶ್ರಿತ ಕೂಲ್​ ಡ್ರಿಂಕ್ಸ್ ಕುಡಿಯೋದ್ರಿಂದ ನಮ್ಮ ದೇಹದ ತೂಕ ಹೆಚ್ಚಾಗುವುದರ ಜೊತೆಗೆ ಬಿಪಿ ಮತ್ತು ಡಯಾಬಿಟೀಸ್​ ಕಾರಣವಾಗುತ್ತದೆ. ಅಷ್ಟೇ ಅಲ್ಲ ಇನ್ನು ಹಲವಾರು ಸಮಸ್ಯೆಗಳು ನಮ್ಮನ್ನ ಕಾಡುತ್ತದೆ.

1. ಸ್ಥೂಲಕಾಯತೆ
ಸ್ಥೂಲಕಾಯತೆಯ ಹಿಂದಿರುವ ಸಾಮಾನ್ಯ ಕಾರಣವೆಂದರೆ ಆಹಾರ ಸೇವನೆ. ಸೋಡಾ(ಕೂಲ್​ ಡ್ರಿಂಕ್ಸ್) ಅಭ್ಯಾಸವು ಸ್ಥೂಲಕಾಯಕ್ಕೆ ಕಾರಣವಾಗಬಹುದು. ಸಕ್ಕರೆ ಕಾರ್ಬೋನೇಟೆಡ್ ಪಾನೀಯವು ರಕ್ತದಲ್ಲಿನ ಸಕ್ಕರೆಯ ಕುಸಿತಕ್ಕೆ ಕಾರಣವಾಗಬಹುದು. ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್​ ನಡೆಸಿದ ಅಧ್ಯಯನದ ಪ್ರಕಾರ ಪ್ರತಿ ಹೆಚ್ಚುವರಿ ಸೋಡಾ ಕುಡಿಯೋದ್ರಿಂದ ಸ್ಥೂಲಕಾಯತೆಯ ಅಪಾಯವನ್ನು 1.6 ಪಟ್ಟು ಹೆಚ್ಚಿಸುತ್ತದೆ ಎಂಬುದು ಸಾಬೀತಾಗಿದೆ.

2, ರಕ್ತದಲ್ಲಿ ಸಕ್ಕರೆ ಅಂಶವನ್ನ ಹೆಚ್ಚಿಸುತ್ತದೆ
ಸೋಡ ಕುಡಿಯೋದ್ರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ. ನೀವು ಸೋಡಾ ಅಥವಾ ಕೂಲ್​ ಡ್ರಿಂಕ್ಸ್ ಕುಡಿದ ಬಳಿಕ ಮೇದೋಜ್ಜೀರಕ ಗ್ರಂಥಿ( ಪ್ಯಾಂಕ್ರೀಯಾ )ಇನ್ಸುಲಿನ್ ಅನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದರಿಂದ 15 ರಿಂದ 20 ನಿಮಿಷಗಳ ಅವಧಿಯಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಏರಿಕೆಯಾಗುತ್ತದೆ ಮತ್ತು ಲಿವರ್​ ಇನ್ಸುಲಿನ್​ ಅನ್ನ ಕೊಬ್ಬು ಅಂಶವಾಗಿ ಪ್ರತಿಕ್ರಿಯಿಸುತ್ತದೆ.

3. ಫಾಸ್ಪರಿಕ್ ಆಸಿಡ್ ಮೂಳೆಗಳನ್ನ ಮೃದುಗೊಳಿಸುತ್ತದೆ
ಸೋಡ ಮಿಶ್ರಿತ ಕೂಲ್​ ಡ್ರಿಂಕ್ಸ್​ನಲ್ಲಿ ಫಾಸ್ಪರಿಕ್ ಆಸಿಡ್ ಇರುವ ಕಾರಣ, ಸೋಡಾ ಸೇವನೆಯು ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಅನ್ನು ಹೀರಿಕೊಂಡು, ಮೂಳೆಯನ್ನ ಮೃದುವಾಗಿಸುತ್ತದೆ. ಇದರಿಂದ ಆಸ್ಟಿಯೊಪೊರೋಸಿಸ್, ಹಲ್ಲಿನ ಕುಳಿಗಳು ಮತ್ತು ಮೂಳೆ ಮೃದುಗೊಳಿಸುವಿಕೆಯಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು.

4. ಜೀರ್ಣಕ್ರಿಯೆ ಕುಂಠಿತಗೊಳಿಸುತ್ತದೆ.
ಸೋಡಾ ಮಿಶ್ರಿತ ಕೂಲ್​ ಡ್ರಿಂಕ್ಸ್ ನಿಮ್ಮ ಜೀರ್ಣಕ್ರಿಯೆಗೆ ಅಗತ್ಯವಿರುವ ಯಾವುದೇ ಪೋಷಕಾಂಶಗಳನ್ನು ನೀಡುವುದಿಲ್ಲ. ಇದಲ್ಲದೆ, ಇದು ಹೊಟ್ಟೆ ಆಮ್ಲವನ್ನು ಸಂವಹಿಸುವ ಫಾಸ್ಫಾರಿಕ್ ಆಮ್ಲವನ್ನು ಹೊಂದಿದೆ, ಇದರಿಂದ ಸೋಡಾ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಪೌಷ್ಟಿಕಾಂಶದ ಹೀರಿಕೊಳ್ಳುವಿಕೆಯನ್ನು ನಿರ್ಬಂಧಿಸುತ್ತದೆ. ನಾವು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದಾಗ, ಇದು ನಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ.

5. ದೇಹವನ್ನ ಡಿ-ಹೈಡ್ರೇಟ್​ ಮಾಡುತ್ತದೆ
ಸೋಡಾದಲ್ಲಿ ಇರುವ ಹೆಚ್ಚಿನ ಸಕ್ಕರೆ ಅಂಶ, ಸೋಡಿಯಂ ಮತ್ತು ಕೆಫೀನ್ ಅಂಶಗಳು ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ಸೋಡಾಗಳಲ್ಲಿನ ಕ್ಯಾರಮೆಲ್ ಬಣ್ಣ ಕ್ಯಾನ್ಸರ್ ಅಪಾಯ ತಂದೊಡ್ಡಬಹುದು. ಜಾನ್ಸ್ ಹಾಪ್ಕಿನ್ಸ್ ಬ್ಲೂಮ್ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್​ ನಡೆಸಿದ ಅಧ್ಯಯನವೊಂದರಲ್ಲಿ ಸೋಡಾಗಳಲ್ಲಿ ಕ್ಯಾನ್ಸರ್ ಅಪಾಯಕ್ಕೆ ಸಂಬಂಧಿಸಿದೆ ಅಂಶವೊಂದು ಪತ್ತೆಯಾಗಿದೆ. ಸಂಶೋಧಕರ ಪ್ರಕಾರ, ಸೋಡಾ ತಯಾರಕರು ಬಳಸಿದ ಕ್ಯಾರಮೆಲ್ ಬಣ್ಣವು 4-ಮೆಥಿಲಿಮಿಡಜೋಲ್ (4-ಮೆಲ್) ಎಂದು ಕರೆಯಲ್ಪಡುವ ಕ್ಯಾನ್ಸರ್ ಜನಕವನ್ನು ಒಳಗೊಂಡಿದೆ ಅಂತಾ ಹೇಳುತ್ತದೆ.

Comments are closed.