ಕರಾವಳಿ

ವೇಶ್ಯಾವಾಟಿಕೆ ಆರೋಪ: ಮಂಗಳೂರಿನ ಮಸಾಜ್ ಪಾರ್ಲರ್ ಗೆ ದಾಳಿ : ಮೂವರು ಯುವತಿಯರ ರಕ್ಷಣೆ

Pinterest LinkedIn Tumblr

ಮಂಗಳೂರು : ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಆರ್ಯುವೇಧಿಕ್ ಥೆರಫಿ ಸೆಂಟರ್‌ವೊಂದಕ್ಕೆ ದಾಳಿ ನಡೆಸಿರುವ ಮಂಗಳೂರು ಸಿಸಿಬಿ ಪೊಲೀಸರು ಮೂವರು ನೊಂದ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

ಮಂಗಳೂರು ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಎಸ್ ರಾವ್ ರಸ್ತೆಯ ಕಟ್ಟಡವೊಂದರಲ್ಲಿ ಅಕ್ರಮವಾಗಿ ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಮಂಗಳೂರು ನಗರದ ಕೆ.ಎಸ್ ರಾವ್ ರಸ್ತೆಯಲ್ಲಿರುವ ಕ್ಲಾಸಿಕ್ ಆರ್ಕೆಡ್ ಕಟ್ಟಡದಲ್ಲಿ ದೀಪಂ ಆರ್ಯುವೇಧಿಕ್ ಥೆರಫಿ ಸೆಂಟರ್ ಎಂಬ ಹೆಸರಿನ ಮಸಾಜ್ ಪಾರ್ಲರ್ ನಲ್ಲಿ ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ ವೃತ್ತಿಯನ್ನು ನಡೆಸುತ್ತಿದ್ದ ನೊಂದ ಮೂರು ಮಂದಿ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಈ ಮಸಾಜ್ ಪಾರ್ಲರ್ ನಲ್ಲಿ ಬಾಡಿ ಮಸಾಜ್ ಎಂಬ ಹೆಸರಿನಲ್ಲಿ ಯುವತಿಯರನ್ನು ಗಿರಾಕಿಗಳಿಗೆ ಒದಗಿಸಿ ವೇಶ್ಯಾವಾಟಿಕೆಗೆ ಪ್ರೇರೆಪಿಸುತ್ತಿದ್ದರು. ಈ ಮಸಾಜ್ ಪಾರ್ಲರ್ ನ್ನು ನಡೆಸುತ್ತಿದ್ದ ಆರೋಪಿ ರೋಶನ್ ಎಂಬಾತನು ದಾಳಿ ಸಮಯ ಪರಾರಿಯಾಗಿದ್ದಾನೆ.
ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಉತ್ತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುರೇಶ್ ಕುಮಾರ್ ಹಾಗೂ ಸಿಸಿಬಿ ಘಟಕದ ಪಿಎಸ್ಐ ಶ್ಯಾಮ್ ಸುಂದರ್, ಹೆಚ್.ಡಿ.ಕಬ್ಬಾಳ್ ರಾಜ್ ಹಾಗೂ ಸಿಸಿಬಿ ಘಟಕದ ಮತ್ತು ಸಿಬ್ಬಂದಿಯವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments are closed.