ಕ್ರೀಡೆ

ಎರಡನೇ ಇನ್ನಿಂಗ್ಸ್ ನಲ್ಲೂ ಕೆಎಲ್ ರಾಹುಲ್ ವಿಫಲರಾದರೆ ಯಾವುದೇ ಮುಲಾಜಿಲ್ಲದೇ ತಂಡದಿಂದ ಕಿತ್ತು ಹಾಕಿ : ಸುನಿಲ್ ಗವಾಸ್ಕರ್

Pinterest LinkedIn Tumblr

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲೂ ಕೆಎಲ್ ರಾಹುಲ್ ವಿಫಲರಾದರೆ ಯಾವುದೇ ಮುಲಾಜಿಲ್ಲದೇ ತಂಡದಿಂದ ಕಿತ್ತು ಹಾಕಿ ಎಂದು ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ದ ಅಡಿಲೇಡ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸಮನ್ ಪೆವಿಲಿಯನ್ ಪರೇಡ್ ಅನ್ನು ತೀಕ್ಷ್ಣವಾಗಿ ಟೀಕಿಸಿದ ಗವಾಸ್ಕರ್, ಭಾರತೀಯ ಬ್ಯಾಟ್ಸಮನ್ ಗಳು ಕಳಪೆ ರೀತಿಯಲ್ಲಿ ಔಟಾದರು. ಪ್ರಮುಖವಾಗಿ ಕೆಎಲ್ ರಾಹುಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗವಾಸ್ಕರ್ ಅವರು, ರಾಹುಲ್ ಮೈದಾನದಲ್ಲಿ ಆತ್ಮ ವಿಶ್ವಾಸದಿಂದ ಬ್ಯಾಟಿಂಗ್ ಮಾಡಲಿಲ್ಲ. ಅವರು ಮತ್ತೆ ಎರಡನೇ ಇನ್ನಿಂಗ್ಸ್ ನಲ್ಲೂ ವಿಫಲರಾದರೆ ಖಂಡಿತಾ ಅವರನ್ನು ಯಾವುದೇ ಮುಲಾಜಿಲ್ಲದೇ ಕೈ ಬಿಡಬೇಕು ಎಂದು ಹೇಳಿದರು.

ಇಂದು ಮೈದಾನದಲ್ಲಿ ಇದ್ದದು ನಾನು ಕಂಡ ರಾಹುಲ್ ಅಲ್ಲ. ನಾನು ಕಂಡ ರಾಹುಲ್ ರಲ್ಲಿ ಆತ್ಮವಿಶ್ವಾಸ ಮತ್ತು ತಂಡಕ್ಕಾಗಿ ಎಂತಹುದೇ ಪರಿಸ್ಥಿತಿ ನಿಭಾಯಿಸುವ ತಾಕತ್ತು ಇತ್ತು. ಆದರೆ ಪ್ರಸ್ತುತ ಈ ಎರಡೂ ಗುಣಗಳು ರಾಹುಲ್ ರಲ್ಲಿ ಕಾಣುತ್ತಿಲ್ಲ. ಲೆಗ್ ಸ್ಟಂಪ್ ನಿಂದಾಚೆ ಹೋಗುವ ಬಾಲ್ ಅನ್ನು ಸುಖಾಸುಮ್ಮನೆ ಕೆಣಕಿ ರಾಹುಲ್ ಔಟ್ ಆಗಿದ್ದಾರೆ. ಓರ್ವ ಬ್ಯಾಟ್ಸಮನ್ ಪ್ರಮುಖವಾಗಿ ರಾಹುಲ್ ರಂತಹ ಎತ್ತರದ ಬ್ಯಾಟ್ಸಮನ್ ಗಳಿಗೆ ಲೆಗ್ ಸ್ಟಂಪ್ ಎಸೆತಗಳ ಕುರಿತು ಎಚ್ಚರವಿರಬೇಕು. ಆದರೆ ನಾನು ಇಂದು ಬ್ಯಾಟಿಂಗ್ ಮಾಡಿದ ರಾಹುಲ್ ಇದೇ ಮೊದಲ ಬಾರಿಗೆ ತಾವು ಲೆಗ್ ಸ್ಟಂಪ್ ಎಸೆತಗಳನ್ನು ಎದುರಿಸುತ್ತಿರುವಂತೆ ಕಂಡಿತು.

ರಾಹುಲ್ ತಮ್ಮ ಹಳೆಯ ತಪ್ಪುಗಳನ್ನು ತಿದ್ದುಕೊಂಡು ಆಡುವ ಮನೋಭಾದಲ್ಲಿಲ್ಲ. ಹೀಗಾಗಿ 2ನೇ ಇನ್ನಿಂಗ್ಸ್ ನಲ್ಲೂ ಅವರ ವೈಫಲ್ಯ ಮುಂದುವರೆದರೆ ಅವರನ್ನು ತಂಡದಿಂದ ಕೈ ಬಿಡುವುದು ಸೂಕ್ತ ಎಂದು ಗವಾಸ್ಕರ್ ಹೇಳಿದರು.

Comments are closed.