ಕರಾವಳಿ

ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ : ಪದಕ ಪಡೆದ ಮಂಗಳೂರಿನ ಕರಾಟೆ ಪಟುಗಳು

Pinterest LinkedIn Tumblr

ಮಂಗಳೂರು : ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಪದಕ ಪಡೆದ ಕರಾಟೆ ಪಟುಗಳು ಮಾನ್ವಿತಾ ಕೆ .ಶೆಟ್ಟಿ, ನಿಧಿತ್ ಕೆ ಶೆಟ್ಟಿ ಮತ್ತು ಎ.ಕೃಷ್ಣ ಶೆಟ್ಟಿ ತಾರೆಮಾರು, ಜಪ್ಪಿನ ಮೊಗೇರಿನ ಬಂಟರ ಸಂಘದಲ್ಲಿ ಕರಾಟೆ ತರಬೇತು ಪಡೆಯುತ್ತಿದ್ದಾರೆ.

10 ವರ್ಷದ ಬಾಲಕಿಯರ ಕಟ ವಿಭಾಗದಲ್ಲಿ ಮಾನ್ವಿತಾ ಕೆ .ಶೆಟ್ಟಿ ಚಿನ್ನದ ಪದಕ ,10 ವರ್ಷದ ಮೇಲ್ಪಟ್ಟ ಕುಮಿತೇ ವಿಭಾಗದಲ್ಲಿ ನಿಧಿತ್ ಕೆ ಶೆಟ್ಟಿ ಕಂಚಿನ ಪದಕ ಹಾಗು 70 ಕೆ.ಜಿ. ಮೇಲ್ಪಟ್ಟ ಕುಮಿತೇ ವಿಭಾಗದಲ್ಲಿ ಎ.ಕೃಷ್ಣ ಶೆಟ್ಟಿ ತಾರೆಮಾರು ಕಂಚಿನ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ಇವರೆಲ್ಲರೂ ಕರಾಟೆ ಶಿಕ್ಷಕ ಶ್ರೀ ನಾಗೇಶ್ ಎಕ್ಕೂರು ಅವರಿಂದ ತರಬೇತು ಪಡೆಯುತ್ತಿದ್ದಾರೆ.

ಲಯನ್ ಎ.ಕೃಷ್ಣ ಶೆಟ್ಟಿ ತಾರೆಮಾರು ಇವರು ಬೆಳ್ತಂಗಡಿ ತಾಲೂಕ ಮಚ್ಚಿನ ಗ್ರಾಮದ ವಿಠಲಶೆಟ್ಟಿ ತಾರೆಮಾರು ಮತ್ತು ಸುಂದರಿ ಶೆಟ್ಟಿ ದಂಪತಿಗಳ ಪುತ್ರರಾಗಿದ್ದು ,ಮಂಗಳೂರಿನ ಖ್ಯಾತ ಕ್ರೀಡಾ ಪೋಷಕ, ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಶ್ರೀ ಎ ಸದಾನಂದ ಶೆಟ್ಟಿಯವರ ಮಾರ್ಗದರ್ಶನದಲ್ಲಿ ವಿವಿಧ ಸಂಘಟನೆಯಲ್ಲಿ ತೊಡಗಿಸಿಗೊಂಡಿದ್ದರೆ.

ಪಟ್ಲ ಫೌಂಡೇಶನ್ ಮಂಗಳೂರು ಘಟಕದ ಪ್ರದಾನ ಕಾರ್ಯದರ್ಶಿಯಾಗಿ, ಯೂಥ್ ಬಂಟ್ಸ್ ಮಂಗಳೂರಿನ ಸ್ಥಾಪಕ ಅಧ್ಯಕ್ಷರಾಗಿ, ಕ್ರೀಡಾ ಭಾರತೀ ಮಂಗಳೂರು ಇದರ ಜೊತೆ ಕಾರ್ಯದರ್ಶಿಯಾಗಿ ಇನ್ನು ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಗುರುತಿಸಿಗೊಂಡಿದ್ದಾರೆ.

Comments are closed.