ಕರಾವಳಿ

ದೇಹದ ಪಚನಕ್ರಿಯೆ ಸಕ್ರಿಯವಾಗಿ ನಡೆಯಲು ಇದರಲ್ಲಿರುವ ಔಷಧಿ ಗುಣ ಸಹಕಾರಿ

Pinterest LinkedIn Tumblr

ಜೀರಿಗೆ ಕೇವಲ ಮಸಾಲೆಯಾಗಿ ಬಳಕೆಗೆ ಸೀಮಿತವಾಗಿಲ್ಲ, ಅದನ್ನು ಹೊರತುಪಡಿಸಿ ಔಷಧಿಯಾಗಿಯೂ ಉಪಯೋಗಿಸಲಾಗುತ್ತದೆ. ಜೀರಿಗೆಯು ಅಡುಗೆಯ ರುಚಿಯನ್ನು ಹೆಚ್ಚಿಸಿದರೆ ಇದರಲ್ಲಿನ ಔಷಧಿ ಗುಣಗಳು ಆರೋಗ್ಯವನ್ನು ಕಾಪಾಡುತ್ತದೆ.

ಜೀರಿಗೆ ನೀರಿನಿಂದ ಏನೆಲ್ಲಾ ಲಾಭಗಳಿವೆಯೆನ್ನುವದು ನೋಡಿ:
ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಸೇವಿಸುವುದರಿಂದ ಅನೇಕ ರೀತಿಯಲ್ಲಿ ಆರೋಗ್ಯಕ್ಕೆ ಲಾಭವಿದೆ. ಇದಕ್ಕಾಗಿ ಒಂದು ಕಪ್​ ನೀರಿಗೆ ಸ್ವಲ್ಪ ಜೀರಿಗೆಯನ್ನು ಹಾಕಿ ಕುದಿಸಿ, ರಾತ್ರಿಯೆಲ್ಲಾ ಹಾಗೆ ಇಡಿ. ಬೆಳಗ್ಗೆ ಎದ್ದ ಕೂಡಲೆ ಇದನ್ನು ಸೇವಿಸಿ,ಹೊಟ್ಟೆಯ ಆರೋಗ್ಯ ಕಾಪಾಡುತ್ತದೆ.

ಜೀರಿಗೆ ನೀರು ಅಜೀರ್ಣ ಮತ್ತು ಆ್ಯಸಿಡಿಟಿ ಸಮಸ್ಯೆಗೆ ಉತ್ತಮ ಪರಿಹಾರ, ಜೊತೆಗೆ ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ. ಎಲ್ಲಾ ರೀತಿಯ ಅಜೀರ್ಣ ಸಮಸ್ಯೆಗೆ ಜೀರಿಗೆ ನೀರು ಉತ್ತಮ ಔಷಧಿ. ಪ್ರತಿನಿತ್ಯ ಜೀರಿಗೆ ನೀರು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಿಂದ ಪ್ರತಿನಿತ್ಯ ನೀವು ಯಾವುದೇ ಆರೋಗ್ಯ ಸಮಸ್ಯೆಯಿಲ್ಲದೇ ಲವಲವಿಕೆಯಿಂದ ಇರಬಹುದು.

ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸಮತೋಲನಕ್ಕೆ ಬರುತ್ತದೆ. ಇದು ನೈಸರ್ಗಿಕವಾಗಿಯೇ ದೇಹದಲ್ಲಿ ಇನ್ಸುಲಿನ್​ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಇದು ಉತ್ತಮ ಔಷಧಿ ಎನ್ನಬಹುದು. ಜೀರಿಗೆಯಲ್ಲಿ ಪೊಟ್ಯಾಶಿಯಮ್​ ಪ್ರಮಾಣ ಇದ್ದು, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಜೀರಿಗೆಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣಾಂಶವಿದೆ. ಹಾಗಾಗಿ ಕಬ್ಬಿಣಾಂಶ ಕಡಿಮೆಯಾಗಿ ಅನಿಮಿಯಾ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಇದು ಉತ್ತಮ ಆಹಾರ. ದೇಹದಲ್ಲಿ ಪಚನಕ್ರಿಯೆ ಸಕ್ರಿಯವಾಗಿ ನಡೆಯಲು ಜೀರಿಗೆ ಸಹಾಯಮಾಡುತ್ತದೆ, ಇದರಿಂದ ಎನರ್ಜಿ ಮಟ್ಟ ಹೆಚ್ಚುತ್ತದೆ. ಅರ್ಧ ದಿನಕ್ಕೆ ಸುಸ್ತಾಯಿತು ಎಂದು ಕೂರುವವರಿಗೆ ಇದು ಉತ್ತಮ ಡ್ರಿಂಕ್​ ಎನ್ನಬಹುದು.

Comments are closed.