ಕರಾವಳಿ

ದೇಹದಲ್ಲಿನ ಫ್ರೀ ರಾಡಿಕಲ್​ಗ​ಳು ಉಂಟು ಮಾಡುವ ಹಾನಿಯ ವಿರುದ್ಧ ಹೋರಾಡುವಲ್ಲಿ ಇದು ಸಹಕಾರಿ

Pinterest LinkedIn Tumblr

ಚಕ್ಕೆಯ ಸುವಾಸನೆ, ಅದರ ವಿಶಿಷ್ಟವಾದ ಪರಿಮಳ ಮತ್ತು ಅದರ ಔಷಧಿಯ ಗುಣಗಳಿಂದ ಸಾವಿರಾರು ವರ್ಷಗಳಿಂದ, ಚಕ್ಕೆಯನ್ನ ಬಳಸಲಾಗುತ್ತದೆ. ಚಕ್ಕೆಯಲ್ಲಿನ ಌಂಟಿ ಌಕ್ಸಿಡೆಂಟ್ಸ್​ ಗುಣ ದೇಹದಲ್ಲಿನ ಫ್ರೀ ರಾಡಿಕಲ್​ಗ​ಳು ಉಂಟು ಮಾಡುವ ಹಾನಿಯ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತದೆ.

ಚಕ್ಕೆಯಲ್ಲಿ ನಾಲ್ಕು ಬಗೆಗಳಿವೆ
1) ಇಂಡೋನೇಷಿಯನ್ ಚಕ್ಕೆ,
2 )ಸೈಗೋನ್ ಚಕ್ಕೆ,
3 ಕ್ಯಾಸಿಯ ಚಕ್ಕೆ
4) ಸಿಲೋನ್ ಚಕ್ಕೆ.

ಚಕ್ಕೆ ಚರ್ಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ :
1. ಮೊಡವೆ ಚಿಕಿತ್ಸೆಗಾಗಿ ಚಕ್ಕೆ ಅದ್ಭುತ ಪರಿಹಾರ:
ಚಕ್ಕೆಯಲ್ಲಿನ ಌಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಮೊಡವೆ ಸಮಸ್ಯೆಯನ್ನ ಎದುರುಸುತ್ತಿರುವವರಿಗೆ ನಿಜವಾಗಿಯೂ ಸಹಾಯಕಾರಿ. ನಿಮ್ಮ ಆಹಾರದಲ್ಲಿ ಚಕ್ಕೆ ಸೇರಿಸುವುದರಿಂದ ಮೊಡವೆ ಹೆಚ್ಚಿಸುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವಲ್ಲಿ ಚಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ, ಮನೆಯಲ್ಲಿ ಮುಖಕ್ಕೆ ಚಕ್ಕೆಯ ಫೇಸ್​ ಪ್ಯಾಕ್​​​ ಹಾಕಿಕೊಳ್ಳುವುದರಿಂದ ಮೊಡವೆಯನ್ನ ನಿಯಂತ್ರಿಸುತ್ತದೆ. ಅದಕ್ಕಾಗಿ 1 ಟೀಸ್ಪೂನ್ ಚಕ್ಕೆಗೆ 3 ಟೀಸ್ಪೂನ್ ಜೇನುತುಪ್ಪವನ್ನು ಮಿಶ್ರಣ ಮಾಡಿ. 10 ನಿಮಿಷಗಳ ಕಾಲ ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಕೆಂಪು ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಚರ್ಮದ ತೇವಾಂಶವನ್ನು ಕಾಪಾಡುತ್ತದೆ.

2. ಚರ್ಮಕ್ಕೆ ಹೊಳಪು
ಚಕ್ಕೆ ಚರ್ಮದ ಹೊಳಪನ್ನ ನೀಡುತ್ತದೆ. ಇದು ಮೊಡವೆ ಚರ್ಮದ, ಕಲೆಗಳು, ಗುರುತುಗಳು ಮರೆಮಾಚಲು ಸಹಾಯ ಮಾಡುತ್ತದೆ.

3 ಮುಖದ ಚರ್ಮದ ರಕ್ತಚಲನೆ ಉಪಕಾರಿ
ಚಕ್ಕೆಯನ್ನ ಮುಖಕ್ಕೆ ಬಳಸುವುದರಿಂದ ಮುಖದ ಚರ್ಮದ ರಕ್ತ ಸಂಚಾರವನ್ನ ಹೆಚ್ಚಿಸುತ್ತದೆ. ಮುಖದಲ್ಲಿನ ಕಲೆಗಳನ್ನ ತೊಡೆದು ಹಾಕಲು ಸಹಾಯ ಮಾಡುತ್ತದೆ. ಪೆಟ್ರೋಲಿಯಂ ಜೆಲ್ಲಿಯಲ್ಲಿ ಚಕ್ಕೆ ಎಣ್ಣೆಯನ್ನ ಅಗತ್ಯ ಪ್ರಮಾಣದಲ್ಲಿ ಮಿಶ್ರಣ ಮಾಡಿ ಮತ್ತು ಮುಖದ ಮೇಲೆ ಹಚ್ಚಿಕೊಳ್ಳಿ ಇದು ನಮ್ಮ ಮುಖದಲ್ಲಿನ ರಕ್ತಚಲನೆಗೆ ಉಪಕಾರಿ.

4. ತುಟಿಗಳ ಅಂದ ಹೆಚ್ಚಿಸುತ್ತದೆ
ತುಂಬಾ ತೆಳ್ಳಗಿನ ತುಟಿಗಳನ್ನ ಯಾರೂ ಇಷ್ಟ ಪಡಲ್ಲ. ಕೆಲವು ಯುವತಿಯರು, ತಮಗಿಷ್ಟವಾದ ತುಟಿಯ ಆಕಾರ ಪಡೆಯಲು ಅನೇಕ ಪ್ರಯತ್ನ ನಡೆಸುತ್ತಾರೆ. ಪ್ಲಮ್ಪರ್(​ದಪ್ಪ) ತುಟಿಗಳನ್ನ ಪಡೆಯಲು, ನಿಮ್ಮ ತುಟಿಗಳಿಗೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ, ನಂತರದ ಚಕ್ಕೆಯನ್ನ ಹಚ್ಚಿ. ಕೆಲವು ಸೆಕೆಂಡುಗಳ ಕಾಲ ನಿಮ್ಮ ತುಟಿಗಳ ಮೇಲೆ ಮಿಶ್ರಣವನ್ನು ಸಾವರಿಸಿ ಮತ್ತು ಅದನ್ನು ಒಂದು ನಿಮಿಷ ಅಥವಾ ಅದಕ್ಕೂ ಹೆಚ್ಚು ಕಾಲ ಹಾಗೆ ಇರಲು ಬಿಡಿ. ಆರಂಭದಲ್ಲಿ ನಿಮಗೆ ಜುಮ್ಮೆನಿಸುವ ಸಂವೇದನೆಯ ಅನುಭವ ಆಗಬಹುದು. ಉರಿಯುಂಟಾದರೆ, ಆ ಸಂದರ್ಭದಲ್ಲಿ ಪೆಟ್ರೋಲಿಯಂ ಜೆಲ್ಲಿಯ ಸ್ವಲ್ಪ ಹೆಚ್ಚಾಗಿ ಹಚ್ಚಿ. ಈ ರೀತಿ ನೀವು ಕೆಲವು ಸಮಯ ಮಾಡುತ್ತಾ ಬಂದರೆ ಸುಂದರವಾದ ತುಟಿಗಳನ್ನ ಪಡೆಯಬಹುದು.

ಆದರೆ ಚಕ್ಕೆಯನ್ನ ಬಳಸುವುದಕ್ಕೂ ಮುನ್ನ ನಿಮಗೊಂದು ಕಿವಿ ಮಾತಿದೆ. ಚಕ್ಕೆಯನ್ನ ನಿಮ್ಮ ಚರ್ಮದ ಮೇಲೆ ನೇರವಾಗಿ ಚಕ್ಕೆಯನ್ನ ಹಚ್ಚಬೇಡಿ. ಎಕೆಂದರೆ ಚಕ್ಕೆಗೆ ಚರ್ಮದ ಉರಿಯನ್ನು ಉಂಟುಮಾಡುತ್ತದೆ. ಆದ್ದರಿಂದ ಅದಕ್ಕೆ ಪೆಟ್ರೋಲಿಯಂ ಜೆಲ್ಲಿ, ಜೇನುತುಪ್ಪಗಳನ್ನ ಬಳಸಿ. ಆಗ ನೀವು ಉತ್ತಮ ಫಲಿತಾಂಶವನ್ನ ಪಡೆಯಬಹುದು.

Comments are closed.