ಕರಾವಳಿ

ಚಳಿಗಾಲದಲ್ಲಿ ಬರುವ ರೋಗಗಳಿಗೆ ರಾಮಬಾಣ “ಒಗ್ಗರಣೆ ಡಬ್ಬಿ”

Pinterest LinkedIn Tumblr


ಚಳಿಗಾಲ ಬರುತ್ತಲೇ ತನ್ನೊಂದಿಗೆ ರೋಗಗಳನ್ನು ಕೂಡ ಕರೆದುಕೊಂಡು ಬರುತ್ತೆ. ಉಷ್ಣತೆ ಆಗಾಗ ಏರುಪೇರಾಗುವುದರಿಂದ ಹಲವಾರು ಆರೋಗ್ಯ ಸಮಸ್ಯೆಯನ್ನ ಎದುರಿಸಬೇಕಾಗುತ್ತೆ. ಅಯ್ಯೋ ಚಳಿಗಾಲದಲ್ಲಿ ಇದೆಲ್ಲಾ ಕಾಮನ್. ಇದಕ್ಕೆಲ್ಲಾ ಯಾರು ಡಾಕ್ಟರ್ ಹತ್ರ ಹೋಗ್ತಾರೆ ಅಂತ ಎಲ್ಲರೂ ಸುಮ್ಮನಿದ್ದು ಬಿಡ್ತಾರೆ. ಆದ್ರೆ, ನಿಮ್ಮ ಅಡುಗೆ ಮನೇಲಿರೋ ಮಸಾಲೆ ಪದಾಥರ್ಗಳು ಚಳಿಗಾಲದ ರೋಗಗಳಿಗೆ ರಾಮಬಾಣ ಅನ್ನೋದು ನಿಮಗೆ ಗೊತ್ತಿದ್ಯಾ…? ಚಳಿಗಾಲದಲ್ಲಿ ಬರೋ ರೋಗಗಳಿಂದ ದೂರವಿರಿಸುತ್ತೆ ಈ 8 ಮಸಾಲೆ ಪದಾರ್ಥಗಳು.

1. ಕೇಸರಿ
ರಾಯಲ್ ಮಸಾಲೆ ಪದಾರ್ಥಗಳಲ್ಲಿ ಒಂದಾದ ಕೇಸರಿ ತುಸು ದುಬಾರಿ ಅನ್ನಿಸಿದ್ರೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹವಾಮಾನದ ಏರುಪೇರುನಿಂದಾಗಿ ಉಂಟಾಗುವ ನೆಗಡಿ, ಶೀತದಿಂದ ಕೇಸರಿ ತ್ವರಿತ ಪರಿಹಾರ ನೀಡುತ್ತದೆ. ಕೆಲವು ಕೇಸರಿ ದಳಗಳನ್ನು ಹಾಲಿಗೆ ಬೆರೆಸಿ ಹಣೆಯ ಮೇಲೆ ಹಚ್ಚಿದರೆ ಸಾಕು ಶೀತ ಮಂಗಮಾಯವಾಗುತ್ತದೆ.

2. ಅರಿಶಿನ
ಹಾಲಿನೊಂದಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೇ ವಿವಿಧ ಸೋಂಕುಗಳಿಂದ ದೂರವಿರಿಸುತ್ತದೆ. ಅರಿಶಿನದಲ್ಲಿರುವ ಌಂಟಿಆಕ್ಸಿಡೆಂಟ್​ಗಳು ಹಲವಾರು ರೋಗಗಳನ್ನ ತಡೆಗಟ್ಟುವಲ್ಲಿ ಸಹಕರಿಸುತ್ತವೆ.

3. ಮೆಂತ್ಯೆ
ರುಚಿಯಲ್ಲಿ ಕಹಿ ಅನಿಸಿದ್ರೂ ಮೆಂತ್ಯೆ ಬೀಜಗಳಲ್ಲಿ ಅತ್ಯುತ್ತಮವಾದ ಌಂಟಿವೈರಲ್ ಗುಣಲಕ್ಷಣಗಳಿವೆ. ಆಗಾಗ ಸೀನು ಬರುತ್ತಿದ್ರೆ, ಗಂಟಲಲಲ್ಲಿ ನೋವುಂಟಾಗ್ತಾ ಇದ್ರೆ, ಮೆಂತ್ಯೆ ಸೇವನೆ ಉಪಶಮನ ನೀಡುತ್ತದೆ.

4. ಜಾಯಿಕಾಯಿ
ಉಷ್ಣ ಪ್ರಕೃತಿಯುಳ್ಳ ಜಾಯಿಕಾಯಿ ಚಳಿಗಾಲದಲ್ಲಿ ದೇಹವನ್ನ ಬೆಚ್ಚಗಿರಿಸುವುದಲ್ಲದೇ ಇದರಲ್ಲಿ ಌಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಹೆಚ್ಚಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಿಸಿ ಹಾಲಿಗೆ, ಜಾಯಿಕಾಯಿ ಪುಡಿ, ಕೆಲವು ಹನಿ ಜೇನುತುಪ್ಪ ಹಾಗೂ ಏಲಕ್ಕಿ ಸೇರಿಸಿ ಪಾನೀಯದ ರೀತಿ ಸೇವಿಸಿದರೆ ಚಳಿಗಾಲದಲ್ಲಿ ಉಂಟಾಗುವ ಖಿನ್ನತೆಯನ್ನ (winter blues) ದೂರವಿರಿಸುತ್ತದೆ.

5. ಕರಿ ಮೆಣಸು
ದೇಹದ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುವಲ್ಲಿ ಕರಿಮೆಣಸು ಸಹಕಾರಿಯಾಗುತ್ತದೆ. ಅಲ್ಲದೇ ನೆಗಡಿ, ಶೀತ, ಕೆಮ್ಮಿಗೆ ಕರಿಮೆಣಸು ರಾಮಬಾಣವಾಗಿದೆ. ರೋಗಗಳನ್ನುಂಟುಮಾಡುವ ಸೋಂಕುಗಳನ್ನ ನಾಶ ಮಾಡಿ ದೇಹದ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ.

6. ಲವಂಗ
ಉರಿಯೂತ, ನಂಜು, ಹಾಗೂ ಹಲ್ಲಿನ ಸಮಸ್ಯೆಗಳಿಂದ ಮುಕ್ತಿ ದೊರಕಿಸುವಲ್ಲಿ ಲವಂಗ ಕಾರ್ಯನಿರ್ವಹಿಸುತ್ತದೆ. ರುಚಿಯಲ್ಲಿ ಒಗರಾಗಿದ್ದರೂ ಸಹ ಭಾರತೀಯ ಭಕ್ಷ್ಯಗಳಿಗೆ ವಿಶಿಷ್ಟ ಪರಿಮಳವನ್ನು ನೀಡುತ್ತದೆ. ಅಲ್ಲದೇ ಖಾದ್ಯದ ರುಚಿಯನ್ನೂ ಹೆಚ್ಚಿಸುತ್ತದೆ.

7. ಏಲಕ್ಕಿ
ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಏಲಕ್ಕಿ ಉಪಶಮನ ನೀಡುತ್ತದೆ. ಏಲಕ್ಕಿಯಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿದ್ದು, ದೇಹದ ಸಂಯೋಜಕ ಅಂಗಾಂಶಗಳ ಆರೋಗ್ಯ ವೃದ್ಧಿಸುವಲ್ಲಿ ಸಹಕರಿಸುತ್ತದೆ. ನೆಗಡಿಯಾದರೆ ಚಹಾ ಮಾಡುವಾಗ ಒಂದೆರಡು ಏಲಕ್ಕಿ ಹಾಕಿ ಕುಡಿದರೆ ನೆಗಡಿಯಿದ ತ್ವರಿತ ಉಪಶಮನ ದೊರೆಯುತ್ತದೆ. ಚಹಾದಿಂದ ಹಿಡಿದು ಬಿರಿಯಾನಿವರೆಗೆ ಬಹುತೇಕ ಎಲ್ಲಾ ಅಡುಗೆಗಳಲ್ಲಿ ಏಲಕ್ಕಿಯನ್ನ ಬಳಸಲಾಗುತ್ತದೆ.

8. ದಾಲ್ಚಿನ್ನಿ
ಇನ್ನು ದಾಲ್ಚಿನ್ನಿ ಕೂಡ ಅಧಿಕ ರೋಗ ನಿರೋಧಕ ಶಕ್ತಿ ಹೊಂದಿರುವ ಮಸಾಲೆ ಪದಾರ್ಥಗಳಲ್ಲಿ ಒಂದು. ದೈನಂದಿನ ಚಹಾದೊಂದಿಗೆ ದಾಲ್ಚಿನ್ನಿ ಪುಡಿ ಹಾಗೂ ಶುಂಠಿ ಬೆರೆಸಿ ಕುಡಿದರೆ, ದೇಹಕ್ಕೆ ತಾಜಾತನ ದೊರೆಯುವುದಲ್ಲದೇ ನೆಗಡಿ, ಕೆಮ್ಮಿನಿಂದ ಮುಕ್ತಿ ದೊರೆಯುತ್ತದೆ. ಅಲ್ಲದೇ, ದೇಹವನ್ನ ಸೋಂಕುಂಟುಮಾಡುವ ಬ್ಯಾಕ್ಟೀರಿಯಾಗಳಿಂದ ಕಾಪಾಡುತ್ತೆ,

Comments are closed.