ಕರಾವಳಿ

ಮರಳು ಮಾಫಿಯಾಕ್ಕೆ ಕಡಿವಾಣ ಹಾಕುವಂತೆ ಹಾಗೂ ಜನಪರ ಮರಳು ನೀತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

Pinterest LinkedIn Tumblr

ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಭಾದಿಸಿರುವ ಮರಳು ಸಮಸ್ಯೆಯನ್ನು ಬಗೆಹರಿಸಲು ಒತ್ತಾಯಿಸಿ ಹಾಗೂ ಜನಪರ ಮರಳು ನೀತಿಗಾಗಿ ಆಗ್ರಹಿಸಿ CITU ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘಟನೆಯ ನೇತ್ರತ್ವದಲ್ಲಿ ಸೋಮವಾರ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯೆದುರು 24 ಗಂಟೆಗಳ ನಿರಂತರ ಧರಣಿ ಸತ್ಯಾಗ್ರಹ ನಡೆಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಟ್ಟಡ ಕಾರ್ಮಿಕರ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿದ ಕಟ್ಟಡ ಕಾರ್ಮಿಕರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ರವರು ಮಾತನಾಡುತ್ತಾ,ಕರಾವಳಿ ಜಿಲ್ಲೆಗಳಲ್ಲಿ ಬಹಳ ವ್ಯವಸ್ಥಿತವಾಗಿ ಕ್ರತಕ ಮರಳು ಅಭಾವವನ್ನು ಸ್ರಷ್ಠಿಸಿ, ಜನಸಾಮಾನ್ಯರ ಬದುಕಿಗೆ ಮಾರಕ ಹೊಡೆತ ನೀಡಲಾಗಿದೆ.ಇದರ ಹಿಂದೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿ ಗಳ ಅಕ್ರಮ ಸಂಬಂಧವಿದೆ. ಇದರಿಂದಾಗಿ ಮರಳು ಮಾಫಿಯಾ ಬೆಳೆದು ಜಿಲ್ಲಾಡಳಿತವನ್ನೇ ನಿಯಂತ್ರಿಸುತ್ತಿದೆ.

ಕ್ರತಕ ಮರಳು ಅಭಾವದಿಂದಾಗಿ ಜಿಲ್ಲೆಯ ಕಟ್ಟಡ ನಿರ್ಮಾಣ ಉದ್ಯಮವು ತೀವ್ರ ಸಂಕಷ್ಟದಲ್ಲಿದ್ದು,ಕಟ್ಟಡ ಕಾರ್ಮಿಕರ ಬದುಕಿನ ಬವಣೆಯನ್ನು ಹೇಳತೀರಾದಾಗಿದೆ. ಜನಸಾಮಾನ್ಯರು ಮನೆ ನಿರ್ಮಿಸಲು ಹರಸಾಹಸಪಡುವಂತಾಗಿದೆ. CRZ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸುವ ಬಗ್ಗೆ ಹಸಿರು ಪೀಠದಲ್ಲಿ ಇತ್ಯರ್ಥವಾಗಬೇಕಾಗಿದ್ದು, ವಿಪರ್ಯಾಸವೆಂದರೆ ಕಳೆದ 18 ತಿಂಗಳಿನಿಂದ ಹಸಿರು ಪೀಠಕ್ಕೆ ನ್ಯಾಯಾಧೀಶರನ್ನೇ ನೇಮಕ ಮಾಡದೆ ಕೇಂದ್ರ ಸರಕಾರವು ಕರಾವಳಿ ಜಿಲ್ಲೆಗಳಿಗೆ ಘೋರ ಅನ್ಯಾಯವೆಸಗಿದೆ.

ಈ ಬಗ್ಗೆ ಚಕಾರ ಶಬ್ದವೆತ್ತದ BJP ಜನಪ್ರತಿನಿಧಿಗಳು ಭಜನೆ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.ರಾಜ್ಯ ಸರಕಾರವು ಈ ಕೂಡಲೇ ಗಮನಹರಿಸಿ ಜನಪರ ಮರಳು ನೀತಿಯನ್ನು ಜಾರಿಗೊಳಿಸುವ ಮೂಲಕ ನಿಗದಿತ ದರಕ್ಕೆ ಮರಳು ಲಭಿಸುವಂತೆ ಮಾಡಬೇಕು ಹಾಗೂ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಬೇಕೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರುರವರು, ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ಜನತೆ ಮರಳು ಅಭಾವದಿಂದ ಕಂಗೆಟ್ಟಿದ್ದರೂ ಇಲ್ಲಿನ ಕಾಂಗ್ರೆಸ್ ಹಾಗೂ ಬಿಜೆಪಿ ಜನಪ್ರತಿನಿಧಿಗಳು ಎಳ್ಳಷ್ಟೂ ಗಮನ ನೀಡದ ಪರಿಣಾಮವಾಗಿ ಮರಳು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ.ಜನತೆಗೆ ಕೈಗೆಟುಕುವ ದರದಲ್ಲಿ ಮರಳು ಸಿಗುವಂತೆ ಮಾಡುವ ಮೂಲಕ ಕಟ್ಟಡ ನಿರ್ಮಾಣ ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ಧರಣಿ ಸತ್ಯಾಗ್ರಹದಲ್ಲಿ CITU ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿ,ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ಜಯಂತ ನಾಯಕ್,ಸದಾಶಿವದಾಸ್,ರವಿಚಂದ್ರ ಕೊಂಚಾಡಿ, ರಾಮಣ್ಣ ವಿಟ್ಲ,ದಿನೇಶ್ ಶೆಟ್ಟಿ,ವಸಂತಿ ಕುಪ್ಪೆಪದವು,ನಾಗರಾಜ್ ಸುಳ್ಯ,ಶಂಕರ ವಾಲ್ಪಾಡಿ, ಮುಂತಾದವರು ಭಾಗವಹಿಸಿದ್ದರು.

Comments are closed.