ಕರಾವಳಿ

ಬೆಂಗಳೂರಿನಲ್ಲಿ ಥ್ರೋಬಾಲ್ ಪಂದ್ಯಾವಳಿ : ಟ್ರೋಫಿ ಗೆದ್ದ ಮಂಗಳೂರು ಪಾಲಿಕೆ ಮಹಿಳಾ ತಂಡ

Pinterest LinkedIn Tumblr

ಮಂಗಳೂರು : ಇತ್ತೀಚೆಗೆ ಬೆಂಗಳೂರು ಬಿ.ಬಿ.ಎಂ.ಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ಮಲ್ಲೇಶ್ವರಂ ಮೈದಾನದಲ್ಲಿ ಏರ್ಪಡಿಸಿದ್ದ ಅಂತರ್ ಮಹಾನಗರ ಪಾಲಿಕೆಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಮಹಿಳಾ ನೌಕರರ ತಂಡವು ಜಯಗಳಿಸಿದ್ದು ಟ್ರೋಫಿ ಹಾಗೂ ರೂ. 50 ಸಾವಿರ ನಗದು ಪಡೆದುಕೊಂಡಿದೆ. ಬಿ.ಬಿ.ಎಂ.ಪಿ ತಂಡ ದ್ವಿತೀಯ ಸ್ಥಾನಿಯಾಗಿದೆ.

ಶ್ರೀಮತಿ ಭಾರತಿ ಎಸ್. ನಾಯಕತ್ವದಲ್ಲಿ ಸೆಣಸಿದ ಮ.ನ.ಪಾ ತಂಡದಲ್ಲಿ ಶ್ರೀಮತಿ ಮೀರಾ (ಉಪನಾಯಕಿ) ಶ್ರೀಮತಿ ಮೀರಾ (ಉಪ ನಾಯಕಿ) ಶ್ರೀಮತಿ ರೇಶ್ಮಾ , ಶ್ರೀಮತಿ ದೀಪಿಕಾ ಶಾಮಿನಿ ಡಿ’ಸೋಜ, ಕುಮಾರಿಯರಾದ, ಸುಮಿತ್ರಾ, ರಾಗಿಣಿ, ಶ್ರುತಿ, ರೇಖಾ ಹಾಗೂ ಶುಭ ಪಾಲ್ಗೊಂಡಿದ್ದರು.

ಎಸ್.ಕೆ. ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ (ರಿ) ಮಂಗಳೂರು ಇದರ ಅಧ್ಯಕ್ಷ ಬಾಲು, ಮಾಜಿ ಅಧ್ಯಕ್ಷ ಶಿವರಾಜ್ ಪಿ.ಬಿ. ಕಾರ್ಯದರ್ಶಿ ಶ್ರೀನಿವಾಸ ಗಟ್ಟಿ ಮೊದಲಾದವರ ನೇತೃತ್ವದಲ್ಲಿ ತಂಡ ಬೆಂಗಳೂರಿಗೆ ತೆರಳಿತ್ತು.

Comments are closed.