ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ ಕೊಲ್ಲೂರು ವಸತಿ ಗೃಹದಲ್ಲಿ ಅತ್ಯಾಚಾರ ನಡೆಸಿದ ಕುಮಟಾ ಧಾರೇಶ್ವರ ನಿವಾಸಿ ನಾಗರಾಜ ಮಹಾದೇವ ಹರಿಕಾಂತ ಎಂಬವರಿಗೆ ಕುಂದಾಪುರ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಾಧೀಶ ಪ್ರಕಾಶ ಖಂಡೇರಿ ಅವರು ಹತ್ತು ವರ್ಷ ಜೈಲು ಹಾಗೂ 40 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ನಾಗರಾಜ ಹೊನ್ನಾವರ ಮೂಲದ ಯುವತಿಯೋರ್ವಳ ಜೊತೆ ಸ್ನೇಹ ಬೆಳೆಸಿ ಜ. 2013ರಲ್ಲಿ ಕೊಲ್ಲೂರಿಗೆ ಆಕೆಯ ಜೊತೆ ಬಂದು ವಸತಿಗೃಹವೊಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ಆದರೆ ಒಂದು ತಿಂಗಳಿನ ಬಳಿಕ ನಾಗರಾಜ ಇನ್ನೋರ್ವಳೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದು ತಿಳಿಯುತ್ತಿದ್ದಂತೆ ಸಂತ್ರಸ್ತ ಯುವತಿ ತನಗಾದ ಅನ್ಯಾಯದ ವಿರುದ್ಧ ಕೊಲ್ಲೂರು ಪೊಲೀಸರಿಗೆ ದೂರು ನೀಡಿದ್ದಳು.
ಸಾಕ್ಷ್ಯಾಧಾರಗಳ ವಿಚಾರಣೆ ಬಳಿಕ ನಾಗರಾಜ ಮೇಲಿನ ಆರೋಪಗಳು ಸಾಭೀತಾಗಿದ್ದು, ಶಿಕ್ಷೆ ಪ್ರಮಾಣ ಶುಕ್ರವಾರ ಪ್ರಕಟಿಸುವುದಾಗಿ ನ್ಯಾಯಾದೀಶರು ಘೋಷಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.
Comments are closed.