ಕರಾವಳಿ

ಮಾತ್ರೆಯನ್ನ ಸೇವಿಸುವಾಗ ಎಷ್ಟು ಗ್ಲಾಸ್ ನೀರು ಕುಡಿಯಬೇಕು ಗೋತ್ತೆ…?

Pinterest LinkedIn Tumblr

ನಾವು ಕುಡಿಯುವ ನೀರು ನಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಇದಕ್ಕೆ ಉದಾಹರಣೆ: ನಾವು ಮಾತ್ರೆ ಸೇವಿಸುವಾಗ ನೀರು ಎಷ್ಟು ಕುಡಿಯುತ್ತೇವೆ ಅನ್ನೋದು ತುಂಬ ಮುಖ್ಯ ಯಾಕೆ ಅನ್ನೋದು ಇಲ್ಲಿ ಗಮನಿಸಿ.

ತೀವ್ರ ಎದೆ ನೋವಿನಿಂದ ಬಳಲುತ್ತಿರುವ 1,000 ರೋಗಿಗಳ ಮೇಲೆ ನಡೆಸಿದ ವೈಜ್ಞಾನಿಕ ಅಧ್ಯಯನವು ಮಾತ್ರೆಗಳಿಂದಾಗಿ ಅನ್ನನಾಳದಲ್ಲಾಗುವ ಗಾಯದಿಂದಾಗಿ ಹೆಚ್ಚಿನ ಜನರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ ಎಂಬುದನ್ನು ಬಹಿರಂಗ ಪಡಿಸಿದೆ. ಹಾಸಿಗೆಗೆ ಜಾರುವ ಕೆಲವೇ ನಿಮಿಷಗಳ ಮೊದಲು ಔಷಧಿ ತೆಗೆದುಕೊಳ್ಳುವ ಅಭ್ಯಾಸವಿರುವವರ ಅನ್ನನಾಳದಲ್ಲಿ ಗಂಭೀರ ಗಾಯಗಳಾಗುವ ಅಪಾಯವಿದೆ ಎಂದು ವರದಿ ತಿಳಿಸಿದೆ.

ನುಂಗುವ ಸಮಯದಲ್ಲಿ ಎದೆಯ ಮಧ್ಯಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಮಾತ್ರೆ ಸೇವನೆಯಿಂದ ಗಾಯದಿಂದ ಎಂಬ ಶೀರ್ಷಿಕೆಯ ಈ ಅಧ್ಯಯನ 25% ರೋಗಿಗಳಲ್ಲಿ ಜೀರ್ಣಾಂಗವ್ಯೂಹದ ಸಮಸ್ಯೆಯಿಂದ ಎದೆ ನೋವು ಕಾಣಿಸಿಕೊಂಡಿದೆ. ಮತ್ತಿದು ಹೃದಯಾಘಾತದ ಲಕ್ಷಣವಲ್ಲ ಎಂದು ಬಹಿರಂಗಪಡಿಸಿದೆ.

ಮಾತ್ರೆ ಜೊತೆ ಎಷ್ಟು ನೀರು ಕುಡಿಯಬೇಕು ಗೊತ್ತಾ, ಮಾತ್ರೆಯನ್ನು ಸೇವಿಸುವಾಗ ಒಂದು ದೊಡ್ಡ ಗ್ಲಾಸ್ ತುಂಬ ನೀರನ್ನು ಕುಡಿಯುವುದು ಸೂಕ್ತ ಮಲಗುವ ಅರ್ಧ ಗಂಟೆ ಮೊದಲು ಸೇವಿಸಿ.

Comments are closed.