ಬಸ್ತಾರ: ನಗರ ನಕ್ಸಲರು ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಂಡಿದ್ದಾರೆ, ಮಕ್ಕಳನ್ನು ವಿದೇಶಗಳಲ್ಲಿ ಓದಿಸುತ್ತಿದ್ದಾರೆ. ಫ್ಯಾನ್ಸಿ ಕಾರುಗಳಲ್ಲಿ ಓಡಾಡುತ್ತಿದ್ದಾರೆ. ಕೆಲವು ಭಾಗಗಳಲ್ಲಿ ಇವರು ಶಾಂತಿ ಕದಡುವ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಇಂತಹವರಿಗೇಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಪ್ರಧಾನಮಂತ್ರಿ ನರಂದ್ರ ಮೋದಿಯವರು ಶುಕ್ರವಾರ ಪ್ರಶ್ನಿಸಿದ್ದಾರೆ.
ಛತ್ತೀಸ್ಗಢದ ಜಗ್ದಲ್ಪುರದಲ್ಲಿ ಚುನಾವಣಾ ಪ್ರಚಾರ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಅವರು, ಚುನಾವಣಾ ಪ್ರಚಾರದಲ್ಲಿ ನಗರ ನಕ್ಸಲರನ್ನು ಗುರಿ ಮಾಡಿ ಕಾಂಗ್ರೆಸ್ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ನೇತೃತ್ವದ ಇಲ್ಲಿನ ಸರ್ಕಾರ ನಕ್ಸಲ್ ಪೀಡಿ ಬಸ್ತಾರ್ ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ನಗರಗಳಲ್ಲಿ ನಗರ ನಕ್ಸಲರು ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಂಡು, ವಿದೇಶದಲ್ಲಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ನಕ್ಸಲ್ ಪೀಡಿತ ಪ್ರದೇಶದಲ್ಲಿರುವ ಆದಿವಾಸಿಗಳ ಮಕ್ಕಳು ಇವರ ರಿಮೋಟ್ ಕಂಟ್ರೋಲ್ ಆಗಿದ್ದಾರೆ. ಇಂತರ ನಕ್ಸಲರ ವಿರುದ್ದ ಕ್ರಮ ಕೈಗೊಳ್ಳದೆ ಕಾಂಗ್ರೆಸ್ ನಗರ ನಕ್ಸಲರಿಗೇಕೆ ಬೆಂಬಲ ನೀಡುತ್ತಿದೆ? ಕೇಂದ್ರ ಸರ್ಕಾರ ನಕ್ಸಲರ ವಿರುದ್ಧ ಕ್ರಮ ಕೈಗೊಂಡು ಬಸ್ತಾರ್’ಗೆ ಬಂದು ನಕ್ಸಲರ ಬಗ್ಗೆ ಮಾತನಾಡುತ್ತಿರುವಾಗ ನಗರ ನಕ್ಸಲರಿಗೇಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ನಕ್ಸಲರು ದುಷ್ಟ ಹಾಗೂ ರಾಕ್ಷಸರ ಮನಸ್ಸುಳ್ಳವರಾಗಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರ ಬಸ್ತಾರ್ ಅಭಿವೃದ್ಧಿಗಾಗಿ ಏನನ್ನೂ ಮಾಡಿಲ್ಲ. ಇಂತಹ ಜನರನ್ನು ನೀವು ಕ್ಷಮಿಸುತ್ತೀರಾ? ಇಂತಹವರು ಛತ್ತೀಸ್ಗಢದಲ್ಲಿ ಗೆಲವು ಸಾಧಿಸುವುದಿಲ್ಲ. ಬಸ್ತಾರ್ ಪ್ರದೇಶದಲ್ಲಿ ಬಿಜೆಪಿ ಗೆಲವು ಸಾಧಿಸುವಂತೆ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಒಂದು ವೇಳೆ ಬಿಜೆಪಿ ಬಿಟ್ಟು ಬೇರಾವುದೇ ಪಕ್ಷ ಗೆದ್ದರೂ, ಬಸ್ತಾರ್ ಜನರ ಕನಸು ಭಗ್ನಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
Comments are closed.