ಹೌದು ಎಲ್ಲರ ಹೇಳುತ್ತಾರೆ ನಾವು ಮಲುಗುವ ಮುನ್ನ ಬಾಳೆಹಣ್ಣು ತಿಂದು ಮಲಗಿದರೆ ಉತ್ತಮ ಅರೋಗ್ಯ ನಿಮ್ಮದಾಗಿರುತ್ತದೆ ಮತ್ತು ಒಳ್ಳೆಯ ರೀತಿಯಲ್ಲಿ ಜೀರ್ಣಕ್ರಿಯೆ ಆಗಿರುತ್ತದೆ ಅಂತ ಹೇಳುತ್ತಾರೆ ಆದ್ರೆ ಇದರಿಂದ ರೋಗ ಬರುತ್ತೆ , ಯಾವ ರೋಗ ಮತ್ತು ಯಾಕೆ ಅನ್ನೋದು ಇಲ್ಲಿದೆ ನೋಡಿ.
ದಿನಕ್ಕೆರಡು ಬಾಳೆಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳೂ ಸಿಗುತ್ತವೆ. ಅದರಲ್ಲಿಯೂ ಈ ಹಣ್ಣಿನಲ್ಲಿರುವ ಪೊಟ್ಯಾಷಿಯಂ ನಮ್ಮ ಎನರ್ಜಿ ಲೆವೆಲ್ ಹೆಚ್ಚಿಸುತ್ತದೆ.
ಹೆಚ್ಚು ಖಾರ ಪದಾರ್ಥ ಸೇವಿಸಿದಾಗ, ಬಾಳೆ ಹಣ್ಣು ತಿಂದರೆ ಹೊಟ್ಟೆ ಉರಿಯಂಥ ಸಮಸ್ಯೆಯನ್ನು ನಿವಾರಿಸಬಲ್ಲದು,ಹಾಗಂತ ಜ್ವರ-ಕೆಮ್ಮಿನಿಂದ ಬಳಲುತ್ತಿರುವವರು ಬಾಳೆಹಣ್ಣನ್ನು ತಿನ್ನದಿದ್ದರೆ ಒಳ್ಳೆಯದು. ಎಲ್ಲರೂ ನಂಬಿದಂತೆ ಬಾಳೆ ಹಣ್ಣನ್ನು ರಾತ್ರಿ ಮಲಗುವಾಗ ತಿನ್ನಲೇ ಬಾರದಂತೆ. ರಾತ್ರಿ ಬೇಗ ಜೀರ್ಣವಾಗದ ಕಾರಣ ಸೋಮಾರಿತನವನ್ನು ತಂದೊಡ್ಡಬಲ್ಲದು ಈ ಅಭ್ಯಾಸ.
ಬೆಳಗ್ಗೆ ತಿಂದರೆ ಒಳ್ಳೆಯದು. ಅಥವಾ ಸ್ನ್ಯಾಕ್ಸ್ ರೂಪದಲ್ಲಿ ಸಂಜೆ ತಿಂದರೂ ಆಗಬಹುದು. ಫಿಟ್‌ನೆಸ್ ಹೆಚ್ಚು ಕಾಳಜಿ ವಹಿಸುವವರು ಜಿಮ್ ನಂತರ ತಿಂದರೂ ಒಳ್ಳೆಯದೇ. ಒಂದೊಂದು ದಿನ ರಾತ್ರಿ ಮಲಗುವಾಗ ಬಾಳೆಹಣ್ಣನ್ನು ತಿಂದರೆ ಓಕೆ. ಆದರೆ, ದಿನಾ ತಿನ್ನೋ ಅಭ್ಯಾಸವಿದ್ದರೆ ಸೈನಸ್ ಅಥವಾ ಅಸ್ತಮಾ ತಂದೊಡ್ಡುವ ಸಾಧ್ಯತೆ ಇರುತ್ತದೆ.
ಸಿಹಿ ತಿನ್ನೋ ಅಭ್ಯಾಸ ಇರೋರು, ಕಡಿಮೆ ಕ್ಯಾಲರೀಸ್ ಇರೋ ಬಾಳೆಹಣ್ಣು ತಿಂದರೆ ತೂಕ ಹೆಚ್ಚುವುದಿಲ್ಲವೆಂಬುವುದು ಆಹಾರ ತಜ್ಞರ ಅಭಿಪ್ರಾಯವಾಗಿದೆ.
Comments are closed.