ಕರಾವಳಿ

ಪ್ರತಿ ದಿನ ಸೋಡಾ ಮಿಶ್ರಿತ ಪಾನೀಯ ಸೇವೆನೆ ಆರೋಗ್ಯಕ್ಕೆ ಹಾನಿಕಾರಕವೇ..?

Pinterest LinkedIn Tumblr

ಸಕ್ಕರೆ ಅಂಶವಿರುವ ಪಾನೀಯ ಸೇವಿಸುವುದರಿಂದ ಮಧುಮೇಹ ಬರುತ್ತದೆ ಎಂದು ಇಲ್ಲಿಯವರೆಗೆ ಹೇಳಲಾಗುತ್ತಿದ್ದು, ಇದೀಗ ಸಕ್ಕರೆ ಅಂಶ ಇರಲಿ, ಇಲ್ಲದಿರಲಿ, ಆದರೆ ದಿನ 2-4 ಸಲ ಪಾನೀಯ ಸೇವಿಸುತ್ತಿರ ಅಂದರೆ ಮಧುಮೇಹ ಕಾಡುವ ಸಾಧ್ಯತೆ ಹೆಚ್ಚು ಇದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.ಪ್ರತಿ ನಿತ್ಯ ಸೋಡಾ ಮಿಶ್ರಿತ ಪಾನೀಯ ಸೇವಿಸುತ್ತೀರ? ಹಾಗಾದ್ರೆ ಮಧುಮೇಹ ನಿಮ್ಮ ಬೆನ್ನು ಹತ್ತಬಹುದು.

ಹೃದಯ ಸಮಸ್ಯೆ ತಡೆಗಟ್ಟುವ ಆಹಾರ : ಸರಿಯಾದ ಸಮಯಕ್ಕೆ ಹಾಗೂ ಸಮತೋಲನ ಆಹಾರ ಸೇವನೆಯಿಂದ ಹೃದಯ ಸಂಬಂಧಿ ರೋಗಗಳಿಂದ ದೂರ ಇರಬಹುದು ಎಂದಿದೆ ಇತ್ತೀಚಿನ ಅಧ್ಯಯನ.

ಯೋಜನಾಬದ್ಧ ಆಹಾರ ಸೇವನೆಯಿಂದ ಜೀವನಶೈಲಿ ಸಂಬಂಧಿ ಕಾಯಿಲೆಗಳಾದ ಮಧುಮೇಹ, ಹೃದಯ ಸಮಸ್ಯೆ, ಸ್ಟ್ರೋಕ್‌ ಸಮಸ್ಯೆಯಿಂದ ಪಾರಾಗಬಹುದು ಎಂದಿದ್ದಾರೆ ತಜ್ಞರು, ದಿನನಿತ್ಯ ಸೇವಿಸುವ ಆಹಾರಕ್ಕೊಂದು ಸಮಯ ನಿಗದಿ ಪಡಿಸಿಕೊಂಡರೆ ಅದಕ್ಕೆ ತಕ್ಕ ಹಾಗೆ ಜೈವಿಕ ಕ್ರಿಯೆಗಳು ಕೂಡ ದೇಹದೊಳಗೆ ನಡೆಯುತ್ತವೆ, ಒಂದು ಸೂಕ್ತವೆನಿಸುವ ಸಮಯ ಇದಕ್ಕೆ ನಿಗದಿಪಡಿಸಿಕೊಳ್ಳುವುದು ಸೂಕ್ತ ಎನ್ನಲಾಗಿದೆ.

Comments are closed.