ಮಳೆಗಾಲ ಮುಗಿಯುತ್ತಿದ್ದಂತೆ ಒಂದೆಡೆ ಧಗಧಗ ಉರಿಯುವ ಬಿಸಿಲಿನ ಝಳ ಒಂದೆಡೆಯಾದರೆ ಇನ್ನೊಂದೆಡೆ ಸುನಾಮಿಯಂತೆ ಬಂದು ಕಾಡುವ ಧೂಳು. ಹೊರಗೆ ಮಾತ್ರವಲ್ಲ, ಮನೆಯೊಳಗೂ ನುಗ್ಗಿ ಈ ಧೂಳು ಕಿರಿಯನ್ನುಂಟು ಮಾಡುತ್ತದೆ. ಈ ಕಲುಷಿತ ಧೂಳು ನಮ್ಮ ಶ್ವಾಸಕೋಶ ಸೇರಿ ಗಂಭೀರ ಆರೋಗ್ಯ ಸಮಸ್ಯೆಗಳನ್ನುಂಟು ಮಾಡಬಹದು.
ಈ ಕೆಲವು ಆಹಾರಗಳನ್ನು ಸೇವಿಸಿದರೆ, ಧೂಳಿನಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಯಬಹುದು;
ತುಳಸಿ ಚಹಾ:
ಎರಡು ಕಪ್‌ಗ ನೀರಿಗೆ ಸ್ವಲ್ಪ ತುಳಸಿ ಎಲೆಗಳನ್ನು ಹಾಕಿ ಕುದಿಸಿ ದಿನವಿಡೀ ಸ್ವಲ್ಪ ಸ್ವಲ್ಪ ಕುಡಿಯುತ್ತಾ ಇರಿ. ತುಳಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇದರಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳಿವೆ.
ನಿಂಬೆ ರಸ:
ಉಗುರು ಬೆಚ್ಚನೆಯ ನೀರಿಗೆ ಒಂದು ನಿಂಬೆ ಹಣ್ಣನ್ನು ಹಿಂಡಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಕುಡಿಯಿರಿ. ಇದು ಶ್ವಾಸಕೋಶವನ್ನು ಶುದ್ಧಗೊಳಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬಿಸಿ ನೀರು:
ಮನೆಗೆ ಬಂದ ತಕ್ಷ ಣ ಉಗುರು ಬೆಚ್ಚನೆಯ ನೀರಿನಿಂದ ಬಾಯಿ ಮುಕ್ಕಳಿಸಿ. ಬಳಿಕ ಕಹಿಬೇವಿನ ಎಣ್ಣೆ ಲೇಪಿಸಿ ಉಗುರು ಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ. ಇದರಿಂದ ಶ್ವಾಸಕೋಶ ಮತ್ತು ಚರ್ಮದಲ್ಲಿರುವ ಧೂಳಿನ ಕಣಗಳು ಹೋಗುತ್ತವೆ.
ಅರಶಿನ ಹಾಲು:
ಒಂದು ಲೋಟ ಹಾಲಿಗೆ ಒಂದು ಟೀ ಸ್ಪೂನ್ ಅರಶಿನ ಪುಡಿ ಹಾಕಿ ಕುದಿಸಿ ತಣಿಸಿ ಕುಡಿಯಿರಿ. ಅರಶಿನದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಅಂಶಗಳಿವೆ.
ಬೆಲ್ಲ:
ಮನೆಗೆ ಬಂದ ತಕ್ಷ ಣ ಒಂದು ಕಪ್ ಉಗುರು ಬೆಚ್ಚನೆಯ ಹಾಲಿನ ಜೊತೆಗೆ ಒಂದು ತುಂಡು ಬೆಲ್ಲ ತಿನ್ನಿ. ಇದರಿಂದ ಶ್ವಾಸಕೋಶಗಳು ಸ್ವಚ್ಛವಾಗುತ್ತವೆ.
ಶುಂಠಿ ಪೆಪ್ಪರ್ ಟೀ:
ಕುದಿಯುವ ನೀರಿಗೆ ಒಂದು ಟೀ ಸ್ಪೂನ್ ಶುಂಠಿ ತುರಿ, ಆರು ಕುಟ್ಟಿದ ಕರಿಮೆಣಸು ಮತ್ತು ಸ್ವಲ್ಪ ತುಳಸಿ ಎಲೆ ಹಾಕಿ. ಬಳಿಕ ಇದಕ್ಕೆ ಸ್ವಲ್ಪ ತಾಳೆ ಬೆಲ್ಲ ಹಾಕಿ ಬಿಸಿ ಬಿಸಿಯಾಗಿ ಕುಡಿಯಿರಿ.
ಕಿತ್ತಳೆ ಹಣ್ಣು:
ವಿಟಮಿನ್ ಸಿ ಯ ಆಗರವಾಗಿರುವ ಕಿತ್ತಳೆ ಹಣ್ಣು ಸೋಂಕುಗಳ ವಿರುದ್ಧ ಹೋರಾಡುತ್ತದೆ. ಆದ್ದರಿಂದ ಪ್ರತಿದಿನ ಅಥವಾ ಎರಡು ದಿನಕ್ಕೊಮ್ಮೆ ಒಂದು ಗ್ಲಾಸ್ ಕಿತ್ತಳೆ ರಸ ಅಥವಾ ಎರಡು ಕಿತ್ತಳೆ ಹಣ್ಣುಗಳನ್ನು ತಿನ್ನಿ.
Comments are closed.