ಮಂಗಳೂರು ಅಕ್ಟೋಬರ್ 23 : ಮೀನುಗಾರಿಕಾ ಕಾಲೇಜಿನಲ್ಲಿ ಪ್ರಾರಂಭವಾದ ಗೋಲ್ಡನ್ ಜೂಬಿಲಿ ಫಿಶ್ಕೋ ಫೆಸ್ಟಿವಲ್‍ನ ಮೊದಲನೇ ದಿನ ಒಟ್ಟು 9 ಸ್ಪರ್ಧೆಗಳು ನಡೆದವು. ಸುಮಾರು 35 ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಮೈಮ್, ಸಮೂಹ ನೃತ್ಯ ಪ್ರದರ್ಶನ, ಮ್ಯಾಡ್ ಆಡ್ಸ್ ಮತ್ತು ಸಮೂಹ ಗಾಯನ ಸ್ಪರ್ಧೆಗಳಲ್ಲಿ ಪೂರ್ಣಪ್ರಗ್ನ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಾದ ಕಿರಣ್ ಯು. ಭಟ್, ಕೃಷ್ಣ ಪೈ, ಕೌಶಿಕ ಕೆ. ಮತ್ತು ಅಪೂರ್ವ ರಾವ್ ತಂಡಗಳು ಕ್ರಮವಾಗಿ ವಿಜೇತರಾಗಿದ್ದಾರೆ. ಭಾವಗೀತೆ ಮತ್ತು ಡಂ-ಛರಡ್‍ಗಳಲ್ಲಿ ಎ.ಜೆ. ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ನಮನ ಎ. ಮತ್ತು ಅಭಿಷೇಕ್ ಆರ್. ತಂಡದವರು ತಮ್ಮದಾಗಿಸಿಕೊಂಡಿದ್ದಾರೆ.
ಜೇಡಿಮಣ್ಣಿನ ಕಲಾಕೃತಿ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಶಂಭು ಸಿ.ಪಿ. ಜಯಗಳಿಸಿದ್ದಾರೆ. ಚಹರೆಯ ವರ್ಣಕಲೆಯಲ್ಲಿ ಸೆಚಿಟ್ ಆಗ್ನೇಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಿಯಾ ಶೆಟ್ಟಿ ಮೊದಲನೆ ಸ್ಥಾನ ಗಳಿಸಿದ್ದಾರೆ. ರಂಗೋಲಿ ಸ್ಪರ್ಧೆಯಲ್ಲಿ ಸುಳ್ಯಾದ ನೆಹರು ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಧೀರೇಶ್ ಬಿ. ವಿಜೇತರು.
ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳೂ ಸಹ ಸ್ಪರ್ಧೆಗಳಲ್ಲಿ ಭಾಗವಸಿ ಪ್ರಶಸ್ಥಿಗೆ ಪೈಪೋಟಿ ನಡೆಸಿದರು. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈಗಿನ ವಿದ್ಯಾರ್ಥಿಗಳ ಜೊತೆ ಸೇರಿ ಕಾಲೇಜಿನಲ್ಲಿ 80 ಮತ್ತು 90ರ ದಶಕದಲ್ಲಿ ನಡೆಸಿಕೊಂಡು ಬಂದ ಕಾರ್ಯಕ್ರಮಗಳ ಬಗ್ಗೆ ಮೆಲುಕು ಕಾಕಿ ಸಂಭ್ರಮಿಸಿದರು. ಅಲ್ಲದೇ, ಹಳೆಯ ವಿದ್ಯಾರ್ಥಿಗಳ ಪ್ರೋತ್ಸಾಹ ಮತ್ತು ಸಹಕಾರದಿಂದ ಫಿಶ್ಕೋ ಫೆಸ್ಟಿವಲ್‍ನ್ನು ವಿಜೃಂಬಣೆಯಿಂದ ಆಚರಿಸಲು ಸಹಕಾರಿಯಾಗಿದೆಯೆಂದು ಫಿಶ್ಕೋ ಫೆಸ್ಟಿವಲ್‍ನ ಪ್ರಚಾರ ಸಮಿತಿಯ ಛೇರ್ಮನ್ ಡಾ| ಎ.ಟಿ. ರಾಮಚಂದ್ರ ನಾಯ್ಕ ತಿಳಿಸಿದರು.
22 ಮತ್ತು 23 ರಂದು ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮಂಗಳವಾರ ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಡೀನ್ ಡಾ| ಎಚ್. ಶಿವಾನಂದ ಮೂರ್ತಿ ಮತ್ತು ಇವರ ಪದವಿ ಬ್ಯಾಚ್ (1975-79) ನ ಹಳೆ ವಿದ್ಯಾರ್ಥಿಗಳಾದ ಸಿ,ಬಿ. ಗಾಣಿಗಾರ್, ಕುಬೇಂದ್ರ ನಾಯ್ಕ, ಗಂಗಾಧರ ಮಡ್ಡಿಕೆರಿ, ಎಚ್.ಎಸ್. ಚಂದ್ರಶೇಖರ್, ಎಂ.ಡಿ. ಪ್ರಸಾದ್ ಮತ್ತು ಬಿ.ಎನ್. ಲಿಂಗಾ ರೆಡ್ಡಿ ವಿಜೇತರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇನ್ನೂ ಎರಡು ದಿನಗಳ ಕಾರ್ಯಕ್ರಮದಲ್ಲಿ ರಸ ಪ್ರಶ್ನೆ, ಆಶು-ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ದೆ, ಚಹರೆಯ ವರ್ಣ ಕಲೆ, ಪಾಶ್ಚಿಮಾತ್ಯ ಸಂಗೀತ, ಚಲನಚಿತ್ರ ಗೀತೆ, ಜಾನಪದ ನೃತ್ಯ, ಕಾರ್ಟೂನಿಂಣ್, ಬ್ಯಾಟ್ಲ್ ಆಫ್ ಬ್ಯಾಂಡ್ಸ್, ಭರತ ನಾಟ್ಯ, ವೈವಿದ್ಯಮಯ ಮನೋರಂಜನೆ, ಸ್ಪರ್ಧೆಗಳು ಕಾಲೇಜಿನ ಬೋದಕ ಮತ್ತು ಬೋದಕೇತರ ಸಿಬ್ಬಂದಿವರ್ಗದವರು ಫ್ಯಾಷನ್ ಪೆರೆಡ್ ಗಳು 24 ನೇ ಬುಧವಾರದವರೆಗೂ ನಡೆಯುತ್ತವೆ.
ಸಿಬ್ಬಂದಿ ಸಲಹೆಗಾರರಾದ ಮನೋಜ್ ಕುಮಾರ್ ಮತ್ತು ಡಾ| ಸುರೇಶ್ ಟಿ. ಉಪಸ್ಥಿತರಿದ್ದರು.
ಎಲ್ಲಾ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳ ಜೊತೆಗೂಡಿ ಸುಗಮವಾಗಿ ನಡೆಸಲು ಪ್ರೋತ್ಸಾಹಿಸುತ್ತಿದ್ದಾರೆ. ಇವರ ಜೊತೆಯಲ್ಲಿ ಕಾಲೇಜಿನ ಇತರೆ ಬೋದಕರಾದ ಡಾ. ಶಿವಕುಮಾರ್ ಎಂ., ಡಾ. ಗಿರೀಶ್ ಎಸ್.ಕೆ., ಶ್ರೀ ಕುಮಾರ್ ನಾಯ್ಕ ಎ.ಎಸ್., ಶ್ರೀಮತಿ ವಂದನ ಕೆ.ಡಾ. ಅಜಯ್ ಎಸ್.ಕೆ., ಡಾ. ಅಭಿಮಾನ್, ಮತ್ತು ಡಾ. ರಾಜೇಶ್ ಡಿ.ಪಿ. ರವರು ಫಿಶ್ಕೋ ಫೆಸ್ಟಿವಲ್‍ನ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ಸಹಕರಿಸುತ್ತಿದ್ದಾರೆ. ಅಂತಿಮ ಪದವಿ ವಿದ್ಯಾರ್ಥಿಗಳಾದ ಟೀಂ ವಿಂಡಿಸಿಸ್ ರವರುಗಳ ಪಾತ್ರ ಈ ಫಿಶ್ಕೋ ಫೆಸ್ಟಿವಲ್‍ಗೆ ಹೆಚ್ಚಿನ ಮೆರುಗನ್ನು ಕೊಟ್ಟಿದೆ.
Comments are closed.