ಕರಾವಳಿ

ಬಿಗುಡಾಯಿಸಿದ ಮರಳು ಸಮಸ್ಯೆ; ಟಿಪ್ಪರ್, ಲಾರಿ ನಿಲ್ಲಿಸಿ ಅನಿರ್ಧಿಷ್ಟಾವಧಿ ಮುಷ್ಕರ!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾದ್ಯಂತ ಮರಳು ಸಮಸ್ಯೆ ಬಿಗುಡಾಯಿಸಿದ್ದು ನಿತ್ಯ ಜೀವನ ನಿರ್ವಹಣೆ ಸಮಸ್ಯೆಯಾಗುತ್ತಿದೆ. ಮರಳುಗಾರಿಕೆ ಎನ್ನುವುದು ಪ್ರತಿ ವಿಚಾರದಲ್ಲಿಯೂ ಮುಖ್ಯವಾಗಿದ್ದು ಎಲ್ಲರಿಗೂ ಕೆಲಸ ಕಾರ್ಯವಿಲ್ಲದಾಗಿದೆ. ಕೂಡಲೇ ಸಮಸ್ಯೆ ಪರಿಹಾರ ಮಾಡಬೇಕೆಂದು ಪರಿಪರಿಯಾಗಿ ಕೇಳಿಕೊಂಡರೂ ಜಿಲ್ಲಾಡಳಿತ ಮಾತ್ರ ಕ್ಯಾರೇ ಅನ್ನುತ್ತಿಲ್ಲ. ಅದಕ್ಕಾಗಿ ಅನಿರ್ಧಿಷ್ಟಾವಧಿ ಮುಷ್ಕರ ಮಾಡುತ್ತಿದ್ದೇವೆಂದು ಟಿಪ್ಪರ್ ಮಾಲಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಜಿಲ್ಲಾದ್ಯಂತ ಗುರುವಾರದಿಂದ ಆರಂಭಗೊಂಡ ಟಿಪ್ಪರ್ ಮುಷ್ಕರ ಸದ್ದು ಮಾಡುತ್ತಿದೆ. ಅಲ್ಲಲ್ಲಿ ಹೆದ್ದಾರಿ ಬಳಿ ನೂರಾರು ಟಿಪ್ಪರ್ ನಿಲ್ಲಿಸಿ ತಮ್ಮ ಆಕ್ರೋಷ ಹೊರಹಾಕಿದ್ದಾರೆ. ಈ ಮುಷ್ಕರ ಸಮಸ್ಯೆ ಪರಿಹಾರವಾಗುವ ತನಕ ಮುಂದುವರೆಯಲಿದೆ ಎನ್ನಲಾಗಿದೆ.

ಡಿಸಿ ವಿರುದ್ಧ ಆಕ್ರೋಷ…!
ಸರಕಾರ ಹಾಗೂ ಜನಪ್ರತಿನಿಧಿಗಳು ಮರಳು ಸಮಸ್ಯೆ ಶೀಘ್ರ ಪರಿಹರಿಸುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಸೂಚಿಸಿದ್ದರೂ ಕೂಡ ಜಿಲ್ಲಾಧಿಕಾರಿಯವರು ಮಾತ್ರ ಈವರೆಗೂ ಸಮಸ್ಯೆ ನೀಗಿಸಿಲ್ಲ. ಬಡವರು ಬದುಕುವುದು ಕಷ್ಟವಾಗಿದೆ. ಶೀಘ್ರ ಈ ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ‘ಡಿಸಿ ಹಠಾವೋ ಉಡುಪಿ ಬಚಾವೋ’ ಚಳುವಳಿ ಮಾಡುತ್ತೇವೆ. ಮಾತ್ರವಲ್ಲದೇ ಸಮಸ್ಯೆಯಿಂದ ನೊಂದ ಮಂದಿಯನ್ನೆಲ್ಲಾ ಒಗ್ಗೂಡಿಸಿಕೊಂಡು ಡಿಸಿ ಕಚೇರಿಯೆದುರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Comments are closed.