ಕರಾವಳಿ

ಹೊರರಾಜ್ಯಗಳಲ್ಲಿ ತಮ್ಮ ನಾಡಿನ ಸಂಸ್ಕೃತಿಯ ಪ್ರಸರಣದಲ್ಲಿ ದಕ್ಷಿಣ ಕನ್ನಡಿಗರ ಸೇವೆ ಅನನ್ಯವಾದುದು : ಕಲ್ಕೂರ

Pinterest LinkedIn Tumblr

ಮಂಗಳೂರು : ಉದ್ಯೋಗಾಂಕ್ಷಿಗಳಾಗಿ ದೂರದ ತಮಿಳುನಾಡಿನ ಮದ್ರಾಸ್ ಪ್ರಾಂತ್ಯ ಸಹಿತ ಅನೇಕ ಕಡೆಗಳಲ್ಲಿ ನೆಲೆಸಿ ಉದ್ಯಮ ಗಳನ್ನು ಸ್ಥಾಪಿಸಿ ಪರಿಶ್ರಮದಿಂದ ಉದ್ಯಮಪತಿಗಳಾಗಿ ಬೆಳೆದಿರುವುದಲ್ಲದೆ, ಇದರಜೊತೆಗೆ ಸಾಮಾಜಿಕ ಸೇವಾ ವ್ಯವಸ್ಥೆಯಲ್ಲೂ ತಮ್ಮನ್ನುತಾವು ತೊಡಗಿಸಿಕೊಳ್ಳುವಲ್ಲಿ ಅವಿಭಜಿತದಕ್ಷಿಣಕನ್ನಡಿಗರು ನಿಸ್ಸೀಮರು ಎಂದು ಕಲ್ಕೂರ ಪ್ರತಿಷ್ಠಾನದ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು.

ಕಳೆದ ಐದಾರು ತಲೆಮಾರುಗಳಿಂದ ತಮಿಳು ನಾಡಿನ ಮದ್ರಾಸ್ ಪ್ರಾಂತ್ಯದಲ್ಲಿ ನೆಲೆಸಿ ಸಾಂಸ್ಕೃತಿಕ ಸಂಘಟನೆಗಳನ್ನು ಕಟ್ಟಿ ಬೆಳೆಸಿ, ಚೆನ್ನೈಕನ್ನಡ ಸಂಘ, ಎಸ್.ಕೆ.ಡಿ.ಬಿ. ಎಸೋಸಿಯೇಶನ್ ಸಂಸ್ಥೆಗಳ ಮೂಲಕ ಕನ್ನಡಕಂಪನ್ನುತುಳುನಾಡಿನ ಸಂಸ್ಕೃತಿಯನ್ನು ಹೊರ ರಾಜ್ಯದಲ್ಲಿ ಪಸರಿಸಿರುವುದಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲೂ ಮಹತ್ಸಾಧನೆಯನ್ನು ಮಾಡಿದ ಕೀರ್ತಿದಕ್ಷಿಣ ಕನ್ನಡಿಗರಿಗೆ ಸಲ್ಲುತ್ತದೆ‌ ಎಂದರು.

ನವರಾತ್ರಿಯ ಶುಭ ಸಂದರ್ಭಕದ್ರಿ ಕಂಬಳ ಮಂಜುಪ್ರಾಸಾದದಲ್ಲಿ‌ ಏರ್ಪಡಿಸಲಾಗಿದ್ದಚೆನ್ನೈಯಕ್ಷಗಾನ ಸಂಭ್ರಮ ಸಮಾರಂಭದಲ್ಲಿ‌ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶರವುರಾಘವೇಂದ್ರ ಶಾಸ್ತ್ರಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಚೆನ್ನೈನ ಹೋಟೆಲ್‌ಉದ್ಯಮಿ‌ಎಸ್.ಕೆ.ಡಿ.ಬಿ. ಚೆನ್ನೈಯ‌ ಅಧ್ಯಕ್ಷ ಕಡಂದಲೆ ರಾಜೇಶ್‌ರಾವ್‌ ಅವರನ್ನುದಂಪತಿ ಸಹಿತವಾಗಿ ‘ಕಲ್ಕೂರಕನ್ನಡ ಸಿರಿ’ ಪ್ರಶಸ್ತಿ ನೀಡಿ‌ಅಭಿನಂದಿಸಲಾಯ್ತು. ಖ್ಯಾತ ನರರೋಗ ತಜ್ಞ ಡಾ.ಐ.ಜಿ. ಭಟ್ ಪ್ರಶಸ್ತಿ ಪ್ರದಾನ ಮಾಡಿದರು. ಸಮತಾ ಬಳಗದ ಅಧ್ಯಕ್ಷರಾದರಮಾಮಣಿ ಭಟ್ ಹಾಗೂ ವಿಪ್ರ ಸಮಾಗದ ವೇದಿಕೆಯ‌ಅಧ್ಯಕ್ಷ ಪಿ. ರಾಮಕೃಷ್ಣರಾವ್‌ಅಭ್ಯಾಗತರಾಗಿ ಪಾಲ್ಗೊಂಡಿದ್ದರು, ಕದ್ರಿ ನವನೀತ ಶೆಟ್ಟಿ‌ಅಭಿನಂದನಾ ಭಾಷಣ ಮಾಡಿದರು.

ಸಭಾಕಾರ್ಯಕ್ರಮದ ಬಳಿಕ ಚೆನ್ನೈ ಮಹಿಳಾ ತಂಡದಿಂದ ‘ಸುಭದ್ರಾಕಲ್ಯಾಣ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಬಿ.ಎಂ. ರವೀಂದ್ರರಾವ್, ಕೆ. ಲಕ್ಷ್ಮೀ ನಾರಾಯಣ ಶರ್ಮ, ನಾರಾಯಣ ಬಳ್ಳೂಕರಾಯ, ಕು| ಆಪೂರ್ವ‌ಆರ್, ಸುರತ್ಕಲ್, ಕು| ಅಶ್ವಿನಿ ಆಚಾರ್ಯ, ಅರ್ಥಗಾರಿಕೆಯಲ್ಲಿ ಶ್ರೀಮತಿಯರಾದ ಬಿ. ಶಶಿಕಲಾ ರಾವ್, ಉಮಾರಾಜ, ಕರುಣಾ ಶಿವಕುಮಾರ್, ಸೌಮ್ಯಕೃಷ್ಣ ರಾಜಶ್ರೀ ಭಟ್ ಪಾಲ್ಗೊಂಡಿದ್ದರು.

ಇದೇ ಸಂದರ್ಭಯುವ ಪ್ರತಿಭಾನ್ವಿತೆ ಇನ್‌ಫೋಸಿಸ್, ಉದ್ಯೋಗಿ ಕು| ಚೇತನಾಗುರುರಾಜ್‌ಅವರು ಶಾಸ್ತ್ರೀಯ ಗಾಯನ ನಡೆಸಿದರು. ಜಿ.ಕೆ. ಭಟ್ ಸೇರಾಜೆ ಸ್ವಾಗತಿಸಿದರು, ಸುಧಾಕರರಾವ್ ಪೇಜಾವರ ವಂದಿಸಿದರು, ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರೂಪಿಸಿದರು.

Comments are closed.