ಕರಾವಳಿ

ರಕ್ತಸ್ರಾವ ನಿಲ್ಲಿಸಲು ಐಸ್ ಬಳಕೆ ಉತ್ತಮವೇ..?

Pinterest LinkedIn Tumblr

ಬಿದ್ದು ಗಾಯ ಮಾಡಿಕೊಂಡರೆ, ಜಜ್ಜಿಹೋದರೆ ಅಥವಾ ಇನ್ನಿತರ ಸಣ್ಣ ಪುಟ್ಟ ಪೆಟ್ಟುಗಳಾದರೂ ತಕ್ಷಣ ನೋವು ಕಡಿಮೆಯಾಗಲಿ ಎಂದು ನಾವು ಮಂಜುಗಡ್ಡೆಯನ್ನು ಅದರ ಮೇಲೆ ಇಡುತ್ತೇವೆ. ಈ ವಿಧಾನ ನಮ್ಮ ಪ್ರಥಮ ಚಿಕಿತ್ಸೆಯ ಒಂದು ಭಾಗವೇ ಆಗಿ ಹೋಗಿದೆ.

ಗಾಯವಾದಾಗ ರಕ್ತಸ್ರಾವವನ್ನು ತಡೆಗಟ್ಟಲು ಆ ಭಾಗದಲ್ಲಿ ಐಸ್ ಇಡಬೇಕು ಎಂಬುದು ಎಲ್ಲರಿಗೂ ಅರಿವಿರುವ ಸಾಮಾನ್ಯ ಸಂಗತಿ. ಆದರೆ ಹೀಗೆ ಮಾಡುವುದರಿಂದ ತಾತ್ಕಾಲಿಕವಾಗಿ ನೋವು ಶಮನವಾದರೂ ಆರೋಗ್ಯಕ್ಕೆ ಆಪತ್ತನ್ನು ಉಂಟುಮಾಡಬಹುದು ಎಂದು ಸಂಶೋಧನೆಗಳು ಹೇಳುತ್ತವೆ.

ಕಾರಣ:
ಮಂಜುಗಡ್ಡಯಿಂದ ದೇಹ ಮರಗಟ್ಟುವುದು, ಐಸ್ ನೋವಿನ ಮೇಲೆ ಇಟ್ಟ ತಕ್ಷಣ ಆ ಭಾಗ ಮರಗಟ್ಟುತ್ತದೆ ಆಗ ಮೆದುಳಿಗೆ ಹೋಗುವ ನೋವಿನ ಸಂದೇಶಗಳು ಕಡಿತಗೊಳ್ಳುವುದೇ ಇಲ್ಲಿರುವ ಪ್ರಮುಖ ಗುಟ್ಟು.

ಅಷ್ಟೇ ಅಲ್ಲ ಮರಗಟ್ಟಿರುವ ನರಗಳಿಂದ ಉರಿಯೂತ ಮತ್ತು ಬಾವು ಕೂಡ ಕಡಿಮೆಯಾಗುತ್ತದೆ ಇದಕ್ಕೆ ಕಾರಣ ನರದ ರಕ್ತಪ್ರವಾಹ ಸ್ಥಗಿತಗೊಳ್ಳುವುದು. ಆದ್ದರಿಂದ ನಮಗೆ ನೋವು ಗೊತ್ತಾಗದಿರಬಹುದು ಆದರೆ ಮರಗಟ್ಟ ನರಗಳು ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ತಿಳಿದುಕೊಳ್ಳೋಣ ಬನ್ನಿ;

ದೇಹದಲ್ಲಿ ಉಂಟಾಗುವ ಗಾಯ ಗುಣವಾಗಲು ತಡೆಯಿಲ್ಲದ ರಕ್ತಸಂಚಾರ ಅತ್ಯಗತ್ಯ. ದೇಹ ಗಾಯಗೊಂಡ ಭಾಗದ ನರಗಳನ್ನು ಸಡಿಲಗೊಳಿಸಿ ವಿಸ್ತರಿಸಲು ಅವಕಾಶ ಮಾಡಿಕೊಡುತ್ತವೆ. ಆಗ ಹೆಚ್ಚಿನ ರಕ್ತಸಂಚಾರವಾಗಿ ರಕ್ತದ ಮೂಲಕ ಪ್ರೋಟೀನ್ ಮತ್ತು ಇತರ ಪೋಷಕಾಂಶಗಳು ಗಾಯವನ್ನು ಗುಣಪಡಿಸಲು ಆಗಮಿಸುತ್ತವೆ. ಮಂಜುಗಡ್ಡೆ ಇಟ್ಟಾಗ ಆ ಭಾಗದ ನರಗಳು ಮರಗಟ್ಟಿ ರಕ್ತಸಂಚಾರಕ್ಕೆ ತೊಡಕುಂಟಾಗುವುದರಿಂದ ನೋವೇನೋ ಆ ಕ್ಷಣಕ್ಕೆ ಕಡಿಮೆಯಾಗುತ್ತದೆ ಆದರೆ ಗಾಯ ಗುಣವಾಗಲು ಅವಕಾಶ ಸಿಗುವುದಿಲ್ಲ.

ಉರಿಯೂತವನ್ನು ನಾವು ಅನಾರೋಗ್ಯ ಎಂದು ತಪ್ಪು ಅರ್ಥ ಮಾಡಿಕೊಂಡಿದ್ದೇವೆ. ಆದರೆ ದೇಹಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಿಕೊಳ್ಳುವ ಪ್ರಥಮ ಪ್ರಕ್ರೀಯೆ ಉರಿಯೂತ. ಇದನ್ನು ತಡೆಯಲು ಮಂಜುಗಡ್ಡೆ ಇಟ್ಟರೆ ಉರಿಯೂತ ಆಗುವುದೂ ಇಲ್ಲ ಗಾಯಗಳು ಗುಣವಾಗುವುದೂ ಇಲ್ಲ.

ಇನ್ನು ಗಾಯಗಳನ್ನು ಗುಣಪಡಿಸುವಲ್ಲಿ ‘ದುಗ್ಧರಸ’ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಗಾಯದ ಮೇಲೆ ಐಸ್ ಇಟ್ಟಾಗ ದುಗ್ಧರಸಗಳೂ ಘನೀಕರಿಸಿರಿ ಗುಣಪಡಿಸುವ ಕೆಲಸ ಇನ್ನಷ್ಟು ಕಷ್ಟಕರವಾಗುತ್ತದೆ.
ಮಂಜುಗಡ್ಡೆ ಸ್ನಾಯುಗಳ ಚಲನೆಯನ್ನೇ ಸ್ಥಗಿತಗೊಳಿಸುವುದರಿಂದ ದೇಹದ ವಿವಿಧ ಅಂಗಾಂಶಗಳು ನಷ್ಟಗೊಂಡ ಜೀವಕೋಶಗಳನ್ನು ಪುನರ್ ಸ್ಥಾಪಿಸುವಲ್ಲಿ ವಿಫಲಗೊಳ್ಳುತ್ತವೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಕ್ತಸ್ರಾವ ನಿಲ್ಲಿಸಲು ಐಸ್ ಬಳಕೆ ಮಾಡಬೇಕೇ ಹೊರತು ಸಣ್ಣಪುಟ್ಟ ಸಮಸ್ಯೆಗಳಿಗೂ ಮಂಜುಗಡ್ಡೆ ಇಟ್ಟು ನೋವು ಕಡಿಮೆಮಾಡಿಕೊಳ್ಳುವ ಅಭ್ಯಾಸವನ್ನು ಬಿಟ್ಟರೆ ಆರೋಗ್ಯಕ್ಕೆ ಉತ್ತಮ.

Comments are closed.