ಕರಾವಳಿ

ಲೋಕಸಭಾ ಉಪ ಚುನಾವಣೆ ಹಿನ್ನೆಲೆ ಉಡುಪಿ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ: ಡಿಸಿ

Pinterest LinkedIn Tumblr

ಉಡುಪಿ: ಭಾರತ ಚುನಾವಣಾ ಆಯೋಗವು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 6 ರಂದು ಉಪ ಚುನಾವಣೆ ಘೋಷಿಸಿದ್ದು, ಅದರಂತೆ ಶಿವಮೊಗ್ಗ ಲೋಕಸಭಾ ವ್ಯಾಪ್ತಿಗೆ ಬರುವ ಉಡುಪಿ ಜಿಲ್ಲೆಯ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ನವೆಂಬರ್ 3 ರಂದು ಮತದಾನ ನಡೆಯಲಿದ್ದು, ನವೆಂಬರ್ 6 ಕ್ಕೆ ಮತ ಎಣಿಕೆ ನಡೆಯಲಿದೆ, ಮಾದರಿ ಚುನಾವಣಾ ನೀತಿ ಸಂಹಿತೆಯು ಉಡುಪಿ ಜಿಲ್ಲೆಯಾದ್ಯಂತ ತಕ್ಷಣದಿಂದ ನವೆಂಬರ್ 8 ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.  ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಆನರಿ 1 2018 ರ ಅರ್ಹತಾ ದಿನಾಂಕ್ಕೆ ಸಂಬಂದಿಸಿದಂತೆ ಬೈಂದೂರು ವಿಧಾನ ಸಭಾ ಕ್ಷೆತ್ರದಲ್ಲಿ 221972 ಮತದಾರರಿದ್ದು, 1786 ವಿಕಲಚೇತನ ಮತದಾರರು ಮ್ತು 33 ಸೇವಾ ಮತದಾರರಿದ್ದಾರೆ. 243 ಮತಗಟ್ಟೆಗಳನ್ನು ಮತ್ತು 3 ಹೆಚ್ಚುವರಿ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಎವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುವುದು ಎಂದು ಹೇಳಿದರು.

ಸಹಾಯಕ ಚುನಾವಣಾಧಿಕಾರಿಯಾಗಿ ಜಿಲ್ಲಾಧಿಕರಿಗಳ ಭೂ ಮಾಪನಾ ತಾಂತ್ರಿಕ ಸಹಾಯಕರು ಹಾಗೂ ಭೂ ದಾಖಲೆಗಳ ಉಪ ನಿರ್ದೇಶಕರು ಉಡುಪಿ ಇವರನ್ನು ನೇಮಕ ಮಾಡಲಗಿದ್ದು, 3 ವೀಡಿಯೋ ಸವೇಲಯನ್ಸ್ ತಂಡ, 3 ಫ್ಲೈಯಿಂಗ್ ಸ್ಕ್ವಾಡ್, 2 ಸ್ಟಾಟಿಕ್ ಸರ್ವೆಲೈನ್ಸ್ ತಂಡ, 3 ಸೆಕ್ಟರ್ ಅಧಿಕರಿ ತಂಡ, 3 ವಿಡಿಯೋ ವೀಕ್ಷಣಾ ತಂಡ, 1 ಮಾದರಿ ನೀತಿ ಸಂಹಿತೆ ತಂಡ ಮತ್ತು 1 ಲೆಕ್ಕಪತ್ರ ತಂಡವನ್ನು ರಚಿಸಲಾಗಿದೆ, ಚುನಾವಣೆ ಕರ್ತವ್ಯಕ್ಕೆ 246 ಮತಗಟ್ಟೆ ಅಧಿಕಾರಿಗಳು,246 ಸಹಾಯಕ ಮತಗಟ್ಟೆ ಅಧಿಕಾರಿಗಳು, 738 ಮತಗಟ್ಟೆ ಅಧಿಕರಿಗಳು ಹಾಗೂ 123 ಮೀಸಲು ಸಿಬ್ಬಂದಿ ಅಗತ್ಯವಿದೆ ಎಂದು ಡಿಸಿ ಹೇಳಿದರು.

ಚುನಾವಣಾ ಸಂಬಂದ ದೂರು ಸ್ವೀಕರಕ್ಕಗಿ ಉಡುಪಿ ಜಿಲ್ಲಾಧಿಕರಿ ಕಚೇರಿಯಲ್ಲಿ ದೂರು ಕೋಶ ತೆರೆಯಲಗಿದ್ದು, ಕಂಟ್ರೋಲ್ ರೂಂ ಟೋಲ್ ಫ್ರೀ ನಂ. 1077, ದೂ.ಸಂ. 2820-2574920, ಬೈಂದೂರು ತಾಲೂಕು ಕಚೇರಿ ದೂ.ಸಂ. 08254-251657 ನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಮತಯಂತ್ರಗಳ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯಕ್ರವು ಬೈಂದೂರು ನಲ್ಲಿ ನಡೆಯಲಿದ್ದು, ಮತದಾನದ ನಂತರ ಮತಯಂತ್ರಗಳನ್ನು ಶಿವಮೊಗ್ಗಕ್ಕೆ ತಲುಪಿಸಲಾಗುವುದು ಎಂದು ಡಿಸಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬ ನಿಂಬರಗಿ, ಅಪ್ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕುಂದಾಪುರ ವಿಭಾಗದ ಸಹಾಯಕ ಆಯುಕ್ತ ಭೂ ಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

Comments are closed.