ಕರಾವಳಿ

ಹಿಪ್ ಸ್ನಾನ (Hip Bathing) ನಲ್ಲಿರುವ ಉಪಯೋಗ ಗೊತ್ತಾ..?

Pinterest LinkedIn Tumblr

ಒಂದು ಅಡಿ ಎತ್ತರವಾಗಿರುವ ನೀರಿನ ತೊಟ್ಟಿಯಲ್ಲಿ ತಣ್ಣೀರನ್ನು ತುಂಬಿ ನಗ್ನವಾಗಿ ಅದರಲ್ಲಿ ಕುಳಿತು ಹೊಕ್ಕಳಿಂದ ಇಡಿದು ತೊಡೆಗಳ ಅರ್ಧಬಾಗ ನೀರಿನಲ್ಲಿ ಆರುವಂತೆ ನೋಡಿಕೊಂಡು ಕುಳಿತು ಕೊಳ್ಳಬೇಕು, ತೊಟ್ಟಿಯ ಒಂದು ಭಾಗಕ್ಕೆ ಹೊರಗಿಕೊಂಡಿದ್ದರೆ ಮತ್ತೊಂದು ಬಾಗಕ್ಕೆ ಕಾಲುಗಳನ್ನ ತಾಚಿ ಕುಳಿತುಕೊಂಡಿರಬೇಕು, ಸುಮಾರು ಅರ್ಧಘಂಟೆ ಕಾಲ ಈ ರೀತಿ ನೀರಿನಲ್ಲಿ ವಿಶ್ರಮಿಸಿ ಕೊಳ್ಳಬೇಕು.

ಹೀಗೆ ವಿಶ್ರಮಿಸಿ ಕೊಳ್ಳುವಾಗ ಕಿಬ್ಬೊಟ್ಟೆಯ ಭಾಗವನ್ನು ಕೈಗಳಿಂದ ಉಜ್ಜಿಕೊಳ್ಳುತ್ತಿರಬೇಕು, ಈ ರೀತಿ ನಿತಂಬ ಸ್ನಾನ ಮಾಡುವುದನ್ನು ಮೂಲವ್ಯಾದಿ, ತಲೆಶೂಲೆ, ಅಜೀರ್ಣ, ವಾತ ಭಾದೆ, ಮಲಬದ್ಧತೆ, ಅತಿಸಾರ ಮುಂತಾದ ರೋಗಗಳು ನಿವಾರಣೆಯಾಗುವುದು.

ಈ ರೀತಿ ಸ್ನಾನ ಮಾಡಿದ ನಂತ್ರ ಒದ್ದೆ ಯಾದ ಶರೀರವನ್ನು ಶುದ್ಧವಾದ ಒಣಗಿದ ವಸ್ತ್ರದಿಂದ ಒರೆಸಿಕೊಳ್ಳಬೇಕು, ಆಮೇಲೆ ಕಿಬ್ಬೊಟ್ಟೆಯ ಭಾಗವನ್ನು ಕೈಗಳಿಂದ ಉಜ್ಜಿಕೊಳ್ಳೋಯಬೇಕು, ಹೀಗೆ ಮಾಡುವುದರಿಂದ ದೇಹದ ಒಳಗಿರುವ ದೂಷಿತ ವಸ್ತುಗಳ ವಿಸರ್ಜನೆ ಯಾಗುವುದು.

ಸ್ನಾನ ಮಾಡಿದ ಮೇಲೆ ವ್ಯಾಯಾಮ ಮಾಡಿ ಎಂದಿನಂತೆ ಸ್ನಾನ ಮಾಡ ಬೇಕು, ಹೆಂಗಸರು ಋತ ಶ್ರಾವ ಆರಂಭವಾಗುವುದಕ್ಕೆ ಎರಡು ದಿನಗಳ ಮುಂಚೆ ಹಾಗು ಆರಂಭವಾದ ನಂತರ ಎರಡು ದಿನಗಳ ನಿತಂಬ ಸ್ನಾನ ಮಾಡುವುದೇ ಒಳ್ಳೆಯದು, ಒಂದು ವೇಳೆ ಋತು ಶ್ರಾವ ಸರಿಯಾಗಿ ಆಗದಿರುವ ಸಮಯದಲ್ಲಿ ಋತು ಶ್ರಾವ ಕಂಡು ಬಂದ ನಂತರ ನಿತಂಬ ಸ್ನಾನ ಮಾಡುವುದರಿಂದ ಅನೇಕ ರೀತಿಯ ಉಪಯೋಗಗಳು ಉಂಟು.

Comments are closed.