ಆರೋಗ್ಯ

ಸಣ್ಣ ಮಕ್ಕಳಿಗೆ ಕಾಫಿ ಕುಡಿಸಿದರೆ ಯಾವ ಸಮಸ್ಯೆ ಕಾಡುವುದು.. ಗೊತ್ತೇ?

Pinterest LinkedIn Tumblr

ಕಾಫಿಯು ಉತ್ತೇಜಕ ಪಾನೀಯ, ಆಮಶಂಕೆ ಅತಿಸಾರ ಉನ್ಮಾದ, ಅನಿದ್ರಾವಸ್ಥೆ, ಮೂತ್ರಕಟ್ಟು, ನಾಗದಿ ಜ್ವರ ಬಳಲಿಕೆ, ತಲೆಶೋಲೆ, ನಾಯಿಕೆಮ್ಮು ಇಂತಹ ರೋಗದ ಲಕ್ಷಣ ಕಾಣಿಸಿಕೊಂಡಾಗ ಒಂದು ಬತ್ತು ಕಾಫಿ ಕಷಾಯ ಕೊಡುವುದರಿಂದ ತಾತ್ಕಾಲಿಕ ಪರಿಹಾರ ದೊರಕುವುದು, ಹೆರಿಗೆಗೆ ಮುಂಚೆ ಮತ್ತು ಹೆರಿಗೆಯ ನಂತರ ಒಂದು ಬಟ್ಟಲು ಕಾಫಿ ಕಷಾಯ ಸೇವಿಸುವುದರಿಂದ ನೆಮ್ಮದಿ ತೋರುವುದು.

ಮಾನಸಿಕ ಶ್ರಮದಿಂದ ಬಳಲಿರುವಾಗ ಕಾಫಿ ಸೇವಿಸದೇ ನರಗಳು ಉತ್ತೇಜನಗೊಳ್ಳುವುದರಿಂದ ನವ ಚೈತನ್ಯ ಉಂಟಾಗುವುದು, ಆದರೆ ಇದು ತಾತ್ಕಾಲಿಕ.

ಕಾಫಿ ಅತಿಯಾಗಿ ಸೇವಿಸುವುದರಿಂದ ನರಮಂಡಲ ದುರ್ಬಲವಾಗುವುದು, ಹೊಟ್ಟೆ ಹುಣ್ಣಾಗುವುದು, ಹಸಿವು ಮುಚ್ಚಿಹೋಗುವುದು, ರಕ್ತದ ಒತ್ತಡ ಹೆಚ್ಚುವುದು, ಹೃದಯದ ಬಡಿತ ಹೆಚ್ಚುವು, ನಿದ್ರಾ ಭಂಗವಾಗುವುದು, ಸಣ್ಣ ವಿಷಯಗಳನ್ನ ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳುವ ಸ್ವಭಾವ ಬೆಳೆದು ಕೊಳ್ಳುವುದು, ಅಧ್ಕ ಮೂತ್ರ ವಿಸರ್ಜನೆಯಾಗುವುದು.

ಆಗ್ಗಾಗೆ ತಲೆಶೂಲೆ ಬರುವುದು, ದೇಹ ಹೆಚ್ಚು ಬೆವರುವುದು, ಲೈಂಗಿಕ ಶಕ್ತಿ ಕುಂದುವುದು, ಅಂತ್ಯದಲ್ಲಿ ಹಿಸ್ಟೀರಿಯಾ ತಲೆದೋರುವುದು ಮತ್ತು ಆಯ್ಹ ಪ್ರಮಾಣ ಕಡಿಮೆಯಾಗುವುದು, ದಿನವಾಹಿ ೩ ಲೋಟಕ್ಕಿಂತ ಹೆಚ್ಚು ಕಾಫಿ ಸೇವಿದರೆ ಮೇಲೆ ಹೇಳಿದ ದುಷ್ಪರಿಣಾಮಗಳಿಗೆ ಅವಕಾಶ ನೀವೇ ಮಾಡಿ ಕೊಟ್ಟಂತೆ ಆಗುತ್ತದೆ.

ಕಾಫಿಯಲ್ಲಿ ಕೆಫೀನ್ ಎಂಬ ಸಾವಯವ ವಸ್ತುವಿದೆ, ಇದು ನರಮಂಡಲವನ್ನು ಪ್ರಚೋದಿಸುವ ಕಾರಣ ಕಾಫಿ ಸೇವಿಸಿದಾಗ ಒಂದು ಬಗೆಯ ಉತ್ತೇಜಕ ಪರಿಣಾಮ ಉಂಟಾಗುವುದು, ಇನ್ನು ಮಕ್ಕಳಿಗೆ ಕಾಫಿ ಕೊಡುವುದರಿಂದ ಅವರ ಬೆಳವಣಿಗೆ ಕುಂಠಿತವಾಗುವುದು, ಆದ್ದರಿಂದ ಮಕ್ಕಳಿಗೆ ಕಾಫಿ ಅಭ್ಯಾಸ ಮಾಡಿಸದೇ ಇರುವುದೇ ಲೇಸು, ಜಠರ ಮತ್ತು ಕರಳುಗಳಿಗೆ ಸಂಭಂದಿಸಿದ ರೋಗಗಳಲ್ಲಿ ಕಾಫಿ ಸೇವಿಸುವುದು ಸರಿಯಲ್ಲ.

Comments are closed.