ಕರಾವಳಿ

`Say No To Drugs’- ವಿದ್ಯಾರ್ಥಿಗಳೇ, ಮಾದಕ ವ್ಯಸನ & ಜಾಗೃತಿ ಕುರಿತ ಕಿರುಚಿತ್ರವನ್ನು ನೀವು ಮಾಡಿ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾ ಪೋಲಿಸ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಅಗಸ್ಟ್ ಮತ್ತು ಸಪ್ಟೆಂಬರ್ ತಿಂಗಳಿನಲ್ಲಿ ಮಾದಕ ವ್ಯಸನ ವಿರೋಧಿ ಮಾಸಾಚಾರಣೆ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು ಇದರ ಪ್ರಯುಕ್ತ ಪಿಯುಸಿ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕಿರುಚಿತ್ರ ರಚನೆ (Short Movie Clipping Contest) ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಜಿಲ್ಲೆಯ ಪ್ರತಿಯೊಂದು ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸುವುದರೊಂದಿಗೆ ವಿದ್ಯಾರ್ಥಿ ಸಮುದಾಯದಲ್ಲಿ ಮಾದಕ ವ್ಯಸನದ ದುಷ್ಪರಿಣಾಮವನ್ನು ತಿಳಿಹೇಳುವ ಉತ್ತಮ ಕೆಲಸದಲ್ಲಿ ಕೈಜೋಡಿಸುವಂತೆ ಕೋರಲಾಗಿದೆ.

ಸ್ಪರ್ಧೆಯ ನಿಯಮಗಳು ಈ ರೀತಿ ಇವೆ
೧. ಕಿರುಚಿತ್ರ ಸ್ಪರ್ಧೆಗೆ ಒದಗಿಸುವ ಚಿತ್ರವು ಗರಿಷ್ಠ 5 ನಿಮಿಷಕ್ಕೆ ಸೀಮಿತವಾಗಿರಬೇಕು, ಗರಿಷ್ಠ ಸಮಯ ಮೀರಲು ಅವಕಾಶವಿಲ್ಲ
೨. ಕಿರುಚಿತ್ರವನ್ನು ಮೊಬೈಲ್ ಮೂಲಕ ಚಿತ್ರೀಕರಣ ಮಾಡಲು ಅವಕಾಶವಿದ್ದು, ಮೊಬೈಲ್ ತಂತ್ರಜ್ಞಾನದ ಸಂಪೂರ್ಣ ಉಪಯೋಗ ಪಡೆಯಬಹುದು.
೩. ವಿದ್ಯಾರ್ಥಿಗಳು ನಿರ್ಮಿಸುವ ಕಿರುಚಿತ್ರವು ಈ ಮೊದಲು ಎಲ್ಲಿಯೂ ಕೂಡ ಪ್ರದರ್ಶನಗೊಂಡಿರಬಾರದು ಮತ್ತು ಯಾವುದೇ ಬೇರೆ ಕಿರುಚಿತ್ರದ ನಕಲು ಕೂಡ ಆಗಿರಬಾರದು. ಕಥೆ, ಸಂಭಾಷಣೆ ಸಂಪೂರ್ಣ ಸ್ವಂತಿಕೆಯಿಂದ ಕೂಡಿರಬೇಕು.
೪. ಕಿರುಚಿತ್ರ ಸ್ಪರ್ಧೆಯು ಪಿಯುಸಿ ಮತ್ತು ಪದವಿ ಕಾಲೇಜುಗಳಿಗೆ ಪ್ರತ್ಯೇಕ ವಿಭಾಗದಲ್ಲಿ ನಡೆಯಲಿದ್ದು ಒಂದು ಕಾಲೇಜಿನಿಂದ ಎರಡು ಕಿರುಚಿತ್ರಗಳನ್ನು ಸ್ಪರ್ಧೆಗೆ ನೀಡಲು ಅವಕಾಶವಿದೆ. ಚಿತ್ರದಲ್ಲಿ ಹೆಚ್ಚಿನ ವಿದ್ಯಾರ್ಥಿಗಳ ಭಾಗವಹಿಸುವಿಕೆ ಇದ್ದರೆ ಉತ್ತಮ.
೫. ವಿದ್ಯಾರ್ಥಿಗಳು ನಿರ್ಮಿಸುವ ಕಿರುಚಿತ್ರ ಸಂಪೂರ್ಣ ಮಾದಕ ವ್ಯಸನದ ಪರಿಣಾಮ ಮತ್ತು ಜಾಗೃತಿಯ ವಿಚಾರವನ್ನು ಹೊಂದಿರಬೇಕು. ವಿಷಯಾಂತರದ ಕಿರುಚಿತ್ರ ಗಣನೆಗೆ ತೆಗೆದುಕೊಳ್ಳುವುದಿಲ್ಲ.
೬. ವಿದ್ಯಾರ್ಥಿಗಳು ನಿರ್ಮಿಸಿದ ಕಿರುಚಿತ್ರವು ಸಪ್ಟೆಂಬರ್ 15ರ ಒಳಗೆ ಸಂಘಟಕರಿಗೆ ತಲುಪಿಸುವುದು ಕಡ್ಡಾಯವಾಗಿದೆ.
೭. ವಿದ್ಯಾರ್ಥಿಗಳು ಕಿರುಚಿತ್ರವನ್ನು ಈಮೇಯ್ಲ್ (udupinodrugs@gmail.com) ಮೂಲಕ ಕಳುಹಿಸಬೇಕು ಮತ್ತು ಒಂದು ಸೆಟ್ಟ್ ಡಿವಿಡಿ ಅಥವಾ ಸಿಡಿಯ ಮೂಲಕ ಸಂಚಾಲಕರು, ಉಡುಪಿ ಪ್ರೆಸ್ ಕ್ಲಬ್, ಪತ್ರಿಕಾ ಭವನ, ಕಾಂಗ್ರೆಸ್ ಭವನದ ಬಳಿ, ಬ್ರಹ್ಮಗಿರಿ ಉಡುಪಿ-576101 ಇಲ್ಲಿಗೆ ಪೋಸ್ಟ್, ಕೊರಿಯರ್ ಅಥವಾ ಮುಖತಃ ತಲುಪಿಸಬಹುದು.
೮. ಸ್ಪರ್ಧೆಗೆ ಕಳುಹಿಸುವ ಚಿತ್ರದ ಜೊತೆಗೆ ಕಾಲೇಜಿನ ಪ್ರಾಂಶುಪಾಲರ ಧೃಡೀಕರಣ ಪತ್ರ, ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ಅಪೂರ್ಣವಿರುವ ಪ್ರವೇಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
೯. ಸ್ಪರ್ಧೆಯಲ್ಲಿ ಆಯ್ಕೆಗೊಂಡ ಚಿತ್ರಗಳನ್ನು ಸ್ಥಳೀಯ ವಾಹಿನಿಗಳಲ್ಲಿ ಪ್ರದರ್ಶಿಸಲಾಗುವುದು
೧೦. ಪಿಯುಸಿ ಮತ್ತು ಪದವಿ ವಿಭಾಗದಲ್ಲಿ ಪ್ರತ್ಯೇಕವಾಗಿ ಪ್ರಥಮ, ದ್ವಿತೀಯ, ತೃತೀಯ ಮತ್ತು ೨ ಸಮಾಧಾನಕರ ಬಹುಮಾನಗಳನ್ನು ವಿಜೇತ ಚಿತ್ರಗಳಿಗೆ ನೀಡಲಾಗುವುದು.
೧೧. ಸ್ಪರ್ಧೆಯ ವಿಜೇತರ ಆಯ್ಕೆಗೆ ಪ್ರತ್ಯೇಕ ತೀರ್ಪುಗಾರರ ಸಮಿತಿ ಇದ್ದು ಅವರ ತೀರ್ಮಾನವೇ ಅ ಂತಿಮವಾಗಿರುತ್ತದೆ.
೧೨. ಸ್ಪರ್ಧೆಗೆ ಕಳುಹಿಸಿದ ಕಿರುಚಿತ್ರ ಸ್ಪರ್ಧೆಯ ತೀರ್ಪು ಪ್ರಕಟವಾಗುವ ತನಕ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವಂತಿಲ್ಲ.
೧೩. ಸ್ಪರ್ಧೆಯ ಕುರಿತು ಯಾವುದೇ ರೀತಿಯ ಸಂದೇಹಗಳಿದ್ದಲ್ಲಿ ನಾಗರಾಜ್ ರಾವ್ 9972544733, ಪ್ರಸನ್ನ ಕೊಡವೂರು – 9449293214, ಸೂರಜ್ – 9844998133 ಇವರುಗಳನ್ನು ಸಂಪರ್ಕಿಸಬಹುದು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ- ಲಕ್ಷಣ್ ಬಿ. ನಿಂಬರಗಿ

ಅಧ್ಯಕ್ಷರು, ಕಾ.ನಿ.ಪತ್ರಕರ್ತರ ಸಂಘ -ಗಣೇಶ್ ಪ್ರಸಾದ ಪಾಂಡೇಲು & ಸಂಚಾಲಕರು, ಪ್ರೆಸ್ ಕ್ಲಬ್- ನಾಗರಾಜ್ ರಾವ್

Comments are closed.