ಕರಾವಳಿ

ಡಾರ್ಕ್ ಸರ್ಕಲ್ ಸಮಸ್ಯೆ ನಿವಾರಣೆಗೆ ಬ್ರಹ್ಮ ವಿದ್ಯೆಯೇನೂ ಬೇಡ …!

Pinterest LinkedIn Tumblr

ನಮ್ಮಲ್ಲಿ ಶೇಕಡಾ ೫೦ ರಷ್ಟು ಜನಕ್ಕೆ ಡಾರ್ಕ್ ಸರ್ಕಲ್ ಸಮಸ್ಯೆ ಇರುತ್ತದೆ . ತಡರಾತ್ರಿಯವರೆಗೂ ಎದ್ದಿರುವುದು , ಕೆಲಸ ಮಾಡುವುದರ ಕೊಡುಗೆಯೇ ಈ ಡಾರ್ಕ್ ಸರ್ಕಲ್ಸ್ .
ಇದರಿಂದ ತೊಂದರೆ ಏನಿಲ್ಲವಾದರೂ ಸಹ ನಮ್ಮ ಮುಖದ ಕಾಂತಿಯನ್ನು ಕಮ್ಮಿ ಮಾಡುತ್ತದೆ . ಇದನ್ನ ವಾಸಿ ಮಾಡಲು ಬ್ರಹ್ಮ ವಿದ್ಯೆಯೇನೂ ಬೇಡ .

ಇಲ್ಲಿದೆ ನೋಡಿ ನಿಮಗಾಗಿ ಸರಳ ಪರಿಹಾರಗಳು .

೧ . ದಿನಕ್ಕೆ ಕನಿಷ್ಠ ೧೦ ಲೋಟ ನೀರು ಕುಡಿಯಿರಿ
೨ .ಒಂದು ಸ್ಟೀಲ್ ಚಮಚವನ್ನು ರಾತ್ರಿ ಫ್ರೀಜರ್ ನಲ್ಲಿ ಇರಿಸಿ , ನಂತರ ಏಳುವ ಸಮಯಕೆ ಅದನ್ನು ಕಣ್ಣಿನ ಮೇಲೆ ಇರಿಸಿ
೩ ತಣ್ಣಗಿರುವ ಟೀ ಬ್ಯಾಗ್ ಗಳನ್ನು ಅಥವಾ ಟೀ ಎಲೆಗಳನ್ನು ಕಣ್ಣಿನ ಮೇಲೆ ಹಚ್ಚಿರಿ
೪ . ಸೌತೆಕಾಯಿ ಅಥವಾ ಆಲೂಗಡ್ಡೆಯ ತುಂಡನ್ನು ಕಣ್ಣಿನ ಮೇಲೆ ೧೦ ನಿಮಿಷ ಇರಿಸಿ
೫ .ಟೊಮೇಟೊ ರಸ , ನಿಂಬೆಹಣ್ಣಿನ ರಸ , ಅರಿಶಿನ ಹಾಗು ಸ್ವಲ್ಪ ಅಕ್ಕಿ ಹಿಟ್ಟಿನ ಮಿಶ್ರಣವನ್ನು ತಯಾರಿಸಿ , ಕಣ್ಣಿನ ಕೆಳಗೆ ಹಚ್ಚಿ , ೧೫ ನಿಮಿಷದ ನಂತರ ತೆಗೆಯಿರಿ
೬ .ದಿನಕ್ಕೆ ಕನಿಷ್ಠ ೮ ಗಂಟೆ ನಿದ್ದೆ ಮಾಡಿ
೭ .ಆದಷ್ಟು ಕೆಫೀನ್ ( ಕಾಫಿ ) ಸ್ವೀಕಾರವನ್ನು ನಿಯಂತ್ರಿಸಿ
೮. ಬಿಸಿಲಿಗೆ ಹೋಗುವ ಮುಂಚೆ ಸನ್ಸ್ಕ್ರೀನ್ ಬಳಸಿ

Comments are closed.