ಕರಾವಳಿ

ಮಕ್ಕಳ ವಾಕ್ ಶಕ್ತಿ, ಬುದ್ಧಿಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಗಿಸಲು ಸಹಾಯಕ ಈ ಚಿರಪರಿಚಿತ ಮೂಲಿಕೆ…

Pinterest LinkedIn Tumblr

ಮಕ್ಕಳ ಬೇರು, ತಾಯಿಬೇರು, ನರೋಬೇರು, ಬಜೆಗಡ್ಡೆಯಲ್ಲಿ ಒಂದು ರೀತಿಯ ಸುವಾಸನೆ ಇರುವುದರಿಂದ ನಾರುವ ಬೇರು ಎಂತಲೂ ಕನ್ನಡದಲ್ಲಿ ಕರೆಯುತ್ತಾರೆ. ಇದು ದೇಹಕ್ಕೆ ತುಂಬಾ ತಂಪು.ಇದು ನೀರಿನಾಸರೆ ಇರುವ ಕಡೆ ಬೆಳೆಯುವ ಸಸಿ. ನಮ್ಮ ಜಿಲ್ಲೆಯ ತುಮಕೂರು, ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಗದ್ದೆಗಳಲ್ಲಿ ಬೆಳೆಸುತ್ತಾರೆ. ಎಲೆಗಳು ಹಸಿರು ಮತ್ತು ಉದ್ದವಾಗಿದ್ದು ಚಿಕ್ಕ ಕಬ್ಬಿಣ ಪತ್ರಗಳನ್ನು ಹೋಲುತ್ತವೆ, ಬಢರುಗಳು ಗಂಟು ಗಂಟಾಗಿ ಉದ್ದವಾಗಿರುವುವು. ಬೇರುಗಳ ಮೇಲೆ ಮಾಸಲು ಬಣ್ಣದ ರೋಮಗಳಿರುವುವು, ಬೇರುಗಳಿಗೆ ಸುವಾಸನೆಯಿರುವುದು. ರುಚಿ ಖಾರವಾಗಿರುವಿದು. ಹೊಗಳು ಸಣ್ಣ ಸಣ್ಣದಾಗಿದ್ದು ತಿಳಿ ಹಸಿರಾಗಿರುವುವು. ಗ್ರಾಮವಾಸಿಗಳಿಗೆ, ಅಜ್ಜಿಯಂದಿಯರಿಗೆ ಚಿರಪರಿಚಿತ ಮೂಲಿಕೆ, ಸಣ್ಣ ಮಕ್ಕಳಿರುವ ಪ್ರತಿ ಮನೆಯಲ್ಲೂ ಬಜೆ ಇದ್ದೇ ಇರುತ್ತದೆ. ಬಜೆಗಿಡದ ಕಂದುಗಳನ್ನು ಕತ್ತರಿಸಿ ತುಂಡು ಮಾಡಿ ಒಣಗಿಸಿ ಮಾರಾಟ ಮಾಡಲಾಗುತ್ತದೆ. ಈ ಕಂದುವೇ ಔಷಧಿಗೆ ಮುಖ್ಯ.

ಮನೆಮದ್ದಾಗಿ ಬಜೆ ಉಪಯೋಗ
೧. ಬಜೆಯನ್ನು ಸುಟ್ಟು ಭಸ್ಮವನ್ನು ಮಾಡಿ, ಅರ್ಧ ಚಮಚ ಭಸ್ಮಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ದಿವಸಕ್ಕೆ2.3 ವೇಳೆ ತಿನ್ನುವುದರಿಂದ ನೆಗಡಿ, ಕೆಮ್ಮು ಕಡಿಮೆಯಾಗುತ್ತದೆ.
೨. ಬಜೆಯನ್ನು ತೇಯ್ದು ತುಪ್ಪದೊಡನೆ ಕಲಸಿ ಮಕ್ಕಳಿಗೆ ತಿನ್ನಿಸುವುದರಿಂದ ವಾಕ್ ಶಕ್ತಿ, ಬುದ್ಧಿಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
೩. ಬಟ್ಟೆಯಲ್ಲಿ ಶೋಧಿಸಿದ ಬಜೆಯ ಚೂರ್ಣ 10ಗ್ರಾಂನಷ್ಟನ್ನು ದಿವಸಕ್ಕೊಮ್ಮೆ ಬೆಳಗ್ಗೆ ಬಿಸಿ ನೀರಿನಲ್ಲಿ ಅಥವಾ ಜೇನಿನಲ್ಲಾಗಲೀ ಇಟ್ಟು 40 ದಿನ ಸೇವಿಸಿದರೆ ಮೂರ್ಛೆ ಗುಣವಾಗುತ್ತದೆ.
೪. ಬಜೆಯನ್ನು ಅರೆದು ಲೇಪಿಸುವುದರಿಂದ, ಸಂಧಿವಾತ ಮತ್ತು ಲಕ್ವ ಗುಣವಾಗುತ್ತದೆ.
೫. ಹಸಿ ಬಜೆಯ ರಸವನ್ನು ಕಿವಿಗೆ ಹಿಂಡುವುದರಿಂದ ಕಿವಿನೋವು ಕಡಿಮೆಯಾಗುತ್ತದೆ.
೬. ಬಜೆ, ನಾಗಕೇಸರಿ, ಹಿಪ್ಪಲಿ ಬೇರಿನ ಚೂರ್ಣಗಳನ್ನು ಸೇರಿಸಿ ಸೇವಿಸಿದರೆ ಸುಖ ಪ್ರಸವವಾಗುತ್ತದೆ.
೭. ಬಜೆ ಸೇವಿಸುವುದರಿಂದ ಜಂತುಹುಳುಗಳು ನಾಶವಾಗುತ್ತವೆ.
೮. ಬಜೆಯ ಕಷಾಯ ಸೇವನೆಯಿಂದ ಮೂತ್ರಕೋಶದ ಕಲ್ಲು ಕರಗಿ ಹೋಗುತ್ತದೆ. ಮೂತ್ರ ಬಂಧವೂ ನಿವಾರಣೆಯಾಗುತ್ತದೆ.
೯. ಮಕ್ಕಳಲ್ಲಿ ಹಲ್ಲು ಹುಟ್ಟುವಾಗ ಜ್ವರ ಕಾಣಿಸಿಕೊಂಡಲ್ಲಿ ಬಜೆಯನ್ನು ಅರೆದು ತಿನ್ನಿಸುವುದರಿಂದ ಜ್ವರ ವಾಸಿಯಾಗುತ್ತದೆ.
೧೦. ಬಜೆ ಮತ್ತು ಸೈಂಧಲವಣ ಇವೆರಡನ್ನು ನೀರಿನೊಡನೆ ಕುಡಿಯುವುದರಿಂದ ಕಫ ವಾಂತಿಯಾಗಿ ಕೆಮ್ಮು ಶಮನವಾಗುತ್ತದೆ.
೧೧. ಬಜೆಯ ಗಂಧ ತಯಾರಿಸಿ ಸೇವಿಸುವುದರಿಂದ ಅಜೀರ್ಣ, ಹೊಟ್ಟೆನೋವು ಮತ್ತು ಮೂಲವ್ಯಾಧಿ ಗುಣವಾಗುತ್ತದೆ.
೧೨. ಒಂದು ತಿಂಗಳಿಂದ ಆರು ತಿಂಗಳ ಮಕ್ಕಳಲ್ಲಿ ಭೇದಿಯಾಗುತ್ತಿದ್ದಲ್ಲಿ ಹಾಗೂ ಹೊಟ್ಟೆ ಉಬ್ಬರವಿದ್ದಲ್ಲಿ ಬಜೆಪುಡಿಯನ್ನು ಹರಳೆಣ್ಣೆಯಲ್ಲಿ ಬೆರೆಸಿ ಹೊಟ್ಟೆಯ ಮೇಲೆ ಲೇಪಿಸಬೇಕು.
೧೩. ಮಲೆನಾಡ ಮನೆಗಳಲ್ಲಿ ಮಗು ಹುಟ್ಟಿದ ಹಲವು ತಿಂಗಳವರೆಗೆ ಕೆಲವು ದಿನಗಳಿಗೊಮ್ಮೆ ಬಜೆ ಬೇರು ತೇಯ್ದು ನೆಕ್ಕಿಸುತ್ತಾರೆ. ಮಾತು ಶುದ್ಧವಾಗಲಿ ಅನ್ನುವ ಕಾರಣಕ್ಕೆ. ಈ ಬೇರನ್ನು ಬಳಸಲಾಗುತ್ತದೆ.
೧೪. ಬಜೆಯನ್ನು ಬೆಂಕಿಯಲ್ಲಿ ಸುಟ್ಟು , ಪುಡಿ ಮಾಡಿ. 1ಚಿಟಿಕೆ ಪುಡಿಗೆ ತಾಯಿಯ ಎದೆಹಾಲನ್ನು ಬೆರೆಸಿ ಮಗುವಿಗೆ ಕುಡಿಸಿದರೆ ಹೊಟ್ಟೆ ಉಬ್ಬರ , ಹಾಲು ಕುಡಿಯದೇ ಇರುವುದು , ಅಜೀರ್ಣ ಕಡಿಮೆಯಾಗುತ್ತದೆ

Comments are closed.