ಮಂಗಳೂರು : ನಗರದ ಸಂತ ಆಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯ 44 ವಿದ್ಯಾರ್ಥಿಗಳು ಮುಂಡಗೋಡುವಿನ ಜೆಸ್ವಿಟ್ ಸಂಸ್ಥೆಗಳು ನಡೆಸುವ ಶಾಲೆ ಹಾಗೂ ಹಾಸ್ಟೆಲ್‌ಗಳ ಮಕ್ಕಳು ಹಾಗೂ ಪರಿಸರದ ಜೊತೆ ಹೊಂದಿಕೊಂಡು ವಿಚಾರ ವಿನಿಮಯ ನಡೆಸಲು ಇತ್ತೀಚೆಗೆ ಗ್ರಾಮೀಣ ದರ್ಶನ ನಡೆಸಿದರು.
ತಂಡವು ನಾಲ್ವರು ಶಿಕ್ಷಕರೊಂದಿಗೆ ಮುಂಡಗೋಡಿಗೆ ಪ್ರಯಾಣ ಬೆಳೆಸಿತಲ್ಲದೆ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತು. ಮಕ್ಕಳ ಸ್ಥಿತಿಗತಿ, ಹೆತ್ತವರ ಬಗ್ಗೆ ವಿಚಾರಿಸಿಕೊಂಡು ದಾಖಲಿಸಿಕೊಂಡರು.
ಮುಂಡಗೋಡುವಿನಲ್ಲಿರುವ ಆಶ್ರಮ, ಅದರ ಸಾಧನೆಗಳ ಬಗ್ಗೆ ದೃಶ್ಯ ಶ್ರಾವ್ಯ ಮಾಧ್ಯಮದ ಮೂಲಕ ತಿಳಿದುಕೊಳ್ಳಲಾಯಿತು. ಬಡ ಮಕ್ಕಳ, ಹೆಣ್ಣು ಮಕ್ಕಳ ಹಿಂದುಳಿದ ಜನರ ಶಿಕ್ಷಣಕ್ಕಾಗಿ ಆರಂಭಿಸಿದ ವಿದ್ಯಾರ್ಥಿ ಕೇಂದ್ರಗಳಿಗೆ ಭೇಟಿ ನೀಡಲಾಯಿತು.
ಕಲ್ಕೇರಿ, ಬ್ಯಾನಳ್ಳಿ, ಮತ್ತಿತರ ಕಡೆ ಭೇಟಿ ನೀಡಿದ ತಂಡವು ಅಲ್ಲಿನ ವಿದ್ಯಾರ್ಥಿಗಳಿಗೆ ಮನೋರಂಜನೆ ಕಾರ್ಯಕ್ರಮ ನೀಡಿತು. ಬಳಿಕ ಹಳ್ಳಿಯ ಜನರ ಭೇಟಿ ಮಾಡಿ ಅವರೊಂದಿಗೆ ಮಾತುಕತಡೆ ನಡೆಸಿ ಮಕ್ಕಳಿಗೆ ಶಿಕ್ಷಣ ನೀಡುವಂತೆ ಪ್ರೇರೇಪಿಸಲಾಯಿತು.
ಟಿಬೇಟಿಯನ್ ದೇವಾಲಯಗಳಿಗೆ ಭೇಟಿ ನೀಡಲಾಯಿತು. ಬಡತನ ಹಾಗೂ ಅವಕಾಶಗಳ ಕೊರತೆಯಿದ್ದರೂ ಸಾಧಿಸಬೇಕೆಂಬ ಹಂಬಲ ಕಣ್ಣಲ್ಲಿ ಬಿಂಬಿತವಾಗುತ್ತಿದ್ದುದನ್ನು ಕಂಡು ಅವರಿಗೆ ಧೈರ್ಯ ತುಂಬಿದರು. ತಮ್ಮಲ್ಲಿದ್ದುದನ್ನು ಪ್ರೀತಿಯಿಂದ ಮಕ್ಕಳಿಗೆ ದಾನ ಮಾಡಿದರು. ರೆ.ಫಾ. ಫ್ರಾನ್ಸಿಸ್ ಮಿನೇಜಸ್ ತಂಡದ ನೇತೃತ್ವ ವಹಿಸಿದ್ದರು.
Comments are closed.