ಕರಾವಳಿ

ಈ ಸರಳ ಆಸನದ ಪ್ರಯೋಜನ ಬಲ್ಲಿರಾ…!

Pinterest LinkedIn Tumblr

ಸೂರ್ಯ ಮುದ್ರೆಸಾಮಾನ್ಯವಾಗಿ ಮುದ್ರೆಗಳು ಎಲ್ಲಿಬೇಕಾದರೂ ಮಾಡುವಂತಹ ಸರಳ ಆಸನ. ಅದರಲ್ಲಿ ಸೂರ್ಯ ಮುದ್ರೆಯೂ ಒಂದು. ಉಂಗುರದ ಬೆರಳಿನ ತುದಿಯನ್ನು ಹೆಬ್ಬೆರಳಿನ ಬುಡದಲ್ಲಿ ಇರಿಸಿ. ಹೆಬ್ಬೆರಳನ್ನು ಉಂಗುರ ಬೆರಳಿನ ಮೇಲೆ ಹಗುರವಾಗಿ ಒತ್ತಿ ಇಡಬೇಕು. ಉಳಿದ ಬೆರಳುಗಳು ನೇರವಾಗಿ ಇರಲಿ.

ಪ್ರಯೋಜನಗಳು:
ದೇಹದಲ್ಲಿರುವ ಅತಿಯಾದ ಕೊಬ್ಬನ್ನು ಕರಗಿಸಿ ದೇಹದ ತೂಕವನ್ನು ಸಮತೋಲನದಲ್ಲಿಡುತ್ತದೆ. ದೇಹದ ಉಷ್ಣತೆಯನ್ನು ಉಂಟುಮಾಡಿ ಜೀರ್ಣ ಕ್ರಿಯೆಯನ್ನು ಸುಗಮವಾಗಿಸುತ್ತದೆ.
ಮಧುಮೇಹ ಮತ್ತು ಪಿತ್ತಜನಕಾಂಗದ ಕಾಯಿಲೆಗಳಿಗೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.
ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಸಹ ಇಳಿಯುತ್ತದೆ.
ಕಫ, ಶೀತ, ಗಂಟಲು ಸಂಬಂಧಿ ಸಮಸ್ಯೆಗಳಿಗೆ ಸೂರ್ಯ ಮುದ್ರೆಯಿಂದ ಪರಿಹಾರ ದೊರೆಯುತ್ತದೆ.
ಮುದ್ರೆಯನ್ನು ಸುಮಾರು 10-40 ನಿಮಿಷಗಳವರೆಗೂ ಮಾಡಬಹುದು.
ದೇಹದ ಉಷ್ಣತೆಯನ್ನು ಹೆಚ್ಚಿಸಿ, ಚಳಿಯ ಅನುಭವವನ್ನು ಕಡಿಮೆ ಮಾಡಿ ಉತ್ಸಾಹ, ಚೈತನ್ಯವನ್ನು ತುಂಬುತ್ತದೆ.
ಯಾವಾಗ ಶರೀರದ ತೊಂದರೆಗಳು ಕಡಿಮೆಯಾಗುತ್ತದೆಯೋ ಆಗ ಸೂರ್ಯ ಮುದ್ರೆ ಮಾಡುವುದನ್ನು ನಿಲ್ಲಿಸಬೇಕು.

Comments are closed.