ಕರಾವಳಿ

ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್‌ನಿಂದ “ನಮ್ಮ ಮಕ್ಕಳು ನಮ್ಮವರಾಗಲು” ಜಾಗೃತಿಗಾಗಿ ಬೈಕ್ ರ್‍ಯಾಲಿ

Pinterest LinkedIn Tumblr

ಉಳ್ಳಾಲ : ಊರಿನ ಸ್ಥಳೀಯ ಸಂಘ ಸಂಸ್ಥೆಗಳು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದಾಗ ನಮ್ಮ ಊರಿನ ಸಮಸ್ಯೆಗಳಿಗೆ ನಾವೇ ಪರಹಾರ ಕಾಣಬಹುದು ಎಂದು ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಗುರುವಪ್ಪಕಾಂತ್ ಹೇಳಿದರು.

ಅವರು ಎಸ್ಸೆಸ್ಸೆಫ್ ರಾಜ್ಯಾದಂತಹ ಹಮ್ಮಿಕೊಂಡ “ನಮ್ಮ ಮಕ್ಕಳು ನಮ್ಮವರಾಗಲು” ಎಂಬ ಧೈಯ ವಾಕ್ಯದೊಂದಿಗೆ ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ವತಿಯಿಂದ ಜಾಗೃತಿ ಮೂಡಿಸುವ ಬೈಕ್ ರ್‍ಯಾಲಿಯನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳನ್ನು ತಂದೆ ತಾಯಿ ನಿಯಂತ್ರಣದಲ್ಲಿ ಇಟ್ಟಾಗ ನಮ್ಮ ಮಕ್ಕಳನ್ನು ನಾವೇ ದುಷ್ಟ ಕೃತ್ಯಗಳಿಂದ ಕಾಪಾಡಬಹುದು. ಮಕ್ಕಳನ್ನು ತಂದೆ ತಾಯಿಯಂದಿರು ನಿರ್ಲಕ್ಷ ವಹಿಸಿದಾಗ ಮಕ್ಕಳು ಅಡ್ಡ ದಾರಿ ಹಿಡಿದು ತನ್ನ ಬದುಕನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.

ಎಸ್ಸೆಸ್ಸೆಫ್ ರಾಜ್ಯ ನಾಯಕ ಯಕೂಬ್ ಸ‌ಅದಿ ನಾವೂರು ಮಾತನಾಡಿ ಭಾರತ ದೇಶದ ಭವಿಷ್ಯ ಉತ್ತಮವಾಗಬೇಕಾದರೆ ಯುವ ಸಮೂಹ ಮಧ್ಯವೆಸನದಿಂದ ದೂರವಿದ್ದು ಶಾಲಾ ವಿದ್ಯಾಭ್ಯಾಸದಜೊತೆಗೆ ಬದುಕಿನ ಮೌಲ್ಯ ತಿಳಿಸುವ ವಿದ್ಯೆ ನೀಡಿದಾಗ ಮಾತ್ರ ಭಾರತ ದೇಶ ಮುಂದೆ ಉತ್ತಮ ದೇಶವಾಗಿ ಉಳಿಯಲು ಸಾಧ್ಯ. ಹೊರತು ಮಕ್ಕಳ ಅಕ್ರಮ ಸಾಗಾಟ, ಅಪಹರಣ ಅಪ್ರಾಪ್ತರ ಮೇಲೆ ಅತ್ಯಾಚಾರ ನಡೆದರೆ ದೇಶದ ಭವಿಷ್ಯ ಹೇಗೆ ಇರಬಹುದು ಎಂಬುದನ್ನು ಒಮ್ಮೆ ಯೋಚಿಸಿ ಎಂದು ಹೇಳಿದರು.

ಸಿ.ಟಿ.ಎಂ ಸಲಾಂ ತಂಙಳ್ ದು‌ಅ ನೇರವೆರಿಸಿ ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು.ಎಸ್ಸೆಸ್ಸೆಫ್ ಉಪ್ಪಿನಂಗಡಿ ಪ್ರ.ಕಾರ್ಯದರ್ಶಿ ಮಹ್‌ರೂಫ್ ಅತೂರು ದಿಕ್ಸೂಚಿ ಭಾಷಣ ಮಾಡಿದರು.

ಎಸ್‌ವೈ‌ಎಸ್ ದ.ಕ ಜಿಲ್ಲಾಧ್ಯಕ್ಷ ಮುಹಮ್ಮದಾಲಿ ಸಖಾಫಿ ಸುರಿಬೈಲ್, ನಾಸೀರ್ ಅಜ್ಜಿನಡ್ಕ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಸನ್‌ನ ಮುಸ್ತಾಫ ಝುಹುರಿ, ತಲಪಾಡಿ ಸಕ್ಟರ್‌ನ ರಹೀಂ ಝುಹುರಿ, ಎಸ್‌ಜೆ‌ಎಂ ತಲಪಾಡಿ ರೇಂಜ್ ಅಧ್ಯಕ್ಷ ಅಬ್ದುಲ್ಲಾ ಮದನಿ ಕೋಮರಂಗಳ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಸನ್ ಪ್ರ.ಕಾರ್ಯದರ್ಶಿ ಹಮೀದ್ ತಲಪಾಡಿ, ಉಳ್ಳಾಲ ಡಿವಿಸನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೋಳಿಕೆ, ಸುನ್ನೀ ಕೊಡಿನೇಶನ್ ತಲಪಾಡಿ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಬಿ.ಎಚ್, ಎಸ್‌ವೈ‌ಎಸ್ ಕೆಸಿ ರೋಡು ಸೆಂಟರ್ ಪ್ರ.ಕಾರ್ಯದರ್ಶಿ ಫಾರೂಕ್ ಬಟ್ಟಪ್ಪಾಡಿ,ಕೋಶಾಧಿಕಾರಿ ಉಸ್ಮಾನ್ ಪಳ್ಳ, ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಇಸ್ಮಾಯಿಲ್ ಕೆ.ಸಿ ನಗರ, ರ್‍ಯಾಲಿಯ‌ಉಸ್ತುವಾರಿ ಹಕೀಂ ಪೂಮನ್, ಸಿರಾಜ್ ಎ.ಎಚ್,ಇಬ್ರಾಹೀಂ ಟಿ.ಕೆ,ತಲಪಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಸತ್ತಾರ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಸನ್ ಜೊತೆ ಕಾರ್ಯದರ್ಶಿ ಸಿದ್ದೀಕ್ ಕೊಮರಂಗಳ ಉಪಸ್ಥಿತರಿದರು.

ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಪ್ರ.ಕಾರ್ಯದರ್ಶಿ ಅನ್ವೀಝ್ ಸ್ವಾಗತಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಸನ್ ಜೊತೆ ಕಾರ್ಯದರ್ಶಿ ಸಿಯಾಬ್ ಕೆ.ಸಿ ರೋಡು ವಂದಿಸಿದರು.

Comments are closed.