ಕರಾವಳಿ

ಚಂದ್ರಗ್ರಹಣ ಹಿನ್ನೆಲೆ : ಬೋಳಾರ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ “ಗ್ರಹಣ ಶಾಂತಿ ಹೋಮ” – ವಿವಿಧ ದೇವಸ್ಥಾನಗಳಲ್ಲಿ ಪೂಜೆಯಲ್ಲಿ ವ್ಯತ್ಯಯ

Pinterest LinkedIn Tumblr

ಮಂಗಳೂರು, ಜುಲೈ 27: ಶತಮಾನದ ಅತೀ ದೀರ್ಘ ಚಂದ್ರ ಗ್ರಹಣ ಇಂದು ಸಂಭವಿಸಲಿದ್ದು, ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಂಗಳೂರಿನ ಬೋಳಾರ ಹಳೇ ಕೋಟೆ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಇಂದು ರಾತ್ರಿ ಗ್ರಹಣ ಸಂಭವಿಸುವ ಸಮಯದಲ್ಲಿ “ಗ್ರಹಣ ಶಾಂತಿ ಹೋಮ” ನಡೆಯಲಿರುವುದು. ಭಕ್ತಾಧಿಗಳು ಇದರ ಸದುಪಯೋಗ ಪಡೆದುಕೊಳ್ಳ ಬಹುದು ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಇಂದು ರಾತ್ರಿ 11.54ಕ್ಕೆ ಚಂದ್ರಗ್ರಹಣವು ಆರಂಭವಾಗಲ್ಲಿದ್ದು ಮಧ್ಯರಾತ್ರಿ 1 ಗಂಟೆಯಿಂದ 2.43ರವರೆಗೆ ಸಂಪೂರ್ಣ ಗ್ರಹಣ ಗೋಚರಿಸಲಿದೆ. ಜು. 28 ಮುಂಜಾನೆ 3.49ಕ್ಕೆ ಗ್ರಹಣವು ಬಿಡಲಿದೆ. ಇದು ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣವಾಗಿದ್ದು, ಚಂದ್ರಗ್ರಹಣವು 27ರ ರಾತ್ರಿ 11:54 ರಿಂದ 28ರ ಬೆಳಿಗ್ಗೆ 3:55ರ ತನಕ ಇರುವುದು.ವಿಶೇಷವೆಂದರೆ ಇದೇ ದಿನವೇ ಗುರುಪೂರ್ಣಿಮೆ ಬಂದಿರುವುದು.

ಇನ್ನು ಈ ಚಂದ್ರಗ್ರಹಣವು ಶತಮಾನದ ಅತೀ ದೀರ್ಘ ಚಂದ್ರಗ್ರಹಣವೆಂದು ಹೇಳಲಾಗುತ್ತಿದೆ ಮತ್ತು ಈ ವೇಳೆ ಬ್ಲಡ್ ಮೂನ್ ಕಾಣಿಸಿಕೊಳ್ಳಲಿದೆ. ಇದು ತುಂಬಾ ಅಪರೂಪದ ವಿದ್ಯಮಾನ. ಜುಲೈ 27 ಮತ್ತು ಜುಲೈ 28ರ ರಾತ್ರಿಗಳಲ್ಲಿ ಬ್ಲಡ್ ಮೂನ್ ಕಾಣಿಸಿಕೊಳ್ಳಲಿದೆ. ಜುಲೈ 27ರಂದು ನಡೆಯಲಿರುವ ಚಂದ್ರಗ್ರಹಣವು ಸುಮಾರು ಒಂದು ಗಂಟೆ ಮತ್ತು 43 ನಿಮಿಷಗಳ ಕಾಲ ಸುದೀರ್ಘವಾಗಲಿದೆ.

ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆ ವರೆಗೆ ಸಂಭವಿಸುವ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಕರಾವಳಿಯ ವಿವಿಧ ದೇವಸ್ಥಾನಗಳಲ್ಲಿ ಪೂಜೆ, ಸೇವೆ, ಅನ್ನಸಂತರ್ಪಣೆ ವ್ಯತ್ಯಯಗೊಳ್ಳಲಿದೆ.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ, ಪೂಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅನ್ನ ಪೂರ್ಣ ಛತ್ರದಲ್ಲಿ ಸಂಜೆ 6.30ರಿಂದ 8ರ ವರೆಗೆ ಅನ್ನದಾನ ನಡೆಯಲಿದೆ.

ಕಟೀಲು ದೇವಸ್ಥಾನದಲ್ಲಿ ಅಪರಾಹ್ನ 2.50ರ ಅನಂತರ ಯಾವುದೇ ಸೇವೆ ಇರುವುದಿಲ್ಲ. ರಾತ್ರಿ ಪೂಜೆ ಮತ್ತು ಅನ್ನಪ್ರಸಾದ ಇರುವುದಿಲ್ಲ. ಆದರೆ ದೇವಸ್ಥಾನ ತೆರೆದಿದ್ದು, ಭಕ್ತರು ಭೇಟಿ ಕೊಡಬಹುದಾಗಿದೆ. ರಾತ್ರಿಯಿಂದ ಬೆಳಗ್ಗಿನ ತನಕ ಭಜನೆ ನಡೆಯಲಿದೆ. ಗ್ರಹಣ ಕಾಲದಲ್ಲಿ ದುರ್ಗೆಗೆ ಅಭಿಷೇಕ ನಡೆಯಲಿದೆ.

Comments are closed.